September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ: ಅನುಗ್ರಹ ಕಾಲೇಜಿನಲ್ಲಿ ಕನ್ನಡ ಸಂವರ್ಧನೆ ಕಾರ್ಯಕ್ರಮ

ಉಜಿರೆ : ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಂಘದ ವತಿಯಿಂದ ಕನ್ನಡ ಸಂವರ್ಧನೆ ಕಾರ್ಯಕ್ರಮ ಕಾಲೇಜಿನ ಆಡಿಟೋರಿಯಮ್ ನಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ವಂ.ಫಾ.ವಿಜಯ್ ಲೋಬೋ ವಹಿಸಿ ಕನ್ನಡ ಭಾಷೆಯು ಸಮುದಾಯಗಳ ನಡುವೆ ಭಾಂದವ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿ ಶುಭ ಹಾರೈಹಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಸೇಕ್ರೇಡ್ ಹಾರ್ಟ್ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ವಸಂತ್ ಬಿ.ಶೆಟ್ಟಿ ಮಾತನಾಡಿ ಕನ್ನಡ ಭಾಷೆಯು ಶ್ರೀಮಂತ ಹಾಗೂ ಪ್ರಭುದ್ದ ಭಾಷೆ ವಿದ್ಯಾರ್ಥಿಗಳಾದ ತಾವು ಕನ್ನಡ ಕಾದಂಬರಿಗಳು, ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಬೇಕು. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ನಮ್ಮೆಲ್ಲರ ಕೊಡುಗೆ ಅಮೂಲ್ಯ ಎಂದು ಹೇಳಿದರು.

ಕನ್ನಡ ಸಂಘದ ನಿರ್ದೇಶಕರಾದ ಅರುಣ್ ಕಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವೇದಿಕೆಯಲ್ಲಿ ಕನ್ನಡ ಸಂಘದ ಕಾರ್ಯದರ್ಶಿ ಶಾಬಿರ ಉಪಸ್ಥಿತರಿದ್ದರು. ಜೊತೆಕಾರ್ಯದರ್ಶಿ ಕ್ರಿಸ್ಟಿನ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಮನ್ಹ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕನ್ನಡ ನಾಡು ನುಡಿ ಕುರಿತ ಹಾಡುಗಳನ್ನು ಹಾಡಿ ಸಂಭ್ರಮಿಸಿದರು.

Related posts

ಜಿಲ್ಲಾ ವಕ್ಫ್‌ ಅಧಿಕಾರಿ ಹಾಜಿ ಅಬೂಬಕ್ಕರ್ ಸೇವೆಯಿಂದ ನಿವೃತ್ತಿ: ಕಾಜೂರು- ಕಿಲ್ಲೂರು ವತಿಯಿಂದ ಗೌರವಾರ್ಪಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲೆ ಭಾರತಿ ಬಿ.ಎಂ. ಭೇಟಿ

Suddi Udaya

ಡಿ 13-14: ಬಳಂಜ ಶಾಲೆಗೆ ಅಮೃತ ಮಹೋತ್ಸವ ಸಂಭ್ರಮ, ಗುರುವಂದನೆ, 5 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ : ಪತ್ರಿಕಾಗೋಷ್ಠಿಯಲ್ಲಿ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಪಿ.ಕೆ ಮಾಹಿತಿ

Suddi Udaya

ಉಜಿರೆ ಎಸ್ ಡಿ ಎಂ ಮಹಿಳಾ ಐ.ಟಿ.ಐ. ನಲ್ಲಿ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮ

Suddi Udaya

ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಜಲಮಂಗಲ ಕಾರ್ಯಕ್ರಮದಡಿಯಲ್ಲಿ ವಾಟರ್ ಬೆಡ್ ವಿತರಣೆ

Suddi Udaya

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya
error: Content is protected !!