September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾರ್ಮ್ ರೌಂಡರ್ ರಾಬಿನ್ ಪಂದ್ಯಾವಳಿಯಲ್ಲಿ ಬೆಳ್ತಂಗಡಿಯ ಇಶಾ ಶರ್ಮಾ ರವರಿಗೆ ರಾಜ್ಯದ ಮೊದಲ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಬಿರುದು

ಬೆಳ್ತಂಗಡಿ: ಸರ್ಬಿಯಾದ ಸುಬೋಟಿಕಾದಲ್ಲಿ ನಡೆದ ಇಂಟರ್ ನ್ಯಾಷನಲ್ ಮಾಸ್ಟರ್ (ಐಎಂ) ನಾರ್ಮ್ ರೌಂಡರ್ ರಾಬಿನ್ ಪಂದ್ಯಾವಳಿಯಲ್ಲಿ ಬೆಳ್ತಂಗಡಿಯ ಇಶಾ ಶರ್ಮಾರವರು ಮಹಿಳಾ ಗ್ರ್ಯಾಂಡ್ ಮಾಸ್ಟರ್ ಬಿರುದನ್ನು ಪಡೆಯಲು ಬೇಕಾದ ಅಂತಿಮ ಹಂತದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ.

ಈ ಮೂಲಕ ಜಿಎಂ ಬಿರುದು ಪಡೆದ ರಾಜ್ಯದ ಮೊದಲ ಮಹಿಳಾ ಆಟಗಾರ್ತಿಯಾಗಿ ಇಶಾ ಇತಿಹಾಸ ನಿರ್ಮಿಸಿದ್ದಾರೆ. 2019ರಲ್ಲಿ ರಾಜ್ಯದ ಮೊದಲ ಇಂಟರ್ ನ್ಯಾಷನಲ್ ಮಾಸ್ಟರ್‌ಆಗಿ ಗುರುತಿಸಿಕೊಂಡಿದ್ದ ಇಶಾ ಶರ್ಮಾ, ಮಹಿಳಾ ಜಿಎಂ ಆಗಲು ಬೇಕಾದ ಮೊದಲ ಹಂತದ ನಾರ್ಮ್ ಅನ್ನು ಪ್ಲೊವೇಕಿಯಾದಲ್ಲಿ 2022ರಲ್ಲಿ ಪೂರ್ಣಗೊಳಿಸಿದ್ದರು. 2ನೇ ನಾರ್ಮ್ 2023ರಲ್ಲಿ ಮೊರಾಕ್ಕೋದಲ್ಲಿ ಪೂರ್ಣಗೊಂಡಿತ್ತು. 2022ರ ಆಗಸ್ಟ್‌ನಲ್ಲಿ ಜಿಎಂ ನಾರ್ಮ್‌ಗೆ ಬೇಕಾದ 2300 ರೇಟಿಂಗನ್ನು ಕೂಡ ಇಶಾ ದಾಟಿಸಿದ್ದರು.

ಇವರು ಬೆಳ್ತಂಗಡಿಯ ನಿವಾಸಿ ತಂದೆ ವೈದ್ಯರಾದ ಶ್ರೀಹರಿ, ತಾಯಿ ವಿದ್ಯಾ ರವರ ಪುತ್ರಿ. ಚೆಸ್ ಬಗ್ಗೆ ಒಲವು ಹೊಂದಿದ್ದ ಇಶಾರನ್ನು ಮಂಗಳೂರಿನ ಚೆಸ್ ಅಕಾಡೆಮಿಗೆ ಕಳುಹಿಸಿದರು. ಅಲ್ಲಿ ಇಶಾಗೆ ಅರವಿಂದ್ರ ಶಾಸ್ತ್ರಿ ಶಿವಾನಂದ ಮತ್ತು ರಾಘವೇಂದ್ರ ಅವರಿಂದ ತರಬೇತಿ ಸಿಕ್ಕಿತು. 11ನೇ ವಯಸ್ಸಿನಲ್ಲಿ ಇಶಾ ಮೊದಲ ಟೂರ್ನಿಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಬಳಿಕ 2015ರಲ್ಲಿ ಏಷ್ಯನ್ ಶಾಲೆಗಳ ಅ-15 ಚಾಂಪಿಯನ್‌ಶಿಪ್‌ ನಲ್ಲಿ ಇಶಾ ಕಂಚಿನ ಪದಕ ಗೆದ್ದರು. 2017ರಲ್ಲಿ ಏಷ್ಯನ್ ಜೂನಿಯರ್‌ಗರ್ಲ್ಸ್ ರಾಪಿಡ್ ಚಾಂಪಿಯನ್ ಆದರು.

Related posts

ಶಿವರಾತ್ರಿ: ಧರ್ಮಸ್ಥಳದಲ್ಲಿ ಪಾದಯಾತ್ರಿಗಳ ಸ್ವಾಗತಕ್ಕೆ ಸಕಲ ಸಿದ್ಧತೆ, ಸ್ವಾಗತ ಕಾರ್ಯಾಲಯ ಉದ್ಘಾಟನೆ

Suddi Udaya

ಕಣಿಯೂರು ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆ ಸಮಿತಿ ಘಟಕದಿಂದ ಬಂದಾರು ಸ.ಹಿ.ಪ್ರಾ. ಶಾಲೆಯಲ್ಲಿ ಶ್ರಮದಾನ

Suddi Udaya

ಉಜಿರೆ ಗ್ರಾಮ ಪಂಚಾಯತ್ ನಲ್ಲಿ 79ನೇ ಸ್ವಾತಂತ್ರೋತ್ಸವ ಆಚರಣೆ

Suddi Udaya

ಜಿಲ್ಲಾ ಮಟ್ಟದ ಕ್ಲೇ ಮಾಡೆಲಿಂಗ್ ಸ್ಪರ್ಧೆ : ಅಂಡಿಂಜೆ ಸ.ಉ. ಪ್ರಾ.ಶಾಲೆ ವಿದ್ಯಾರ್ಥಿ ಹಾಷಿಕ್ ಪ್ರಥಮ ಸ್ಥಾನ

Suddi Udaya

ಬೆಳ್ತಂಗಡಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಡಾ. ಶಿವರಾಮ ಕಾರಂತ ಸ್ಮರಣೆ

Suddi Udaya

ಧರ್ಮಸ್ಥಳ: ಮೃತ ದೇಹಗಳನ್ನು ಹೂತು ಹಾಕಿದ ದೂರು ಪ್ರಕರಣ ಕೇಸ್ ಫೈಲ್ ಪಡೆಯಲು ಧರ್ಮಸ್ಥಳ ಠಾಣೆಗೆ ಬಂದ ಎಸ್.ಐ.ಟಿ. ತನಿಖಾಧಿಕಾರಿ ಜಿತೇಂದ್ರ ದಯಾಮ

Suddi Udaya
error: Content is protected !!