28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ಕ್ಷೇ.ಧ.ಗ್ರಾ.ಯೋ. ಬಿ.ಸಿ ಟ್ರಸ್ಟ್ ಸಿಡ್ಬಿ ಪ್ರಯಾಸ ಸ್ವ ಉದ್ಯೋಗ ಕ್ಕೆ 1ಕೋಟಿ ಪ್ರಗತಿ ನಿಧಿ ಮಜೂರಾತಿ ವಿತರಣೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ )ಗುರುವಾಯನಕೆರೆ/ ಬೆಳ್ತಂಗಡಿ ಸಿಡ್ಬಿ ಪ್ರಯಾಸ ಸ್ವ ಉದ್ಯೋಗ ಕ್ಕೆ 1ಕೋಟಿ ಪ್ರಗತಿ ನಿಧಿ ಮಜೂರಾತಿ ವಿತರಣೆ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರು ದಿನೇಶ ಡಿ ಪ್ರಸ್ತಾವಿಕ ಮಾತನಾಡಿ ಪೂಜ್ಯರ ಮಾರ್ಗದರ್ಶನದಂತೆ ಸಿಡ್ಬಿ ಪ್ರಯಾಸ ಯೋಜನೆಯು ಸ್ವಸಹಾಯ ಸಂಘಗಳ ಸದಸ್ಯರಿಗೆ ಸ್ವ ಉದ್ಯೋಗ ಕಲ್ಪಿಸಲು ಹಾಗೂ ಸ್ವಾವಲಂಬಿಗಳಾಗಲು ಬೇಕಾದ ಅಗತ್ಯ ಸಹಕಾರವನ್ನು ನೀಡುವ ಯೋಜನೆಯಾಗಿದೆ ಯೋಜನೆಯ ಮೂಲ ಸ್ವಾವಲಂಬಿ ಬದುಕನ್ನು ಯುವ ಜನತೆ ಕಟ್ಟಿಕೊಳ್ಳಬೇಕು ಎಂಬ ಉನ್ನತ ಚಿಂತನೆಯಾಗಿದೆ ದಿನನಿತ್ಯ ಆದಾಯ ಬರುವ ವ್ಯವಹಾರಕ್ಕೆ ಪೂರಕವಾಗಿ ಕಿರಾಣಿ ಅಂಗಡಿ, ಹೋಟೆಲ್, ಹೂವಿನ ಅಂಗಡಿ, ಬೇಕರಿ ಮತ್ತು ಚಾಟ್ಸ್ ಅಂಗಡಿ, ಕೃಷಿ ಉತ್ಪನ್ನಗಳಿಗೆ ಇತರೆ ಉದ್ದೇಶ ಗಳಿಗೆ 50,000 ರಿಂದ 5 ಲಕ್ಷದವರೆಗೆ ಸಿಡ್ಬಿ ಪ್ರಗತಿ ನಿಧಿಯನ್ನು ದಾಖಲೆ ಅನುಗುಣವಾಗಿ ವಿತರಿಸಲಾಗುವುದು, ತಾಲೂಕಿನ ಪ್ರಗತಿ ಬಂಧು ಸ್ವ ಸಹಾಯ ತಂಡದ ಸ್ವ ಉದ್ಯೋಗ ಮಾಡುವ ಸದಸ್ಯರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಪ್ರಾಸವಿಕವಾಗಿ ಮಾತನಾಡಿದರು.

ರೂಟ್ ಸೆಟ್ ಸಂಸ್ಥೆಯ ಕರುಣಾಕರವರು ಮಾತನಾಡಿ ಸ್ವ ಉದ್ಯೋಗ ಆಯ್ಕೆ ಮಾಡುವಾಗ ಗಮನಿಸಬೇಕಾದ ಅವಶ್ಯಕತೆ ಬಗ್ಗೆ ಲಾಭ ನಷ್ಟದ ಬಗ್ಗೆ ಗ್ರಾಹಕರಲ್ಲಿ ವ್ಯವಹಾರದ ರೀತಿ ಬಗ್ಗೆ ತರಬೇತಿಯನ್ನು ಪಡೆದು ಸ್ವ ಉದ್ಯೋಗ ಮಾಡುವುದು ಸೂಕ್ತ ನಮ್ಮ ಸಂಸ್ಥೆಯಲ್ಲಿ ಎಲ್ಲಾ ಸ್ವ ಉದ್ಯೋಗದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಸಿಡ್ಬಿ ಯೋಜನಾಧಿಕಾರಿಗಳು ಶ್ರೀಮತಿ ಅನುಷಾ ಸಿಡ್ಬಿ ಯೋಜನೆಗೆ ನೀಡಬೇಕಾದ ದಾಖಲಾತಿ ಯ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಗುರುವಾಯನಕೆರೆ ಯೋಜನಾಧಿಕಾರಿಗಳು ಅಶೋಕ ಬಿ, ಕೃಷಿ ಮೇಲ್ವಿಚಾರಕರು ಕೃಷ್ಣ ಮೇಲ್ವಿಚಾರಕರು ಯಶೋದ, ಕಛೇರಿ ಪ್ರಬಂಧಕರು ಆಕಾಶ್, ಹಾಗೂ ಸ್ವ ಉದ್ಯೋಗ ಮಾಡುವ ಸದಸ್ಯರು ಉಪಸಿತರಿದ್ದರು.

Related posts

ಸತ್ಯ ಶೋಧಕ ವೇದಿಕೆ ಮಹಾಸಭೆ: ನೂತನ ಕಚೇರಿ ಉದ್ಘಾಟನೆ

Suddi Udaya

ಶ್ರೀರಾಮಚಂದ್ರ ದೇವರ ವಿರುದ್ಧ ಅವಹೇಳನಕಾರಿ ಹಾಗೂ ವಿವಾದಾತ್ಮಕ ಹೇಳಿಕೆ : ಪ್ರೊ. ಕೆ. ಎಸ್. ಭಗವಾನ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸೂಟ್ ವಿತರಣೆ

Suddi Udaya

ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿಗಳ ಉತ್ಕೃಷ್ಟ ಶೈಕ್ಷಣಿಕ ಸಾಧನೆ,ಅಭಿನಂದಿಸಿದ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ : ರಾಷ್ಟ್ರಮಟ್ಟದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳು

Suddi Udaya

ಭಾರಿ ಮಳೆಗೆ ಓಡದಕರಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಒಳಗೆ ಹಾಗೂ ಮನೆಗೆ ನುಗ್ಗಿದ ನೀರು

Suddi Udaya

ಕರಾಯ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya
error: Content is protected !!