37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ರಬ್ಬರ್ ಬೆಳೆಗಾರರ ಸಮಸ್ಯೆ: ಕೇಂದ್ರ ಸರಕಾರಕ್ಕೆ ಹಕ್ಕೊತ್ತಾಯ ವರದಿ ಸಲ್ಲಿಕೆ

ರಬ್ಬರ್ ಬೆಳೆಗಾರರು ಎದುರಿಸುತ್ತಿರುವ ನಾನಾ ಸಮಸ್ಯೆಗಳನ್ನು ಪ್ರಕಾರದ ಗಮನಕ್ಕೆ ತರಲು ತಯಾರಿಸಲಾದ ಹಕ್ಕೊತ್ತಾಯ ವರದಿಯನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಮೂಲಕ ಕೇಂದ್ರ ಸರಕಾರಕ್ಕೆ ಗುರುವಾರ ಮಂಗಳೂರಿನಲ್ಲಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆ ಉಜಿರೆ ಇದರ ಮೂಲಕ ಸಲ್ಲಿಸಲಾದ ಈ ಹಕ್ಕೊತ್ತಾಯ ವರದಿಯನ್ನು ವೇದಿಕೆಯ ಕೋರಿಕೆಯಂತೆ ಅರ್ಥಶಾಸ್ತ್ರಜ್ಞ ಡಾ. ವಿಘ್ನೇಶ್ವರ ವರ್ಮುಡಿ ತಯಾರಿಸಿದ್ದಾರೆ.

ರಬ್ಬರ್ ಬೆಲೆಗೆ ಸ್ಥಿರತೆ ಇಲ್ಲದ ಕಾರಣ ಕೃಷಿಕರು ರಬ್ಬರ್ ಗಿಡಗಳನ್ನು ಕಡಿಯುತ್ತಿರುವ ಪರಿಸ್ಥಿತಿ ಉದ್ಭವಿಸಿದೆ. ಮುಂದೆ ಬೆಲೆ ಸ್ಥಿರತೆ ಬಂದರೆ ಮತ್ತೆ ಕೃಷಿ ಮಾಡುವುದು ಕಷ್ಟಸಾಧ್ಯ, ಟಾಪರ್ ಗಳ ಕೊರತೆ, ಸರಕಾರದ ಆಮದು ನೀತಿ ,ರಬ್ಬರ್ ಬೆಲೆ ಸ್ಥಿರೀಕರಣಕ್ಕೆ ಸರಕಾರ ಮುಂದಾಗದಿರುವುದು, ರಬ್ಬರ್ ಕೃಷಿಗೆ ಸರಕಾರದಲ್ಲಿ ಪ್ರತ್ಯೇಕ ಇಲಾಖೆ ಬೇಕು, ಹವಾಮಾನ ವೈಪರಿತ್ಯ ಇತ್ಯಾದಿಗಳ ಕುರಿತು ಸಂಸದರಲ್ಲಿ ಚರ್ಚಿಸಿ ಸರಕಾರದ ಗಮನಕ್ಕೆ ತರುವಂತೆ ಮನವಿ ಮಾಡಲಾಯಿತು.

ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಶ್ರೀಧರ ಜಿ.ಭಿಡೆ, ಸಲಹೆಗಾರ ಡಾ. ವಿಘ್ನೇಶ್ವರ ವರ್ಮುಡಿ ಉಪಾಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ಪ್ರಸಾದ್ ಕೌಶಲ್ ಶೆಟ್ಟಿ, ಗೋಪಾಲಕೃಷ್ಣ ಭಟ್, ಕೃಪಾ, ಸಂಯೋಜಕ ಅನಂತ ಭಟ್ ಎಂ., ಕಾರ್ಯದರ್ಶಿ ರಾಜು ಶೆಟ್ಟಿ ಉಪಸ್ಥಿತರಿದ್ದರು.

ರಬ್ಬರ್ ಕೃಷಿಕರ ಪರಿಸ್ಥಿತಿ ಕುರಿತು ಹಕ್ಕೊತ್ತಾಯ ವರದಿಯನ್ನು ಸಂಸದರ ಮೂಲಕ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರಲ್ಲಿ ಚರ್ಚಿಸಿ ವೇದಿಕೆಯ ಸದಸ್ಯರಿಗೆ ಭೇಟಿಯ ಅವಕಾಶ ಕಲ್ಪಿಸುವ ಕುರಿತು ಅವರು ಭರವಸೆ ನೀಡಿದ್ದಾರೆ. ಹಾಗೂ ಜನವರಿಯಲ್ಲಿ ಉಜಿರೆಯಲ್ಲಿ ನಡೆಯಲಿರುವ ರಾಜ್ಯಮಟ್ಟದ ರಬ್ಬರ್ ಬೆಳೆಗಾರರ ಸಮಾವೇಶದಲ್ಲಿ ಭಾಗವಹಿಸುವ ಕುರಿತು ತಿಳಿಸಿದ್ದಾರೆ ಎಂದು ವೇದಿಕೆ ಅಧ್ಯಕ್ಷ ಶ್ರೀಧರ ಜಿ.ಭಿಡೆ ಹೇಳಿದ್ದಾರೆ.

Related posts

ಮೊಗ್ರು: ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ಅಲೆಕ್ಕಿ -ಮುಗೇರಡ್ಕ, ಶ್ರೀರಾಮ ಶಿಶುಮಂದಿರದ ದ್ವಿತೀಯ ವರ್ಷದ ವಾರ್ಷಿಕೋತ್ಸವ ಮತ್ತು ಭಾರತ್ ಮಾತ ಪೂಜನ ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಣ್ಣಿನ ತಪಾಸಣಾ ಶಿಬಿರ

Suddi Udaya

ಉಜಿರೆ: ಹದಿಹರೆಯದ ವಿದ್ಯಾರ್ಥಿನಿಯರಿಗೆ ಆರೋಗ್ಯ ಮಾಹಿತಿ

Suddi Udaya

ಉಜಿರೆ; ಲಾರಿ ಬೈಕ್‌ ನಡುವೆ ಅಪಘಾತ; ಬೈಕ್‌ ಸವಾರ ಸಾವು

Suddi Udaya

ಮಹಿಳೆಯರ ಬಗ್ಗೆ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವಹೇಳನಕಾರಿ ಹೇಳಿಕೆ ಖಂಡನೀಯ : ಸುಧೀರ್ ಆರ್ ಸುವರ್ಣ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಕಾರ್ಯಕರ್ತರ ಸಭೆ

Suddi Udaya
error: Content is protected !!