September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಿಡ್ಲೆ ಪ್ರೇರಣ ಸಂಜೀವಿನಿ ಹಾಗೂ ಕಳೆಂಜ ಸಂಜೀವಿನಿ ಒಕ್ಕೂಟದಿಂದ ಸಮಗ್ರ ಕೃಷಿ ಸಮೂಹ ಚಟುವಟಿಕೆ ಕುರಿತು ಮಾಹಿತಿ ಕಾರ್ಯಾಗಾರ

ನಿಡ್ಲೆ : ಪ್ರೇರಣ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ ನಿಡ್ಲೆ ಮತ್ತು ಸಂಜೀವಿನಿ ಒಕ್ಕೂಟ ಕಳೆಂಜ ಇದರ ಸಮಗ್ರ ಕೃಷಿ ಸಮೂಹ ಚಟುವಟಿಕೆ ಕುರಿತು ಮಾಹಿತಿ ಕಾರ್ಯಗಾರವನ್ನು ನಿಡ್ಲೆ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಇವರ ಸಮ್ಮುಖದಲ್ಲಿ ನಡೆಸಲಾಯಿತು.


ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿಯಾದ ಶ್ರೀಮತಿ ಪ್ರತಿಮಾ ಸಮಗ್ರ ಕೃಷಿ ನಿರ್ವಹಣೆಯ ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಸದಸ್ಯರಲ್ಲಿ ಐಫ್ ಸಿ ಮೂಲಕ ಅನುಷ್ಠಾನಗೊಳಿಸಬೇಕಾದ ಚಟುವಟಿಕೆ ಬಗ್ಗೆ ಮಾಹಿತಿ ನೀಡಿ, ಚರ್ಚಿಸಿದರು.


ಈ ಸಂದರ್ಭದಲ್ಲಿ ಕೃಷಿ ಮ್ಯಾನೇಜರ್ ಬಂಗಾರಪ್ಪ, ವಲಯ ಮೇಲ್ವಿಚಾರಕರಾದ ಶ್ರೀಮತಿ ವೀಣಾಶ್ರೀ , ನಿಡ್ಲೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ , ಒಕ್ಕೂಟದ ifc ಫಲಾನುಭವಿಗಳು ಒಕ್ಕೂಟದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಸರ್ವ ಪದಾಧಿಕಾರಿಗಳು, ಒಕ್ಕೂಟದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪಿಡಿಒ ದಿನೇಶ್ ifc ಸರ್ವೇಯಲ್ಲಿ ಒಳಪಟ್ಟ ಸದಸ್ಯರು ಮಾಡಬೇಕಾದ ಸ್ವಉದ್ಯೋಗ ಮತ್ತು ಗ್ರಾಮ ಪಂಚಾಯತ್ ನಿಂದ ಯಾವುದೇ ಸಹಾಯವನ್ನು ಮಾಡಲು ಸಿದ್ದ ಎಂದು ಸಭೆಯಲ್ಲಿ ತಿಳಿಸಿದರು.

Related posts

ಶಿಶಿಲ ಗ್ರಾ.ಪಂ. ವತಿಯಿಂದ ಕಿಂಡಿ ಅಣೆಕಟ್ಟುವಿನಲ್ಲಿ ಅಡ್ಡಲಾಗಿ ಬಿದ್ದಿದ್ದ ಮರದ ದಿಮ್ಮಿಗಳ ತೆರವು ಕಾರ್ಯ

Suddi Udaya

ಧರ್ಮಸ್ಥಳ ಬಂಗ್ಲೆಗುಡ್ಡೆಯಲ್ಲಿ ದೊರೆತ ಅಸ್ಥಿಪಂಜರ ಪ್ರಕರಣ; ಮೂರು ಅಸ್ಥಿಪಂಜರದ ಡಿಎನ್ಎ ಮೂಲಕ ಗುರುತು ದೃಢ

Suddi Udaya

ಚಾರ್ಮಾಡಿ ಘಾಟ್ ನಲ್ಲಿ ರಸ್ತೆಗೆ ಬಿದ್ದ ಮರ

Suddi Udaya

ಸೆ.8: ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ಉದ್ಘಾಟನೆ ಹಾಗೂ ಶೈಕ್ಷಣಿಕ ಸಾಧನೆಗೆ ಸರಕಾರಿ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ

Suddi Udaya

ಮಿತ್ತಬಾಗಿಲು: ತೋಟಕ್ಕೆ ನುಗ್ಗಿದ ಆನೆ; ಅಪಾರ ಕೃಷಿ ಹಾನಿ

Suddi Udaya

ಬೆಳ್ತಂಗಡಿ: ಪಾರಸ್ ಪೃಥ್ವಿ ಜ್ಯುವೆಲ್ಸ್‌ನಲ್ಲಿ ಗೋಲ್ಡನ್ ಹಾರ್ವೆಸ್ಟ್ ಪ್ಲಾನ್ ಸ್ಕಿಮ್ ಉದ್ಘಾಟನೆ ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನ

Suddi Udaya
error: Content is protected !!