March 7, 2026
ಅಭಿನಂದನೆಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆಸಂಘ-ಸಂಸ್ಥೆಗಳು

ಕೊಯ್ಯೂರು ಸ.ಹಿ.ಪ್ರಾ. ಶಾಲಾ ಅಮೃತ ಕೊಯ್ಲು- ಅಮೃತ ಮಹೋತ್ಸವ: ಕೆ.ಮೋಹನ್ ಕುಮಾರ್ ಸಂಚಾಲಕತ್ವದ ಬದುಕು ಕಟ್ಟೋಣ ಬನ್ನಿ ತಂಡ ಶಾಲೆಗೆ ನೀಡಿದ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ: ಕೆ. ಮೋಹನ್ ಕುಮಾರ್ ದಂಪತಿಗಳಿಗೆ ಹಾಗೂ ಸುಮಂತ್ ಕುಮಾರ್ ಜೈನ್, ಹರೀಶ್ ಆರಿಕೋಡಿ, ರಕ್ಷಿತ್ ಶಿವರಾಂ ರವರುಗಳಿಗೆ ಸನ್ಮಾನ

ಬೆಳ್ತಂಗಡಿ: ಕೊಯ್ಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಡಿ.13ರಂದು ಪೂರ್ವಾಹ್ನ ವಿಜೃಂಭಣೆಯಿಂದ ಪ್ರಾರಂಭಗೊಂಡು ರಾತ್ರಿ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲೀಕ ಮೋಹನ್ ಕುಮಾರ್ ಕೆ. ಸಂಚಾಲಕತ್ವದ ಬದುಕು ಕಟ್ಟೋಣ ಬನ್ನಿ ತಂಡವು ಶಾಲೆಗೆ ನೀಡಿದ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ ಜರುಗಿತು.

ನೋಟರಿ ವಕೀಲರಾದ ಬಿ.ಕೆ ಧನಂಜಯ್ ರಾವ್ ಅವರು ದೀಪ ಪ್ರಜ್ವಲನೆಗೊಳಿಸಿದರು. ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾದ ಕೆ. ಮೋಹನ್ ಕುಮಾರ್ ಅವರು ಅಮೃತ ಕೊಯ್ಲು ಸಭಾಂಗಣ ಉದ್ಘಾಟನೆಯನ್ನು ನೆರವೇರಿಸಿ, ಅಭಿವೃದ್ಧಿ ಕಾರ್ಯಕ್ರಮಗಳ ಹಸ್ತಾಂತರ ನಡೆಸಿ ಮಾತನಾಡಿದರು.

ಅಮೃತ ಮಹೋತ್ಸವ ಸಮಿತಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹಿರಿಯ ವಿದ್ಯಾರ್ಥಿ ಸಮಿತಿಗಳ ವತಿಯಿಂದ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾದ ಕೆ. ಮೋಹನ್ ಕುಮಾರ್ ದಂಪತಿಗಳಿಗೆ ಹಾಗೂ ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಹರೀಶ್ ಗೌಡ ಬಜಿಲ, ಉಪಾಧ್ಯಕ್ಷರು, ಗ್ರಾ.ಪಂ. ಕೊಯ್ಯೂರು, ಇಸುಬು, ಸದಸ್ಯರು, ಗ್ರಾ.ಪಂ. ಕೊಯ್ಯೂರು,ಅ.ಮ.ಸಮಿತಿ ಗೌರವಾಧ್ಯಕ್ಷರಾದ ಅಶೋಕ್ ಭಟ್ ಅಗ್ರಸಾಲೆ,ಪ್ರಚಂಡಭಾನು ಭಟ್ ಪಾಂಬೇಲು, ವಿಜಯ ಕುಮಾರ ಎಂ., ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರು, ಮಹಮ್ಮದ್ ಹಾರೂನ್, ಕಾರ್ಯಾಧ್ಯಕ್ಷರು, ಅ.ಮ.ಸಮಿತಿ, ದಾಮೋದರ ಗೌಡ ಬೆರ್ಕೆ, ಪ್ರಧಾನ ಸಂಚಾಲಕರು, ಅ.ಮ.ಸಮಿತಿ, ಶ್ರೀಮತಿ ಹೇಮಾವತಿ ಕಡಮ್ಯಾಜೆ, ಸದಸ್ಯರು, ಗ್ರಾ.ಪಂ. ಕೊಯ್ಯೂರು, ವಿನಯ ಕೆ., ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ, ಬಸವಲಿಂಗಪ್ಪ, ಸಮನ್ವಯಾಧಿಕಾರಿಗಳು, ಬಿ.ಆರ್.ಸಿ., ಬೆಳ್ತಂಗಡಿ, ಶ್ರೀಮತಿ ಚೇತನಾಕ್ಷಿ, ಶಿಕ್ಷಣ ಸಂಯೋಜನಾಧಿಕಾರಿ, ಬೆಳ್ತಂಗಡಿ, ಕೇಶವ ಗೌಡ, ಕಂಗಿತ್ತಿಲು, ಅಧ್ಯಕ್ಷರು, ಹಿ. ವಿದ್ಯಾರ್ಥಿ ಸಂಘ, ಚ೦ದ್ರಶೇಖರ ಸಾಲಿಯಾನ್, ಪ್ರ. ಕಾರ್ಯದರ್ಶಿ, ಹಿ. ವಿದ್ಯಾರ್ಥಿ ಸಂಘ, ಚೇತನ್ ಚಂದಪ್ಪ ಗೌಡ, ಬೆರ್ಕೆ, ಕೋಶಾಧಿಕಾರಿ, ಅ. ಮ. ಸಮಿತಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಮೃತ ಮಹೋತ್ಸವ ಸಮಿತಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹಿರಿಯ ವಿದ್ಯಾರ್ಥಿ ಸಮಿತಿಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಪೋಷಕರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದರು.

ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಪೂಜಾರಿ ಬಜೆ ಗುತ್ತು ಪ್ರಸ್ತಾವಿಸಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಬಳಿರಾಮ ಲಮಾಣಿ ವರದಿ ವಾಚಿಸಿದರು. ಅಮೃತ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮೊಹಮ್ಮದ್ ಹಾರೂನ್ ವಂದಿಸಿದರು.ಸಭಾ ಕಾರ್ಯಕ್ರಮ ಬಳಿಕ ಎರುಕಡಪು, ಕೊಯ್ಯೂರು ಮತ್ತು ಬಲ್ಯರೊಟ್ಟು ಅಂಗನವಾಡಿ ಪುಟಾಣಿಗಳಿಂದ ಚಿಣ್ಣರ ಕಲರವ, ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನೆರವೇರಿತು.

Related posts

ಸುರ್ಯ ಸದಾಶಿವ ರುದ್ರ ದೇವಸ್ಥಾನಕ್ಕೆ ನಟ ಯಶ್ ಕುಟುಂಬ ಸಮೇತ ಭೇಟಿ: ವಿಶೇಷ ಪೂಜೆ

Suddi Udaya

ಇಂದಬೆಟ್ಟು ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಆನಂದ ಅಡಿಲು ರವರ ಮನೆಗೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಭೇಟಿ

Suddi Udaya

ಕೃಷಿಕ ಕಲಾಯ ದಾಮೋದರ ಬಂಗೇರ ನಿಧನ

Suddi Udaya

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್, ಉಜಿರೆ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಸಹಯೋಗದಲ್ಲಿ ನಮ್ಮೂರ ಕನ್ನಡ ಶಾಲೆ ನಮ್ಮ ಹೆಮ್ಮೆ ಕಾರ್ಯಕ್ರಮಕ್ಕೆ ಚಾಲನೆ

Suddi Udaya

ಯಕ್ಷಭಾರತಿ ಸಂಸ್ಥೆಯ ವತಿಯಿಂದ ಕೋಳ್ಯೂರು ರಾಮಚಂದ್ರ ರಾವ್ ರವರಿಗೆ ಸನ್ಮಾನ

Suddi Udaya

ಗುರುವಾಯನಕೆರೆಯಲ್ಲಿ ದೇವು ಯು ಪಿವಿಸಿ ಇಂಟೀರಿಯರ್ ಶುಭಾರಂಭ

Suddi Udaya
error: Content is protected !!