September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 20ನೇ‌ ಧರ್ಮಸ್ಥಳ ಶಾಖೆಯ ಉದ್ಘಾಟನಾ ಸಮಾರಂಭ

ಧರ್ಮಸ್ಥಳ: ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 20ನೇ‌ ಧರ್ಮಸ್ಥಳ ಶಾಖೆಯ ಲೋಕಾರ್ಪಣೆ ನ.13 ರಂದು ಮಂಜುನಾಥ ಸ್ವಾಮಿ ದೇವಾಲಯದ ಮುಂಭಾಗದ ಕಟ್ಟಡದ ಅಂಚೆ ಕಚೇರಿ ಬಳಿಯ ಮೊದಲನೇ ಮಹಡಿಯಲ್ಲಿ ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ,ಮಾತೃಶ್ರೀ ಹೇಮಾವತಿ ವಿ.ಹೆಗ್ಗಡೆ ಮತ್ತು ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಅವರ ಶುಭ ಆಶೀರ್ವಾದದೊಂದಿಗೆ ನೂತನ ಶಾಖೆ ಉದ್ಘಾಟನೆಗೊಂಡಿತು.

ನೂತನ ಧರ್ಮಸ್ಥಳದ 20ನೇ ಶಾಖೆಯನ್ನು ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಕೋರಿದರು.

ಶಾಸಕ ಹರೀಶ್ ಪೂಂಜರವರು 2026 ನೇ ಸಾಲಿನ ವಿಜಯ ಕ್ರೆಡಿಟ್ ಸೊಸೈಟಿ ಯ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.

ವಿಜಯ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಅಜಿತ್ ಜಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಕೆ.ಮೋಹನ್ ಕುಮಾರ್,ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸೊಸೈಟಿ ಉಪಾಧ್ಯಕ್ಷ ಜಯಂತ ಶೆಟ್ಟಿ ಕೆ, ನಿರ್ದೇಶಕರಾದ ಎಸ್. ಜಯರಾಮ ಶೆಟ್ಟಿ, ಸೀತಾರಾಮ ಶೆಟ್ಟಿ ಬಿ.,ಬಾಲಕೃಷ್ಣ ಪೂಂಜ ಹೆಚ್.,ಪುಷ್ಪರಾಜ್ ಶೆಟ್ಟಿ, ರಘುರಾಮ ಶೆಟ್ಟಿ ಎ., ಕೃಷ್ಣ ರೈ ಟಿ.ಎಂ. ಜಯರಾಮ ಭಂಡಾರಿ ಧರ್ಮಸ್ಥಳ, ಪುರಂದರ ಶೆಟ್ಟಿ, ಮಂಜುನಾಥ ರೈ, ರಾಜು ಶೆಟ್ಟಿ ಬೆಂಗತ್ಯಾರು, ಜಯರಾಮ ಶೆಟ್ಟಿ ಮುಂಡಾಡಿಗುತ್ತು, ರಾಜೇಶ್ ಶೆಟ್ಟಿ ‘ನವಶಕ್ತಿ’, ಶ್ರೀಮತಿ ಸಾರಿಕ ಶೆಟ್ಟಿ, ಶ್ರೀಮತಿ ವಿಜಯ ಬಿ. ಶೆಟ್ಟಿ, ಪ್ರಾದೇಶಿಕ ಪ್ರಬಂಧಕರು, ಶಾಖಾ ಪ್ರಬಂಧಕರು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ನಿರ್ದೇಶಕ ಪ್ರಕಾಶ್ ಶೆಟ್ಟಿ ನೊಚ್ಚ ಸ್ವಾಗತಿಸಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಜಯ್ ಶೆಟ್ಟಿ ವಂದಿಸಿದರು.

Related posts

ಶಿಶು ವೈದ್ಯೆ ಡಾ.ಶಿಲ್ಪಾ ಹೆಗ್ಡೆ ನೇತೃತ್ವದ ಮಕ್ಕಳ ಸ್ನೇಹಿ‌ ಕಲರವ ಸೆಂಟರ್ ಬೆಳ್ತಂಗಡಿಯಲ್ಲಿ ಪ್ರಾರಂಭ

Suddi Udaya

ಸೇವಾಭಾರತಿ ನೂತನ ಕಟ್ಟಡ ನಿರ್ಮಾಣಕ್ಕೆ ಕನ್ಯಾಡಿ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯಿಂದ ದೇಣಿಗೆ

Suddi Udaya

ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆ: ಅಧ್ಯಕ್ಷರಾಗಿ ಜಯರಾಜ ಜೈನ್, ಖಜಾಂಚಿಯಾಗಿ ನಾರಾಯಣ ಶೆಟ್ಟಿ, ರಾಜ್ಯ ಪರಿಷತ್‌ ಸದಸ್ಯರಾಗಿ ಪ್ರದೀಪ್ ಕುಮಾರ್ ಆಯ್ಕೆ

Suddi Udaya

ಗೃಹಜ್ಯೋತಿ : ಮೆಸ್ಕಾಂ ಶಾಖಾ ಕಚೇರಿ ಹಾಗೂ ಉಪವಿಭಾಗದಲ್ಲೂ ದಾಖಲೀಕರಣಕ್ಕೆ ವ್ಯವಸ್ಥೆ

Suddi Udaya

ಶ್ರೀ ಕ್ಷೇತ್ರ ಧ. ಗ್ರಾ. ಯೋ. ಸಮುದಾಯ ಅಭಿವೃದ್ಧಿ ವತಿಯಿಂದ ರೂ.25 ಸಾವಿರ ಆರ್ಥಿಕ ನೆರವು

Suddi Udaya

ಪರೀಕ ಶ್ರೀ ಧ.ಮಂ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನದಲ್ಲಿ ‘ನವಚೇತನ’ ಶಿಬಿರ: ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ಪೊಲೀಸರ ಪಾತ್ರ

Suddi Udaya
error: Content is protected !!