ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಗುಡ್ ಫ್ಯೂಚರ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ, ವಾರ್ಷಿಕ ಕ್ರೀಡಾಕೂಟ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ

ಬೆಳ್ತಂಗಡಿ: ಗುಡ್ ಫ್ಯೂಚರ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ, ವಾರ್ಷಿಕ ಕ್ರೀಡಾಕೂಟ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.

ಶಾಲಾ ಶಿಕ್ಷಕಿಯರ ಪ್ರಾರ್ಥನೆಯ ಬಳಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕರಾದ ನಸೀರ್ ಅಹಮದ್ ಖಾನ್ ರವರು ಹಸಿರು ನಿಶಾನೆಯ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅತಿಥಿಗಳ ಜೊತೆಗೂಡಿ ನೆಹರೂರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಮುಖ್ಯೋಪಾಧ್ಯಾಯರಾದ ಪ್ರಭಾಕರ ಶೆಟ್ಟಿ ಅವರು ಮಕ್ಕಳ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಶಿಕ್ಷಕಿ ಶ್ರುತಿ ನೆಹರೂರವರ ಆದರ್ಶ ಜೀವನದ ಕುರಿತು ಮಾತನಾಡಿದರು.


ನಂತರ ನಡೆದ ವಾರ್ಷಿಕ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಶ್ರೀಮತಿ ಬಿಂದು ಕೇಶವರವರು ಬಹುಮಾನ ನೀಡುವ ಮೂಲಕ ಚಾಲನೆ ನೀಡಿದರು. ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶುಕುರ್ ಸಾಹೇಬ್, ಉಪಾಧ್ಯಕ್ಷ ಧನ ಕೀರ್ತಿ ಜೈನ್ ಹಾಗೂ ಶ್ರೀಮತಿ ವಿನಯ ಮಾಜಿ ಉಪಾಧ್ಯಕ್ಷ ವೀರೇಂದ್ರ ಕುಮಾರ್ ಜೈನ್, ಶ್ರೀಮತಿ ಹರಿಣಾಕ್ಷಿ ಸದಸ್ಯರಾದ ಯಶೋಧರ ರವರು ಉಪಸ್ಥಿತರಿದ್ದು ಮಕ್ಕಳಿಗೆ ಬಹುಮಾನ ವಿತರಿಸಿದರು. ಶಿಕ್ಷಕಿಯರಾದ ಸೌಜನ್ಯ, ಅಫ್ರ ,ರೂಪ ಇವರು ವಿಜೇತರ ಹೆಸರನ್ನು ವಾಚಿಸಿದರು. ಶಿಕ್ಷಕಿ ಕುಮುದಾಕ್ಷಿ ಸ್ವಾಗತಿಸಿ , ರಕ್ಷಿತಾ ಧನ್ಯವಾದವಿತ್ತರು. ಶಿಕ್ಷಕಿ ಪೈಝುನ್ ಕಾರ್ಯಕ್ರಮ ನಿರ್ವಹಿಸಿದರು.

Related posts

ರೆಖ್ಯ ಗ್ರಾಮದ ಸರ್ವೆ ನಂ,. 69ಕ್ಕೆ ಸಂಬಂಧಿಸಿದ ಅರಣ್ಯ ಭೂಮಿ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವಂತೆ ಸಚಿವ ರಾಮಲಿಂಗಾ ರೆಡ್ಡಿ ರವರಿಗೆ ಶಾಸಕ ಹರೀಶ್ ಪೂಂಜ ಮನವಿ

Suddi Udaya

ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ: ರೂ.571 ಕೋಟಿ ವಾರ್ಷಿಕ ವ್ಯವಹಾರ, ರೂ.1.53 ಕೋಟಿ ನಿವ್ವಳ ಲಾಭ, ಸದಸ್ಯರಿಗೆ ಶೇ.18 ಡಿವಿಡೆಂಟ್

Suddi Udaya

ಕಲ್ಮಂಜ ಸಂಗಮ ಕ್ಷೇತ್ರ ಪಜಿರಡ್ಕ ದೇವಸ್ಥಾನದಲ್ಲಿ ತೀರ್ಥ ಸ್ನಾನದ ಸಂಭ್ರಮ

Suddi Udaya

ಬೆಳ್ತಂಗಡಿ ಸ.ಪ್ರ.ದ. ಕಾಲೇಜಿನ ಪ್ರಾಧ್ಯಾಪಕ ಡಾ. ಶರತ್ ಕುಮಾರ್ ಟಿ ಕೆ ರವರಿಗೆ ಬೀಳ್ಕೊಡುಗೆ

Suddi Udaya

ಮುಂಡೂರುಪಳಿಕೆ ಸುಗ್ಗಿ ಪುರುಷರ ಕೂಟದ ಸಮಿತಿ ರಚನೆ

Suddi Udaya

ಮೇ 8: ಮಾಜಿ ಜಿ.ಪಂ. ಉಪಾಧ್ಯಕ್ಷ ತುಂಗಪ್ಪ ಬಂಗೇರರ ನೇತೃತ್ವದಲ್ಲಿ ಬಿ.ಎಸ್. ಯಡಿಯೂರಪ್ಪ ‘ಅಭಿಮಾನೋತ್ಸವ’ ಕಾರ್ಯಕ್ರಮ

Suddi Udaya
error: Content is protected !!