March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಸ್‌ಡಿಎಂ. ಶಿಕ್ಷಣ ಮಹಾವಿದ್ಯಾಲಯ(ಬಿ.ಎಡ್)ದಲ್ಲಿ ನಕ್ಕು ಬಿಡು ಬಾನಕ್ಕಿ ಗಜಲ್ ಸಂಕಲನ ಬಿಡುಗಡೆ ಮತ್ತು ಗಜಲ್ ರಚನಾ ಕಾರ್ಯಾಗಾರ

ಉಜಿರೆ: ಎಸ್‌ಡಿಎಂ. ಶಿಕ್ಷಣ ಮಹಾವಿದ್ಯಾಲಯ(ಬಿ.ಎಡ್)ದಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಎಸ್.ಡಿ.ಎಂ. ಶಿಕ್ಷಣ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ವನಜಾ ಜೋಶಿ ಅವರ ನಕ್ಕು ಬಿಡು ಬಾನಕ್ಕಿ ಗಜಲ್ ಸಂಕಲನದ ಬಿಡುಗಡೆ ಹಾಗೂ ಗಜಲ್ ರಚನಾ ಕಾರ್ಯಾಗಾರ ನೆರವೇರಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಂತೋಷ್ ಆಲ್ಬರ್ಟ್ ಸಲ್ಡಾನ ಕಾರ್ಯಕ್ರಮ ಉದ್ಘಾಟಿಸಿದರು.

ಎನ್.ವಿ. ಡಿಗ್ರಿ ಕಾಲೇಜು ಕಲಬುರಗಿಯ ಗಜಲ್ ಕವಿ ಹಾಗೂ ಕನ್ನಡ ಪ್ರಾಧ್ಯಾಪಕ ಡಾ. ಮಲ್ಲಿನಾಥ ಎಸ್ ತಳವಾರ ಗಜಲ್ ರಚನಾ ಕಾರ್ಯಾಗಾರ ನಡೆಸಿ ಗಜಲ್ ಸಾಹಿತ್ಯದ ವಿನ್ಯಾಸ, ಪರಂಪರೆ ಮತ್ತು ತಂತ್ರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಆಳವಾದ ತಿಳಿವಳಿಕೆ ನೀಡಿದರು.

ಸಾಹಿತಿ ಸುಮನಾ ಆರ್ ಹೇರ್ಳೆ ಪುಸ್ತಕ ಪರಿಚಯ ನೀಡಿ, ಕೃತಿಯ ಭಾವನಾತ್ಮಕ ವ್ಯಾಪ್ತಿ ಮತ್ತು ಸಂಗತಿಯನ್ನೆತ್ತಿ ಹಿಡಿದರು. ಕೃತಿಕಾರರಾದ ವನಜಾ ಜೋಶಿ ತಮ್ಮ ಬರವಣಿಗೆಯ ಅನುಭವ ಹಂಚಿಕೊಂಡರು.

ಸಾಹಿತ್ಯಾಸಕ್ತರು, ಎಸ್.ಡಿ.ಎಂ. ಶಿಕ್ಷಣ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಯದುಪತಿ ಗೌಡ ಸ್ವಾಗತಿಸಿದರು. ಬಿ.ಎಡ್. ವಿದ್ಯಾರ್ಥಿಗಳಾದ ಸಾಯಿಧೃತಿ, ಗಾಯನ ಮತ್ತು ವಿನೀಶ ಪ್ರಾರ್ಥಿಸಿ, ಅತುಲ್ ದಾಮ್ಲೆ ವಂದಿಸಿ, ಅರುಣಾ ಶ್ರೀನಿವಾಸ ಕಾರ್ಯಕ್ರಮ ನಿರೂಪಿಸಿದರು.

Related posts

ನಾರಾವಿ ಸಂತ ಅಂತೋನಿ ಕಾಲೇಜು ನೂತನ ಪ್ರಾಂಶುಪಾಲರಾಗಿ ಸಂತೋಷ್ ಸಲ್ಡಾನ ಅಧಿಕಾರ ಸ್ವೀಕಾರ

Suddi Udaya

ಧರ್ಮಸ್ಥಳದಿಂದ ನಾರಾವಿಗೆ ಕೆಎಸ್ ಆರ್ ಟಿ ಸಿ ಬಸ್ ಸಂಚಾರ ಮುಂದೂಡಿಕೆ

Suddi Udaya

ಅನಿವಾಸಿ ಕನ್ನಡಿಗರ ಪ್ರಮುಖ ಸಂಘಟನೆಯಾದ ಕೊಡಗು–ದಕ್ಷಿಣ ಕನ್ನಡ ಗೌಡ ಸಮಾಜ ದುಬೈ ವತಿಯಿಂದ ‘ಕ್ರಿಕೆಟ್ ಸೀಸನ್–6’ ಹಾಗೂ ಪ್ರಥಮ ವರ್ಷದ ‘ತ್ರೋಬಾಲ್ ಸೀಸನ್-1’ ಕ್ರೀಡಾಕೂಟ

Suddi Udaya

ಬಳಂಜ: ಕರಿಯ ಪೂಜಾರಿ ಕೊಂಗುಳ ಅನಾರೋಗ್ಯದಿಂದ ನಿಧನ

Suddi Udaya

ಕಕ್ಯಪದವು: ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ “ಐಪಿಒ ತಂತ್ರಗಳ ಬಗ್ಗೆ ಪ್ರಾಯೋಗಿಕ ಅಧಿವೇಶನ” ಕುರಿತು ಮಾಹಿತಿ ಕಾರ್ಯಗಾರ:

Suddi Udaya

ಎಸ್ ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ರವರಿಗೆ ‘ಸಹಕಾರ ಭೂಷಣ’ ಪ್ರಶಸ್ತಿ

Suddi Udaya
error: Content is protected !!