March 7, 2026
ಪ್ರಮುಖ ಸುದ್ದಿ

ವಿಹಿಂಪ ಕೇಂದ್ರೀಯ ಸಮಿತಿ ಜಂಟಿ ಮಹಾಪ್ರ. ಕಾರ್ಯದರ್ಶಿ ಗೋಪಾಲ್ ಜೀ ಧರ್ಮಸ್ಥಳ ಭೇಟಿ

ಧರ್ಮಸ್ಥಳ: ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದ ಉಸ್ತುವಾರಿ, ವಿಶ್ವ ಹಿಂದೂ ಪರಿಷದ್ ನ ಕೇಂದ್ರೀಯ ಸಮಿತಿ ಜಂಟಿ ಮಹಾ ಪ್ರ. ಕಾರ್ಯದರ್ಶಿ ಗೋಪಾಲ್ ಜೀ ಅವರು ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ಅವರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು, ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಈ ಸಂದರ್ಭ ವಿಹಿಂಪ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ
ಶರಣ್ ಪಂಪ್ ವೆಲ್, ಮಂಗಳೂರು ವಿಭಾಗ ಮಂದಿರ ಅರ್ಚಕ ಪುರೋಹಿತ್ ಸಂಪರ್ಕ ಪ್ರಮುಖ್ ಗಿರಿಪ್ರಕಾಶ್ ತಂತ್ರಿ, ವಿಹಿಂಪ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ಕಾರ್ಯದರ್ಶಿ ನವೀನ್ ನೆರಿಯ, ವಿಹಿಂಪ ಹಾಗೂ ಬಜರಂಗದಳ ಪ್ರಮುಖರಾದ ಎಂ.ಬಿ.ಪುರಾಣಿಕ್, ಪದ್ಮನಾಭ ವಿಟ್ಲ, ದಿನೇಶ್ ಚಾರ್ಮಾಡಿ, ರಮೇಶ್ ಧರ್ಮಸ್ಥಳ, ಗಣೇಶ್ ಕಳೆಂಜ, ನಾಗೇಶ್ ಕಲ್ಮಂಜ, ರಾಘವೇಂದ್ರ ಗೌಡ ಊಂಕೊಟ್ಟು ಉಪಸ್ಥಿತರಿದ್ದರು.

Related posts

ಕುವೆಟ್ಟು ಸಬರಬೈಲುನಲ್ಲಿ ನೂತನ ಬಸ್ ತಂಗುದಾಣ ಉದ್ಘಾಟನೆ

Suddi Udaya

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸತೀಶ್ ಕೆ ಬಂಗೇರ ಕಾಶಿಪಟ್ಣ, ಉಪಾಧ್ಯಕ್ಷರಾಗಿ ಶ್ರೀಪತಿ ಉಪಾಧ್ಯಯ ಆಯ್ಕೆ

Suddi Udaya

ವೇಣೂರು ತುಳುನಾಡ ಜವನೆರ್ ಹೆಚ್.ಪಿ.ಎಲ್ ಸೀಸನ್ -7 ರ ಪದಾಧಿಕಾರಿಗಳ ಆಯ್ಕೆ

Suddi Udaya

ಬೆಳಾಲು: ಸೊಸೈಟಿ ವಂಚನೆ ಪ್ರಕರಣ ಆರೋಪಿ ಸದಾಶಿವ ಬಂಧನ- ಕೋರ್ಟ್ ಗೆ ಹಾಜರು ಪಡಿಸಿದ ಪೊಲೀಸರು

Suddi Udaya

ಬೆಳ್ತಂಗಡಿ: ಹುಣ್ಸೆಕಟ್ಟೆ ನಿವಾಸಿ ಆಟೋ ಚಾಲಕ ಆನಂದ ಗೌಡ ಹೃದಯಾಘಾತದಿಂದ ನಿಧನ

Suddi Udaya

ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಧತ್ತಿನಿಧಿಯಿಂದ ಪುಸ್ತಕ ವಿತರಣೆ

Suddi Udaya
error: Content is protected !!