September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಿಡ್ಲೆ ಪ್ರಾ.ಕೃ.ಪ. ಸ.ಸಂಘದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಸಪ್ತಾಹ ಆಚರಣೆ ಮತ್ತು ಕೊಬ್ಬರಿ ಎಣ್ಣೆಗಿರಣಿ ಉದ್ಘಾಟನೆ

ನಿಡ್ಲೆ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಸಹಕಾರ, ಮಾರ್ಗದರ್ಶನದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಡ್ಲೆ 72ನೇ ಅಖಿಲ ಭಾರತ ಸಹಕಾರ ಸಪ್ತಾಹ -2025 ಇದರ ಅಂಗವಾಗಿ ಸಹಕಾರ ಸಪ್ತಾಹ ಆಚರಣೆ ಮತ್ತು ಕೊಬ್ಬರಿ ಎಣ್ಣೆಗಿರಣಿ ಉದ್ಘಾಟನೆಯು ನ. 17 ರಂದು ನಡೆಯಿತು.

ಶಾಖೆಯ ಹತ್ತನೇ ವರ್ಷದ ಸವಿನೆನಪಿಗಾಗಿ ನಿಡ್ಲೆ ಕೇಂದ್ರ ಕಛೇರಿಯಲ್ಲಿ ಧ್ವಜಾರೋಹಣ ಮಾಡುವ ಮೂಲಕ ನೆರವೇರಿಸಲಾಯಿತು.

ಕೊಬ್ಬರಿ ಎಣ್ಣೆ ಗಿರಣಿಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿ ಶುಭಹಾರೈಸಿದರು.

ಕಳೆಂಜ ಶಾಖೆಯ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಡ್ಲೆ ಪ್ರಾ. ಕೃ. ಪ. ಸ ಸಂಘ ಅಧ್ಯಕ್ಷ ಧನಂಜಯ ಗೌಡ ವಹಿಸಿದರು.

ಮುಖ್ಯ ಅತಿಥಿಯಾಗಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ನಿಡ್ಲೆ ಪ್ರಾ.ಕೃ.ಪ.ಸ.ಸಂಘ ಉಪಾಧ್ಯಕ್ಷ ಡೀಕಯ್ಯ ಎಮ್.ಕೆ., ಕಳೆಂಜ ಗ್ರಾ.ಪಂ ಉಪಾಧ್ಯಕ್ಷ ವಿಶ್ವನಾಥ ಗೌಡ ಹೆಚ್., ನಿಡ್ಲೆ ಗ್ರಾ.ಪಂ. ಉಪಾಧ್ಯಕ್ಷ ರುಕ್ಮಯ್ಯ ಪೂಜಾರಿ, ಶಾಲೆತ್ತಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಹರೀಶ್ ರಾವ್, ಬರೆಂಗಾಯ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಕಜೆ, ಕಾಯರ್ತಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಸಹಕಾರಿ ಸಂಘದ ನಿರ್ದೇಶಕ ವಿಜಯ ಕುಮಾರ್ ಹೆಚ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಉಪಸ್ಥಿತರಿದ್ದರು.

ಈ ವೇಳೆ ವೈದ್ಯರಾದ ಟಿವಿ ಜೋಸೆಫ್, ಟಿ.ಎಸ್ ನಿತ್ಯಾನಂದ ರೈ ಕಳೆಂಜ, ಕ್ರಿಶ್ಚಿನ್ ಬ್ರದರ್ಸ್ ಕಳೆಂಜ ಅಧ್ಯಕ್ಷ ಆಗಸ್ಟಿನ್, ಬರೆಂಗಾಯ ಯುವಜನೇತರ ಯುವಕ ಮಂಡಲದ ಅಧ್ಯಕ್ಷ ಪುನೀತ್ ಪೊಂರ್ದಿಲ, ಶಾಸಕ ಹರೀಶ್ ಪೂಂಜ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಪದ್ಮನಾಭ ಪಿ., ನಿರ್ದೇಶಕರಾದ ವಿಜಯಕುಮಾರ್ ಹೆಚ್, ಆನಂದ ಗೌಡ, ಹೇಮಂತ ಗೌಡ ಕೆ., ಜಯರಾಮ ಪಾಳಂದೆ ಎಸ್, ಧನಂಜಯ ಬಿ. , ರಾಜು, ಮೋಹನ ಪೂಜಾರಿ, ಹಾಗೂ ಸಿಬ್ಬಂದಿ ವರ್ಗ ಮತ್ತು ಸದಸ್ಯರು, ನಿಡ್ಲೆ ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲ, ನಿಡ್ಲೆ ಹಾಗೂ ಕಳೆಂಜ ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.

ನಿಡ್ಲೆ ಪ್ರಾ. ಕೃ. ಪ. ಸ ಸಂಘ ಅಧ್ಯಕ್ಷ ಧನಂಜಯ ಗೌಡ ಪ್ರಸ್ತಾವಿಕ ಮಾತನಾಡಿದರು. ಲೆಕ್ಕಿಗ ವೇಣುಗೋಪಾಲ್ ಹಾಗೂ ಕಳೆಂಜ ಶಾಖಾ ವ್ಯವಸ್ಥಾಪಕ ಕೃಷ್ಣ ಪ್ರಸಾದ್ ಸನ್ಮಾನಿತರ ಪರಿಚಯ ನೀಡಿದರು.

ನಿರ್ದೇಶಕಿ ಗಾಯತ್ರಿ ಹೆಚ್ ಗೌಡ ಪ್ರಾರ್ಥಿಸಿದರು, ನಿರ್ದೇಶಕ ರಮೇಶ್ ರಾವ್ ಸ್ವಾಗತಿಸಿದರು. ಸಿಬ್ಬಂದಿ ಯೋಗೀಶ್ವರಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ವಿಜಯಲಕ್ಷ್ಮೀ ಕೆ. ಧನ್ಯವಾದವಿತ್ತರು.

Related posts

ವೇಣೂರು ಶ್ರೀ ಧ.ಮಂ. ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್ ಘಟಕ ವತಿಯಿಂದ ಮಂಗಳತೇರು ಶಾಲೆಯಲ್ಲಿ ನಾಯಕತ್ವ ಶಿಬಿರ

Suddi Udaya

ಮದ್ದಡ್ಕ ಕುದ್ರೆಕಲಗಲ್ಲು ನಿವಾಸಿ ಶ್ರೀಮತಿ ನಿಧನ

Suddi Udaya

ಧರ್ಮಸ್ಥಳ ಪೊಲೀಸ್ ಠಾಣೆಗೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನಿಂದ ಕಂಪ್ಯೂಟರ್ ಉಪಕರಣ ಹಸ್ತಾಂತರ

Suddi Udaya

ಕುತ್ಲೂರು: ಮಳೆಗೆ ಕುಸಿದ ಸೇತುವೆ ಪರೀಶಿಲನೆ ನಡೆಸಿದ ಜಿಲ್ಲಾಧಿಕಾರಿ

Suddi Udaya

ಅಗ್ರಿಲೀಫ್ ಮುಕುಟಕ್ಕೆ ಮತ್ತೊಂದು ಗರಿ : ರಾಷ್ಟ್ರ ಮಟ್ಟದ ಸ್ಪರ್ಧೆ -10ಲಕ್ಷ ನಗದು ಪ್ರಶಸ್ತಿ

Suddi Udaya

ಬಂಗಾಡಿ ವಲಯ ಮಟ್ಟದ ಪ್ರತಿಭಾ ಕಾರಂಜಿ – ಸ್ಟಾರ್ ಲೈನ್ ಆಂ.ಮಾ. ಶಾಲೆ ರಝಾ ಗಾರ್ಡನ್ ಶಾಲಾ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!