March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಕ್ಸೆಲ್ ಪರ್ಬದ ‘ಅಕ್ಷರೋತ್ಸವ’ ಕವಿಗೋಷ್ಠಿಯಲ್ಲಿ ಪವಿತ್ರಾದಿನೇಶ್ ರವರ “ಗೋಮಾತೆ” ಕವನಕ್ಕೆ ಅಭಿನಂದನಾ ಗೌರವ

ಗುರುವಾಯನಕೆರೆ: ಎಕ್ಸೆಲ್ ಪದವಿಪೂರ್ವ ಕಾಲೇಜು ಗುರುವಾಯನಕೆರೆ, ಬೆಳ್ತಂಗಡಿ ಇವರ ಎಕ್ಸೆಲ್ ಅಕ್ಷರೋತ್ಸವ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಹಾಗೂ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ದಶಮಾನೋತ್ಸವ ಕಾರ್ಯಕ್ರಮಕ್ಕೆ ದೇಶದ ಮೂಲೆ ಮೂಲೆಗಳಿಂದ ಕವನಗಳನ್ನು ಆಹ್ವಾನಿಸಲಾಗಿತ್ತು. ಸಾವಿರಕ್ಕಿಂತಲೂ ಮಿಗಿಲಾದ ಕವನಗಳು ಬಂದಿದ್ದು ಅದರಲ್ಲಿ ಆಯ್ದ 35 ಕವನಗಳಲ್ಲಿ ಪವಿತ್ರಾದಿನೇಶ್ ಇವರ “ಗೋಮಾತೆ” ಎಂಬ ಕವನವು ಆಯ್ಕೆಗೊಂಡಿರುವುದು ಶ್ಲಾಘನೀಯ. ನ.27 ರಂದು ಎಕ್ಸೆಲ್ ಪರ್ಬದ ‘ಅಕ್ಷರೋತ್ಸವ’ ಕವಿಗೋಷ್ಠಿಯಲ್ಲಿ ಇವರು ಭಾಗವಹಿಸಿ ಕವನವಾಚನ ಮಾಡಿದ್ದು ಎಕ್ಸೆಲ್ ವತಿಯಿಂದ ಅಭಿನಂದನಾ ಗೌರವವನ್ನು ಸ್ವೀಕರಿಸಿರುತ್ತಾರೆ.

ಇವರು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಹಳ್ಳಿಂಗೇರಿ ನಿವಾಸಿಯಾಗಿದ್ದು ಶ್ರೀ ದಿನೇಶ್ ಇವರ ಪತ್ನಿಯಾಗಿದ್ದು ಪ್ರಸ್ತುತ ಪುತ್ತೂರು ತಾಲೂಕಿನ ಸ.ಹಿ.ಪ್ರಾ ಶಾಲೆ ಬಜತ್ತೂರು, ವಳಾಲು ಇಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Related posts

ಇಳಂತಿಲ ವ್ಯಾಪ್ತಿಯಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಡಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಎಸ್.ಡಿ.ಯಂ. ಐ.ಟಿ.ಐ.ಯಲ್ಲಿ ಇಂಜಿನಿಯರ್ಸ್ ಡೇ ಹಾಗೂ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

Suddi Udaya

ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳಿಗೆ ಹಣಕ್ಕಾಗಿ ಮದ್ಯ ಮಾರಾಟದ ಹಾದಿ ಹಿಡಿದಿರುವುದು ಅತ್ಯಂತ ವಿಷಾಧನೀಯ: ಪ್ರತಾಪಸಿಂಹ ನಾಯಕ್

Suddi Udaya

ಪರೀಕ ಸೌಖ್ಯವನ ಶ್ರೀ ಧ.ಮಂ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕ್ರಿಟಿಕಲ್ ಫಂಡ್ ಚೆಕ್ ವಿತರಣೆ

Suddi Udaya

ಧರ್ಮಸ್ಥಳ ಗ್ರಾಮ ಪಂಚಾಯತ್ ಗ್ರಂಥಾಲಯ ಸಲಹಾ ಸಮಿತಿಯ ಸಭೆ

Suddi Udaya
error: Content is protected !!