37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜಮೀಯ್ಯತುಲ್ ಪಲಾಹ್ ಬೆಳ್ತಂಗಡಿ ವತಿಯಿಂದ ಪ್ರತಿಭಾ ಪುರಸ್ಕಾರ, ರೂ. 3 ಲಕ್ಷ‌ ವಿದ್ಯಾರ್ಥಿವೇತನ ವಿತರಣೆ

ಬೆಳ್ತಂಗಡಿ: ವಿದ್ಯಾರ್ಥಿಯು ಕಲಿಕಾ ವೇಳೆಯಲ್ಲಿ ಪುಸ್ತಕ ಮತ್ತು ಬೋರ್ಡ್‌ನೆಡೆಗೆ ತೀಕ್ಷ್ಣವಾದ ಕಣ್ಣು, ಗ್ಯಾಹ್ಯವಾದ ಕಿವಿ ಮತ್ತು ಕೇಂದ್ರೀಕರಿಸುವ ಮಿದುಳಿನ ಮೂಲಕ ಪೂರ್ಣವಾಗಿ ಅರ್ಪಿಸಿಕೊಂಡು ಅಧ್ಯಯನ ಮಾಡಿದರೆ ಯಶಸ್ಸು ಖಂಡಿತಾ. ಆದ್ದರಿಂದ ಯಾವತ್ತೂ ಕೂಡ ಮೊಬೈಲ್ ಮೂಲಕ ರೀಲ್ಸ್‌ಗಳ ದಾಸರಾಗದೆ ಚೆನ್ನಾಗಿ ಓದಿ ರಿಯಲ್ ಹೀರೋಗಳಾಗಿ ಎಂದು ಖ್ಯಾತ ಸಂಪನ್ಮೂಲ ವ್ಯಕ್ತಿ, ಪುತ್ತೂರು ಕೊಂಬೆಟ್ಟು ಪ.ಪೂ ಕಾಲೇಜು ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಹೇಳಿದರು.

ಜಮೀಯ್ಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಮಾಹಿತಿ ಸಂಪನ್ಮೂಲ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದರು.

ಕಾರ್ಯಕ್ರಮದ ಆದ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಖಾಲಿದ್ ಪುಲಾಬೆ ವಹಿಸಿದ್ದು, ಸಿಕ್ಕಿದ ವಿದ್ಯಾರ್ಥಿ ವೇತನವನ್ನು ಶಿಕ್ಷಣದ ಉದ್ದೇಶಕ್ಕೇ ವ್ಯಯಿಸಿ ಎಂದರು.

ಮುಖ್ಯ ಅತಿಥಿಯಾಗಿ ಜಮ್ಯೀತುಲ್ ಪಲಾಹ್ ದ.ಕ. ಜಿಲ್ಲಾ ಅಧ್ಯಕ್ಷ ಅಶ್ಫಕ್ ಅಹಮದ್, ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ, ತಾ. ಘಟಕದ ಗೌರವಾಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಸಂದರ್ಭೋಚಿತವಾಗಿ ಮಾತನಾಡಿದರು.
ಪೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮುಹಮ್ಮದ್ ರಿಯಾಝ್ ಕೊಕ್ರಾಡಿ, ಕಾರ್ಯದರ್ಶಿ ಉಮರ್ ಅಹಮ್ಮದ್ ಬೆಳ್ತಂಗಡಿ ವೇದಿಕೆಯಲ್ಲಿದ್ದರು.

ಅಬ್ಬೋನು ಮದ್ದಡ್ಕ, ಅಕ್ಬರ್ ಬೆಳ್ತಂಗಡಿ, ಬಿ.ಶೇಖುಂಞಿ, ಉಮರ್ ಕುಂಞ್ಞ ನಾಡ್ಜೆ, ಯು.ಹೆಚ್ ಮುಹಮ್ಮದ್ ಉಜಿರೆ, ಕೆ. ಎಸ್ ಅಬೂಬಕ್ಕರ್, ಸಯ್ಯದ್ ಹಬೀಬ್ ಸಾಹೇಬ್, ಕೆ. ಎಸ್ ಅಬ್ದುಲ್ಲಾ, ಇಲ್ಯಾಸ್ ಕರಾಯ, ಅಬ್ದುಲ್ ರಝಾಕ್ ಡಿ.ಡಿ, ಸಯ್ಯದ್ ಎಸ್.ಎಂ ತಂಙಳ್ ಉಜಿರೆ, ಅಬ್ಬಾಸ್ ಮದ್ದಡ್ಕ, ಕಾಸಿಂ ಪದ್ಮುಂಜ, ಅಶ್ರಫ್ ಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ, ಕಾನೂನು ಪದವಿ ಪೂರ್ತಿಗೊಳಿಸಿದ ಪಡಂಗಡಿಯ ಇರ್ಫಾನ್ ಡಿ.ಡಿ ಅವರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್ – ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಐವರು ಸಮುದಾಯದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಒಟ್ಟು117 ವಿದ್ಯಾರ್ಥಿಗಳಿಗೆ 3 ಲಕ್ಷ ರೂ. ಶೈಕ್ಷಣಿಕ ನಿಧಿ‌ ಹಸ್ತಾಂತರಿಸಲಾಯಿತು.

ಅಬ್ದುಲ್ ಲತೀಫ್ ಸಾಹೇಬ್ ಕಿರಾಅತ್ ಪಠಿಸಿದರು. ಜೊತೆ ಕಾರ್ಯದರ್ಶಿ ಆಲಿಯಬ್ಬ ಪುಲಾಬೆ ಸ್ವಾಗತಿಸಿ ಪ್ರಸ್ತಾವನೆಗೈದರು.
ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.
ಕೋಶಾಧಿಕಾರಿ ಇಬ್ರಾಹಿಂ ಮುಸ್ಲಿಯಾರ್ ವಂದಿಸಿದರು.

Related posts

ಡಿ.17: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿ ಕಾಲೇಜಿನ ವಾರ್ಷಿಕ ದಿನಾಚರಣೆ

Suddi Udaya

ಶಕ್ತಿಶಾಲಿ ಭಾರತದ ಸಶಕ್ತ ಬಜೆಟ್ : ಹರೀಶ್ ಪೂಂಜ

Suddi Udaya

ಮೊಗ್ರು: ಶ್ರೀರಾಮ ಶಿಶು ಮಂದಿರದಲ್ಲಿ ವನಮಹೋತ್ಸವ

Suddi Udaya

ಪಡಂಗಡಿ ಶ್ರೀ ಸತ್ಯಸಾರಮಾನಿ ಕ್ಷೇತ್ರ ಸೇವಾ ಟ್ರಸ್ಟ್ ನ ಅಧ್ಯಕ್ಷರಾಗಿ ರಾಮು, ಕಾರ್ಯದರ್ಶಿಯಾಗಿ ಶಿವಾನಂದ ಆಯ್ಕೆ

Suddi Udaya

ಉಜಿರೆಯ ವ್ಯಾಯಾಮ್ ಮಲ್ಟಿ ಜಿಮ್ ನಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಕನ್ಯಾಡಿ: ಮತ್ತಿಲ ನಿವಾಸಿ ಶಿವರಾಜ್ ಆತ್ಮಹತ್ಯೆ

Suddi Udaya
error: Content is protected !!