March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು ಶ್ರೀ ಧ.ಮಂ. ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್ ಘಟಕ ವತಿಯಿಂದ ಮಂಗಳತೇರು ಶಾಲೆಯಲ್ಲಿ ನಾಯಕತ್ವ ಶಿಬಿರ

ವೇಣೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ವೇಣೂರು ಇಲ್ಲಿನ ರಾಷ್ಟಿçÃಯ ಸೇವಾ ಯೋಜನಾ ಘಟಕ ವತಿಯಿಂದ ಸ.ಹಿ. ಪ್ರಾಥಮಿಕ ಶಾಲೆ ಮಂಗಳತೇರು ಇಲ್ಲಿ ನಡೆದ ವಿದ್ಯಾರ್ಥಿ ನಾಯಕತ್ವ ಶಿಬಿರದ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾನವೀಯ ಮೌಲ್ಯಗಳ ಬಗ್ಗೆ ಮಾಹಿತಿ ನೀಡಿದ ಬಿ. ಸೋಮಶೇಖರ ಶೆಟ್ಟಿ ಇವರು ನಮ್ಮ ನೋವು ನಮಗೆ ಅರ್ಥವಾದರೆ, ನಾವು ಬದುಕಿದ್ದೇವೆ ಎಂದು ಅರ್ಥ ಬೇರೆಯವರ ನೋವು ಅರ್ಥವಾದರೆ ನಾವು ಮನುಷ್ಯರು ಎಂದು ಹೇಳಬಹುದು, ನಮ್ಮ ಒಳಿತು, ಕೆಡುಕುಗಳಿಗೆ ನಾವೇ ಕಾರಣ, ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ, ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ, ಸಿಕ್ಕಿದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.


ಸಮಾರಂಭದ ಅಧ್ಯಕ್ಷತೆಯನ್ನು ಎಂ ಜೆ ಎಂ ಉಳ್ತೂರು ಇಲ್ಲಿನ ಧರ್ಮ ಗುರುಗಳಾದ ಮಹಮ್ಮದ್ ತೌಸಿಫ್ ಸಹದಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಂತ ರಾಜ್ ಕುಮಾರ್, ಕೃಷ್ಣಪ್ಪ ಪೂಜಾರಿ, ಸುಧಾಕರ ಪೂಜಾರಿ, ದಯಾನಂದ ದೇವಾಡಿಗ, ರಮ್ಯಾ, ಶ್ರೀಮತಿ ಶಕುಂತಳಾ, ಶಶಿಕಲಾ, ವಿಶ್ವನಾಥ ಪೂಜಾರಿ, ಉಮೇಶ್ ದೇವಾಡಿಗ, ವೀಣಾ ಟಿ., ಶ್ರೀಮತಿ ಪುಷ್ಪಲತಾ ಉಪಸ್ಥಿತರಿದ್ದರು. ಕಾರ್ಯಕ್ರಮ ಅಧಿಕಾರಿಗಳಾದ ಪದ್ಮಪ್ರಸಾದ್ ಬಿ ಹಾಗೂ ಸತೀಶ್ ಸಂಘಟಿಸಿದ್ದರು.

Related posts

ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘದ ದಕ್ಷಿಣ ಮಧ್ಯವಲಯ ಉಪಾಧ್ಯಕ್ಷರಾಗಿ ಧರ್ಮಸ್ಥಳದ ಎ. ಎಸ್. ಲೋಕೇಶ್ ಶೆಟ್ಟಿ ಆಯ್ಕೆ

Suddi Udaya

ಮಂಗಳೂರಿನ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಇವರ ನೇತೃತ್ವದಲ್ಲಿ ನಡೆಯುವ ಗಣೇಶೋತ್ಸವಕ್ಕೆ ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದಿಂದ ಹೊರಕಾಣಿಕೆ ಸಮರ್ಪಣೆ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ವಿಂಶತಿ ಸಂಭ್ರಮ ಹಾಗೂ ಕಾಲೇಜಿನ ವಾರ್ಷಿಕೋತ್ಸವ

Suddi Udaya

ಕೊಕ್ರಾಡಿ ಸರಕಾರಿ ಪ.ಪೂ. ಕಾಲೇಜಿಗೆ ಶೇ. 98.50 ಫಲಿತಾಂಶ

Suddi Udaya

ನಡ: ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ‘ಸೇವಾ ಭಾರತಿ’ ವತಿಯಿಂದ ಪುಸ್ತಕಗಳ ವಿತರಣೆ

Suddi Udaya

ಗಡಾಯಿಕಲ್ಲು ಚಾರಣಕ್ಕೆ ಹೇರಿದ್ದ ನಿರ್ಬಂಧ ತೆರೆ

Suddi Udaya
error: Content is protected !!