26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿ

2026 ಜ. 16 ರಿಂದ 25 ವರೆಗೆ ಕಾಜೂರು ಮಖಾಂ ಉರೂಸ್: ಗೌರವಾಧ್ಯಕ್ಷ ಸಯ್ಯಿದ್ ಕೆ.ಎಸ್ ಆಟ್ಟಕೋಯ ತಂಙಳ್ ಕುಂಬೋಳ್ ರಿಂದ ಪೋಸ್ಟರ್ ಬಿಡುಗಡೆ

ಬೆಳ್ತಂಗಡಿ: ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಸಿದ್ಧಿ ಪಡೆದಿರುವ ಇತಿಹಾಸ ಪ್ರಸಿದ್ಧ ಆಧ್ಯಾತ್ಮಿಕ ಕೇಂದ್ರವಾದ ಕಾಜೂರು ಮಖಾಂ ಶರೀಫ್ ಉರೂಸ್ ಕಾರ್ಯಕ್ರಮವು 2026 ಜನವರಿ 16 ರಿಂದ 25 ರ ವರೆಗೆ ನಡೆಯಲಿದೆ.‌

ಖಾಝಿ ಶೈಖುನಾ ಸುಲ್ತಾನುಲ್ ಉಲಮಾ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಉಸ್ತಾದ್ ಅವರ ನೇತೃತ್ವದಲ್ಲಿ, ಸಯ್ಯಿದ್ ಕಾಜೂರು ತಂಙಳ್ ಮಾರ್ಗದರ್ಶನದೊಂದಿಗೆ ನಡೆಯುವ ಈ ಆಧ್ಯಾತ್ಮಿಕ ಅನುಭೂತಿಯ ಕಾರ್ಯಕ್ರಮಗಳ ಅಧಿಕೃತ ಘೋಷಣೆಯನ್ನು ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಗೌರವಾಧ್ಯಕ್ಷರೂ, ಸಮಸ್ತ ಕೇರಳ ಕೇಂದ್ರ ಮುಶಾವರ ಉಪಾಧ್ಯಕ್ಷ ಖುದುವತುಸ್ಸಾದಾತ್ ಅಸಯ್ಯಿದ್ ಕೆ.ಎಸ್ ಆಟ್ಟಕೋಯ ತಂಙಳ್ ಕುಂಬೋಳ್
ಪ್ರಕಟಿಸಿ, ಪೋಸ್ಟರ್ ಬಿಡುಗಡೆಗೊಳಿಸಿದರು.

ಈ ಉರೂಸ್ ಕಾರ್ಯಕ್ರಮವು ಕಾಜೂರು ಮತ್ತು ಕಿಲ್ಲೂರು ಜಂಟಿ ಆಶ್ರಯದಲ್ಲಿ ಸಂಪ್ರದಾಯಬದ್ಧವಾಗಿ ಗತ ವೈಭವ ಮರುಕಳಿಸುವಂತೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಸಯ್ಯಿದ್ ಕುಂಬೋಳ್ ತಂಙಳ್ ತಿಳಿಸಿದರು.

ಪೋಸ್ಟರ್ ಬಿಡುಗಡೆ ಸಂದರ್ಭದಲ್ಲಿ ದರ್ಗಾ ಶರೀಫ್ ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ, ಉರೂಸ್ ಸಮಿತಿ ಉಪಾಧ್ಯಕ್ಷ ಹಾಗೂ ಎಮ್.ಜೆ.ಎಮ್ ಕಿಲ್ಲೂರು ಅಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ, ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ‌.ಎಚ್ ಅಬೂಬಕ್ಕರ್ ಸಿದ್ದೀಕ್, ಕಾಜೂರು ಆಡಳಿತ ಸಮಿತಿ ಉಪಾಧ್ಯಕ್ಷ ಮುಹಮ್ಮದ್ ಬಶೀರ್ ಅಹ್ಸನಿ, ಎಮ್.ಜೆ.ಎಮ್ ಕಿಲ್ಲೂರು ಮಸೀದಿ ಉಪಾಧ್ಯಕ್ಷ ಶಾಹುಲ್ ಹಮೀದ್, ಕಿಲ್ಲೂರು ಮಸೀದಿ ಕೋಶಾಧಿಕಾರಿ ಅಬೂಬಕ್ಕರ್ ಮಲ್ಲಿಗೆ, ಪ್ರಮುಖರಾದ ಮುಹಮ್ಮದ್ ಸಖಾಫಿ ಕಾಜೂರು, ಕೆ ಯು ಮುಹಮ್ಮದ್ ಹನೀಫ್ ಕಾಜೂರು, ಕೆ ಮುಹಮ್ಮದ್ ಕಿಲ್ಲೂರು, ಬದ್ರುದ್ದೀನ್ ಕಿಲ್ಲೂರ್ ಮುಂತಾದವರು ಉಪಸ್ಥಿತರಿದ್ದರು.

Related posts

ಮದ್ದಡ್ಕ: ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಪಲ್ಟಿ

Suddi Udaya

ಬೆಳ್ತಂಗಡಿ ಭಂಡಾರಿ ಸಮಾಜ ಸಂಘದ ವಾರ್ಷಿಕೋತ್ಸವ ಹಾಗೂ ಸತ್ಯನಾರಾಯಣ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಇಂದಬೆಟ್ಟು ಮಸೀದಿಯಲ್ಲಿ ಬಕ್ರೀದ್ ಹಬ್ಬ ಆಚರಣೆ

Suddi Udaya

ರಾಜ್ಯ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಲಾಯಿಲ ಗ್ರಾ.ಪಂ. ಎದುರು ಪ್ರತಿಭಟನೆ

Suddi Udaya

ದಿಡುಪೆ: ಮನೆಯ ಹೊರ ಛಾವಣಿಯಿಂದ ಸಾಕು ನಾಯಿಯನ್ನು ಹೊತ್ತೊಯ್ದ ಚಿರತೆ

Suddi Udaya

ಜನರ ಬಳಿಗೆ ತಾಲೂಕು ಆಡಳಿತ : ನಾರಾವಿಯಲ್ಲಿ ಶಾಸಕರ ನೇತೃತ್ವದಲ್ಲಿ ಜನಸ್ಪಂದನಾ ಕಾರ್ಯಕ್ರಮ ಆರಂಭ

Suddi Udaya
error: Content is protected !!