March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯೊಂದಿಗೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ(ಕೇಂದ್ರ ಪಠ್ಯ ಆಧಾರಿತ) ಉಜಿರೆ ಇಲ್ಲಿನ ಸಹ ಪ್ರಾಧ್ಯಾಪಕರಾದ ಕಿರಣ್ ರಾಜ್ ಕೆ.ಆರ್ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ಕನ್ನಡನಾಡು ನುಡಿ ಸಂಸ್ಕೃತಿ, ಸಂಸ್ಕಾರ, ಕನ್ನಡದ ಏಕೀಕರಣ ಅದರ ಸವಾಲುಗಳು, ಕನ್ನಡ ರಾಜ್ಯೋತ್ಸವ ಆಚರಣೆಯ ಮಹತ್ವ ಇತ್ಯಾದಿ ವಿಚಾರವನ್ನು ಹಲವಾರು ಉದಾಹರಣೆಯೊಂದಿಗೆ ಹಾಡಿನೊಂದಿಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.

ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಕನ್ನಡ ನಾಡು ನುಡಿಯ ಅನಾವರಣಗೊಂಡಿತು. ನಂತರ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ಬಹುಮಾನವನ್ನು ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ.ವಿ ಇವರು ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಾಲಾ ವಿಧ್ಯಾರ್ಥಿನಿ ಕುಮಾರಿ ಆರಾಧ್ಯ ಜೈನ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಅತುಲ್ ಭಿಡೆ ವಂದನಾರ್ಪಣೆಗೈದರು. ಶಾಲಾ ಶಿಕ್ಷಕ ವೃಂದ ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು.

Related posts

ಮಚ್ಚಿನ: ಕೃಷಿಕ ಕೃಷ್ಣಪ್ಪ ಪೂಜಾರಿ ಹೃದಯಾಘಾತದಿಂದ ನಿಧನ

Suddi Udaya

ಮಾಳಿಗೆ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಶಾಸಕರಿಂದ ಆಗಿದೆಯೇ; ಅಳದಂಗಡಿ ಜನಸ್ಪಂದನ ಸಭೆಯಲ್ಲಿ ಶಾಸಕರಿಗೆ ಗ್ರಾಮಸ್ಥರ ಪ್ರಶ್ನೆ

Suddi Udaya

ಕುದ್ರೋಳಿ‌ ಕ್ಷೇತ್ರದ ನಿರ್ಮಾತೃ ಬಿ.ಜನಾರ್ಧನ ಪೂಜಾರಿಯವರನ್ನು ಭೇಟಿ ಮಾಡಿದ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ‌ ಸದಸ್ಯರು

Suddi Udaya

ಗುರಿಪಳ್ಳ: ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು

Suddi Udaya

ಬಂದಾರು: ಬಟ್ಲಡ್ಕ ಜುಮಾ ಮಸೀದಿಯಲ್ಲಿ ವಿಜೃಂಭಣೆಯ ಸ್ವಾತ್ರಂತ್ರ್ಯೋತ್ಸವ ಆಚರಣೆ

Suddi Udaya

ಮಚ್ಚಿನ: ಅಂಗನವಾಡಿ ಶಾಲಾ ಮಕ್ಕಳಿಗೆ ಭಜನೆ ಪುಸ್ತಕ ವಿತರಣೆ

Suddi Udaya
error: Content is protected !!