33.4 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಟ್ರಮೆಯಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಅಭ್ಯಾಸವರ್ಗ

ಪಟ್ರಮೆ : ಪಟ್ರಮೆ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸವರ್ಗ ಕಾರ್ಯಕ್ರಮ ನ. 4 ರಂದು ನಡೆಯಿತು. ಬಿಜೆಪಿಯ ಹಿರಿಯ ಕಾರ್ಯಕರ್ತರಾದ ದೇವಪಾಲ ಅಜ್ರಿ ಹಾಗೂ ಜಿನ್ನಪ್ಪ ಗೌಡರು ದೀಪ ಬೆಳಗಿಸಿ, ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಮಂಡಲ ಉಪಾಧ್ಯಕ್ಷ ಕೊರಗಪ್ಪ ಗೌಡ ಉದ್ಘಾಟನಾ ಭಾಷಣ ಮಾಡಿ ಶುಭ ಹಾರೈಸಿದರು.
ನಮ್ಮ ವೈಚಾರಿಕತೆ ಮತ್ತು ಪಂಚ ಪರಿವರ್ತನೆ ವಿಷಯವನ್ನು ಸೀತಾರಾಮ್ ಬೆಳಾಲು ಮಂಡನೆ ಮಾಡಿದರು. ಬೂತ್ ಸಂಘಟನೆ ಮತ್ತು ಸ್ಥಳೀಯ ಆಡಳಿತದೊಂದಿಗೆ ನಮ್ಮ ಪಾತ್ರ ಈ ವಿಷಯವನ್ನು ಮಹಾಬಲ ಗೌಡ ನಾಗಂದೋಡಿ ಮಂಡಿಸಿದರು. ವಿಕಸಿತ ಭಾರತದ ಅಮೃತ ಕಾಲದಲ್ಲಿ ನಮ್ಮ ಸಕ್ರಿಯತೆ ವಿಷಯವನ್ನು ವೃಷಾಂಕ್ ಖಾಡಿಲ್ಕರ್ ಅರಸಿನಮಕ್ಕಿ ಮಂಡಿಸಿದರು. ಬೂತ್ ಷಾ ಬೈಠಕ್ ಧರ್ಮಸ್ಥಳ ಮಹಾಶಕ್ತಿಕೇಂದ್ರ ಅಧ್ಯಕ್ಷ ಹರೀಶ್ ಕೆ. ಬಿ. ತೆಗೆದುಕೊಂಡು ವರದಿ ಪಡೆದುಕೊಂಡರು.

ಶಾಸಕ ಹರೀಶ್ ಪೂಂಜ ಸಮಾರೋಪ ಭಾಷಣ ಮಾಡಿದರು. ಮಂಡಲ ಉಪಾಧ್ಯಕ್ಷ ಚನ್ನಕೇಶವ ಹಾಗೂ ಪಟ್ರಮೆ ಶಕ್ತಿಕೇಂದ್ರ ಪ್ರಭಾರಿ ಸಂದೀಪ್ ರೈ ಧರ್ಮಸ್ಥಳ ವೇದಿಕೆ ಯಲ್ಲಿ ಉಪಸ್ಥಿತರಿದ್ದರು. ಉದಯ ಕುಮಾರ್ ಸ್ವಾಗತಿಸಿ, ಶಕ್ತಿಕೇಂದ್ರ ಪ್ರಮುಖ್ ಹಾಗೂ ಪಂಚಾಯತ್ ಅಧ್ಯಕ್ಷ ಮನೋಜ್ ಗೌಡ ಧನ್ಯವಾದ ಸಮರ್ಪಿಸಿದರು.

Related posts

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ: ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿ ಅನ್ವಿತ್ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಎಂಜಿನಿಯರಿಂಗ್ ನಲ್ಲಿ ಅಳದಂಗಡಿಯ ಶ್ರೀಪ್ರಿಯಾಗೆ 7ನೇ ರ‌್ಯಾಂಕ್

Suddi Udaya

ಮುಂಡಾಜೆ: ಸೊಮಂತ್ತಡ್ಕ ನಿವಾಸಿ ಸಾವಿತ್ರಿ ನಿಧನ

Suddi Udaya

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ, ಯುವ ಬಿಲ್ಲವ ಮತ್ತು ಮಹಿಳಾ ಬಿಲ್ಲವ ವೇದಿಕೆಯಿಂದ ಗುರುಗಳ 169 ನೇ ಜಯಂತಿ ಆಚರಣೆ, ನೂತನ ಆಡಳಿತ ಮಂಡಳಿಯ ಪದ ಪ್ರಧಾನ ಸಮಾರಂಭ

Suddi Udaya

ಭಾರೀ ಮಳೆಗೆ ತೆಕ್ಕಾರು ಸರಳಿಕಟ್ಟೆ ಮೂಡಡ್ಕ ಎಂಬಲ್ಲಿ ನೂತನ ಮನೆಯ ಕಾಂಪೌಂಡ್ ಕುಸಿತ

Suddi Udaya

ಅಪ್ರಾಪ್ತ ಬಾಲಕಿ ಮೇಲೆ ಮಾನಭಂಗ ಯತ್ನ: ಬಿಜೆಪಿ ಮುಖಂಡ ರಾಜೇಶ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

Suddi Udaya
error: Content is protected !!