September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ವೇಣೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

ವೇಣೂರು: ತಾಲೂಕು ಕಾನೂನು ಸೇವೆಗಳ ಸಮಿತಿ ಬೆಳ್ತಂಗಡಿ, ವಕೀಲರ ಸಂಘ ಬೆಳ್ತಂಗಡಿ, ಯುವವಾಹಿನಿ ವೇಣೂರು ಘಟಕ
ಸರಕಾರಿ ಪದವಿ ಪೂರ್ವ ಕಾಲೇಜು, ವೇಣೂರು ಇವರ ಆಶ್ರಯದಲ್ಲಿ ಡಿ.09 ರಂದು ಕಾನೂನು ಅರಿವು ಕಾರ್ಯಕ್ರಮವು ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರುನಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟಕರಾದ ವಿಜಯೇಂದ್ರ ಟಿ. ಎಚ್. ಹೆಚ್ಚುವರಿ ಸಿವಿಲ್ ನ್ಯಾಯಧೀಶರು ಮತ್ತು ಜೆ.ಎಮ್.ಎಫ್.ಸಿ ಬೆಳ್ತಂಗಡಿ ಇವರು ಮಾನವ ಹಕ್ಕುಗಳು ಬಗ್ಗೆ ಅರಿವು ಮೂಡಿಸಿದರು. ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ಪ್ರಕಾಶ್ ಕೋಟ್ಯಾನ್ ನಾರಾವಿ ಅಧ್ಯಕ್ಷತೆ ಯನ್ನು ವಹಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಅಪರ ಸರಕಾರಿ ವಕೀಲರು ಮನೋಹರ ಕುಮಾರ್ ಎ ಬೆಳ್ತಂಗಡಿ ಇವರು ಕಾನೂನು ಪಾಲನೆ ಬಗ್ಗೆ ಮಾತಾಡಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಕೀಲರ ಸಂಘ ಅಧ್ಯಕ್ಷ ಅಲೋಶಿಯಸ್ ಎಸ್ ಲೋಬೋ ಪೋಕ್ಸೋ ಕಾಯಿದೆ ಬಗ್ಗೆ ಮಾಹಿತಿ ನೀಡಿದರು. ವೇಣೂರು ಪೊಲೀಸ್ ಠಾಣಾಧಿಕಾರಿ ಪಿಎಸ್ಐ ಅಕ್ಷಯ್ ಡಿ ಸೈಬರ್ ಕ್ರೈಂ ಬಗ್ಗೆ ಮಾಹಿತಿ ನೀಡಿದರು.
ವಕೀಲರ ಸಂಘ ಕಾರ್ಯದರ್ಶಿ ಪ್ರಶಾಂತ್ ಎಮ್, ವೇಣೂರು ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರು ಗಂಗಾಧರ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಉಸ್ತುವಾರಿಯನ್ನು ಘಟಕದ ಮಾಜಿ ಅಧ್ಯಕ್ಷ ಯೋಗೀಶ್ ಬಿಕ್ರೋಟ್ಟು ಮತ್ತು ಉಪಾಧ್ಯಕ್ಷ ಸತೀಶ್ ಯನ್ ಪಿ ವಹಿಸಿದ್ದರು.
ಘಟಕದ ಸ್ಥಾಪಕ ಅಧ್ಯಕ್ಷ ನಿತೀಶ್ ಹೆಚ್ ಕೋಟ್ಯಾನ್ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿನಿ ಕು. ಶರಣ್ಯ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾಲೇಜಿನ ಪ್ರಾಧ್ಯಾಪಕ ವೆಂಕಟೇಶ ಪಿ ಧನ್ಯವಾದ ಸಲ್ಲಿಸಿದರು. ಉಪಹಾರದ ವ್ಯವಸ್ಥೆಯನ್ನು ಘಟಕದ ಮಾಜಿ ಅಧ್ಯಕ್ಷ ನವೀನ್ ಪೂಜಾರಿ ಪಚ್ಚೇರಿ ನೀಡಿ ಸಹಕರಿಸಿದರು.

ಕಾರ್ಯಕ್ರಮದಲ್ಲಿ ಘಟಕದ ಎಲ್ಲಾ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರು,ಸದಸ್ಯರು, ಸಲಹೆಗರಾರು, ಕಾಲೇಜಿನ ಅಧ್ಯಾಪಕ ವೃಂದ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related posts

ಧರ್ಮಸ್ಥಳ: ರಸ್ತೆಯ ಬದಿ ನಿಲ್ಲಿಸಿದ್ದ ಬೈಕ್ ಕಳವು: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬಜಿರೆ: ಸ.ಉ.ಹಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಆ.29: ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ: ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Suddi Udaya

ಮಾ. 2: ಮುಗೇರಡ್ಕ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಮತ್ತು ಆಹಾರ ಮೇಳ: ಚಪ್ಪರ ಮೂಹೂರ್ತ

Suddi Udaya

ಎಸ್. ಎಮ್ .ಎ. ಉಜಿರೆ ರೀಜಿನಲ್ ವತಿಯಿಂದ ರಂಝನ್ ಕಿಟ್ ವಿತರಣೆ

Suddi Udaya

ಬೆಳ್ತಂಗಡಿ ತಾಲೂಕು ಜಿಪಿಟಿ ಶಿಕ್ಷಕರ ಸಂಘದ ವತಿಯಿಂದ ‘ಸ್ನೇಹ ಸಂಗಮ’ ಕಾರ್ಯಕ್ರಮ

Suddi Udaya
error: Content is protected !!