September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರೇಣುಕಾ ಪ್ರಸಾದ್ ರವರಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಾನಕ್ಕೆ ಬೆಳ್ಳಿ ರಥ ಸಮರ್ಪಣೆ: ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಗೌರವಾರ್ಪಣೆ

ಬೆಳ್ತಂಗಡಿ: ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ರೇಣುಕಾ ಪ್ರಸಾದ್ ಕುರುಂಜಿ ಇವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಾನಕ್ಕೆ ಬೆಳ್ಳಿ ರಥ ಸಮರ್ಪಣ ಕಾರ್ಯಕ್ರಮದಲ್ಲಿ, ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ, ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡು ಇವರನ್ನು ದೇವಸ್ಥಾನದ ಸನ್ನಿಧಾನದಲ್ಲಿ ವಿಶೇಷವಾಗಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗೌರವಾಧ್ಯಕ್ಷ ಹೆಚ್ ಪದ್ಮಗೌಡ, ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಜೊತೆ ಕಾರ್ಯದರ್ಶಿ ಶ್ರೀನಾಥ್ ಕೆ ಎಂ, ಉಪಾಧ್ಯಕ್ಷರುಗಳಾದ ನಾರಾಯಣ ಗೌಡ ದೇವಸ್ಯ ಹಾಗೂ ಧರ್ಣಪ್ಪ ಗೌಡ ಬಾನಡ್ಕ, ಕೋಶಾಧಿಕಾರಿ ಯುವರಾಜ್ ಅನಾರು, ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಬೆಳ್ತಂಗಡಿಯ ಹಿರಿಯ ವಕೀಲರಾದ ಗೋಪಾಲಕೃಷ್ಣ ಗುಲ್ಲೋಡಿ, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪಗೌಡ ಸವಣಾಲು, ಕಲ್ಲೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಸುನಿಲ್ ಅನಾವು, ಬಾರ್ಯ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಪ್ರಸನ್ನ ಗೌಡ, ತಾಲೂಕು ಸಂಘದ ನಿರ್ದೇಶಕರುಗಳಾದ ಮಾಧವ ಗೌಡ ವಿ ಜಿ, ವಸಂತಗೌಡ ನಡ, ದಿನೇಶ್ ಗೌಡ ಕೊಯ್ಯೂರು, ಪುರಂದರ ಗೌಡ, ಯುವ ವೇದಿಕೆ ಕಾರ್ಯದರ್ಶಿ ಸುರೇಶ್ ಗೌಡ, ತೀಕ್ಷಿತ್ ಗೌಡ, ನಿತಿನ್ ಕಲ್ಮಂಜ, ರಂಜಿತ್ ಉಪಸ್ಥಿತರಿದ್ದರು.

Related posts

ಡಿ.20: ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ಭವ್ಯ ರಂಗಮಂಟಪದಲ್ಲಿ “ದೇವಿ ಮಹಾತ್ಮೆ” ಯಕ್ಷಗಾನ ಬಯಲಾಟ

Suddi Udaya

ಅಳದಂಗಡಿ ಶ್ರೀ ಗಾಯತ್ರಿ ವಿಶ್ವಕರ್ಮ ಸಂಘಟನಾ ಸಂಘದ 18ನೇ ವರ್ಷದ ವಾರ್ಷಿಕೋತ್ಸವ-ವಿಶ್ವಕರ್ಮ ಪೂಜೆ

Suddi Udaya

ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಯಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ

Suddi Udaya

ಎಸ್.ಡಿ.ಎಂ. ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಯುವ ಸಾಧಕಿಯೊಂದಿಗೆ ಸಂವಾದ ಕಾರ್ಯಕ್ರಮ

Suddi Udaya

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ರವರಿಗೆ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಂದ ಶ್ರದ್ಧಾಂಜಲಿ ಅರ್ಪಣೆ

Suddi Udaya

ಬೆಳ್ತಂಗಡಿ ಪ.ಪಂ., ಲಯನ್ಸ್ ಕ್ಲಬ್ ಬೆಳ್ತಂಗಡಿ ಸಹಭಾಗಿತ್ವದಲ್ಲಿ ಗಾಂಧಿ ಜಯಂತಿ ಪ್ರಯುಕ್ತ “ಸ್ವಚ್ಛತೆಯತ್ತ ನಮ್ಮ ಚಿತ್ತ”

Suddi Udaya
error: Content is protected !!