March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಸ್ವಸ್ಥಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಶೌರ್ಯ ತಂಡದ ಸದಸ್ಯರು

ಬೆಳ್ತಂಗಡಿ: ಅಸ್ವಸ್ಥಗೊಂಡು ಬಿದ್ದಿದ್ದ ಇಬ್ಬರು ವ್ಯಕ್ತಿಗಳನ್ನು ಧರ್ಮಸ್ಥಳ ಪೊಲೀಸರ ಮಾಹಿತಿ ಮೇರೆಗೆ ಶೌರ್ಯ ತಂಡದ ಸದಸ್ಯರಾದ ಸಚಿನ್ ಭಿಡೆ ಹಾಗೂ ಧಣೇಶ್ ರವರು ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದ ಬಗ್ಗೆ ವರದಿಯಾಗಿದೆ.

ಧರ್ಮಸ್ಥಳದಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದ ವ್ಯಕ್ತಿಯನ್ನು ಧರ್ಮಸ್ಥಳ ಪೊಲೀಸರು ಶೌರ್ಯ ತಂಡದ ಸದಸ್ಯ ಸಚಿನ್ ಬೀಡೆ ಅವರಿಗೆ ತಿಳಿಸಿದ್ದು ತಕ್ಷಣ ಧಣೇಶ್ ಅವರನ್ನು ಸಂಪರ್ಕಿಸಿ ಧರ್ಮಸ್ಥಳದಿಂದ ಅಂಬುಲೆನ್ಸ್ ನಲ್ಲಿ ಅಸ್ವಸ್ಥರಾಗಿ ಬಿದ್ದಿದ್ದ ಓರ್ವ ವ್ಯಕ್ತಿಯನ್ನು ಕರೆದುಕೊಂಡು ಬರುತ್ತಿದ್ದ ವೇಳೆ, ಕನ್ಯಾಡಿ ಸಮೀಪ ಇನ್ನೊರ್ವ ವ್ಯಕ್ತಿ ಅಸ್ವಸ್ಥರಾಗಿ ಬಿದ್ದಿದ್ದರು. ಇಬ್ಬರನ್ನು ಆಂಬುಲೆನ್ಸ್ ಮೂಲಕ ಕರೆದುಕೊಂಡು ಬಂದು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related posts

ವಲಯ ಮಟ್ಟದ ಕ್ರೀಡಾಕೂಟ: ಮರಿಯಾಂಬಿಕ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ ಗೃಹರಕ್ಷಕದಳ ಘಟಕಾಧಿಕಾರಿ ಜಯಾನಂದರಿಗೆ ‘ಮುಖ್ಯಮಂತ್ರಿ ಚಿನ್ನದ ಪದಕ’

Suddi Udaya

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಮೇಳೈಸಿದ ಕೆಸರುಗದ್ದೆ ಕ್ರೀಡಾಕೂಟ

Suddi Udaya

ಸಿರಿ ಕೇಂದ್ರ ಕಛೇರಿಯಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಪುದುವೆಟ್ಟು ಶ್ರೀಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಇಂಗ್ಲೀಷ್ ಇಟಾಲಿಕ್ ಬರವಣಿಗೆಯ ತರಬೇತಿ

Suddi Udaya

ಶಿಲಾ೯ಲು ಗ್ರಾಮ ಸಭೆಯಲ್ಲಿ ಹೊಡೆದಾಟ: ಇತ್ತಂಡಗಳಿಂದ ವೇಣೂರು ಪೊಲೀಸರಿಗೆ ದೂರು – ಪ್ರಕರಣ ದಾಖಲು

Suddi Udaya
error: Content is protected !!