September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟವು ಡಿ.8ರಂದು ಸೇಕ್ರೆಡ್ ಹಾರ್ಟ್ ಕಾಲೇಜು ಕ್ರೀಡಾಂಗಣದಲ್ಲಿ ನೆರವೇರಿತು.

ಕ್ರೀಡಾಕೂಟವನ್ನು ಕ್ರೀಡಾ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಕ್ರೀಡಾಕೂಟದ ಧ್ವಜಾರೋಹಣವನ್ನು ಮುಖ್ಯ ಅತಿಥಿಗಳು ನೆರವೇರಿಸಿದರು. ಕ್ರೀಡಾಕೂಟದ ಅಧ್ಯಕ್ಷ ಸ್ಥಾನವನ್ನು ಶಾಲಾ ಸಂಚಾಲಕರಾದ ವಂ|ಸ್ವಾ| ಸ್ಟ್ಯಾನಿ ಗೋವಿಯಸ್ ವಹಿಸಿ ಮಾತನಾಡಿ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿ, ಕ್ರೀಡೆಯು ನಮ್ಮ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಅತ್ಯಗತ್ಯ ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ಬಾಡಿ ಬಿಲ್ಡರ್ ಮತ್ತು ಏಕಲವ್ಯ ಪ್ರಶಸ್ತಿ ವಿಜೇತರಾದ ರೋಷನ್ ಪೆರಾವೋ ಆಗಮಿಸಿ, ಅವರು ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿ, ಜೀವನದಲ್ಲಿ ಉನ್ನತಿ ಸಾಧಿಸಲು ಬೇಕಾಗುವ ಗುಣಗಳನ್ನು ಕ್ರೀಡೆ ನಮಗೆ ಒದಗಿಸುತ್ತದೆ. ಕ್ರೀಡೆಯಲ್ಲಿ ಸೋಲು ಗೆಲುವು ಸ್ವಾಭಾವಿಕ ಆದರೆ ಮುಖ್ಯವಾದದ್ದು ಭಾಗವಹಿಸುವ ಮನೋಭಾವ ಎಂದು ಹೇಳಿ ಶುಭ ಹಾರೈಸಿದರು. ಕ್ರೀಡಾಕೂಟದಲ್ಲಿ ಮಡಂತ್ಯಾರು ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಮೊರಾಸ್ , ಪುಂಜಾಲಕಟ್ಟೆ ವಲಯದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಚೇತನ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ರವೀಂದ್ರ ರೈ , ಶಾಲಾ ಮುಖ್ಯೋಪಾಧ್ಯಾಯರಾದ ವಂ|ಸ್ವಾ| ದೀಪಕ್ ಲಿಯೋ ಡೇಸ , ಸಿ|ಲೂಸಿ ಡಿಸೋಜ, ಸಿ| ಹಿಲ್ಡಾ ಮಸ್ಕರೇನಸ್ , ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಮುಖ್ಯಸ್ಥರುಗಳು, ಶಿಕ್ಷಕ-ರಕ್ಷಕ ಸಂಘದ ಸದಸ್ಯರು, ಶಾಲಾ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಈ ಕ್ರೀಡಾಕೂಟವನ್ನು ಸಹ ಶಿಕ್ಷಕರಾದ ಜೆರಾಲ್ಡ್ ಡಿಸೋಜಾ ಮತ್ತು ಶ್ರೀಮತಿ ಐಡ ಡಿಕುನ್ಹ ನಿರೂಪಿಸಿ, ಕುಮಾರಿ ರಶ್ಮಿತಾ ಸ್ವಾಗತಿಸಿ, ಕುಮಾರಿ ರೀಮಾ ರೋಡ್ರಿಗಸ್ ಧನ್ಯವಾದವನ್ನು ಸಮರ್ಪಿಸಿದರು.

Related posts

ಮಡಂತ್ಯಾರು: ಸುವೇಗಾ ಮೋಟಾರ್ಸ್ ನಲ್ಲಿ ಹೀರೋ ಡೆಸ್ಟಿನಿ- 125 ಮಾರುಕಟ್ಟೆಗೆ ಬಿಡುಗಡೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ಧರ್ಮಸ್ಥಳ “ರಂಗಶಿವ”ಬಳಗದಿಂದ ಮಕ್ಕಳ ರಂಗ ಶಿಬಿರ “ನಲಿಯೋಣ ಬಾ- 2023”

Suddi Udaya

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಗುರು ಪೂರ್ಣಿಮೆ ಆಚರಣೆ

Suddi Udaya

ಜನಪದ ಗೀತಗಾಯನ ಸ್ಪರ್ಧೆ: ವಾಣಿ ಕಾಲೇಜಿನ ರೇಂಜರ್ಸ್ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ನ್ಯಾಯತರ್ಪು ಮತ್ತು ಕಳಿಯ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಬಿರುಸಿನ ಮತ ಪ್ರಚಾರ

Suddi Udaya
error: Content is protected !!