March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮೈರೋಳ್ತಡ್ಕ ಉ.ಹಿ.ಪ್ರಾ. ಶಾಲಾ ಅಮೃತ ಮಹೋತ್ಸವ ಪ್ರಯುಕ್ತ ಪ್ರತಿಭಾ ಪುರಸ್ಕಾರ ಮತ್ತು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ

ಬಂದಾರು : ಬಂದಾರು ಗ್ರಾಮ ಮೈರೋಳ್ತಡ್ಕ ದ.ಕ.ಜಿಲ್ಲಾ ಪಂಚಾಯತ್ ಉನ್ನತಿಕರಿಸಿದ ಪ್ರಾಥಮಿಕ ಶಾಲಾ ಅಮೃತ ಮಹೋತ್ಸವ ಪ್ರಯುಕ್ತ ಪ್ರತಿಭಾ ಪುರಸ್ಕಾರ ಮತ್ತು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಡಿ.13 ರಂದು ಶಾಲಾ ವಠಾರದಲ್ಲಿ ನೆರವೇರಿತು.

ಉದ್ಯಮಿಗಳಾದ ಕಿರಣ್ ಚಂದ್ರ ಪುಷ್ಪಗಿರಿ ಇವರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ, ಶಾಲಾ ಕೊಠಡಿ ನೀಲ ನಕಾಶೆ ಮತ್ತು ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ, ಶುಭ ಹಾರೈಸಿದರು. ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ ನೂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಗೌಡ ನಿರುoಬುಡ, ಅಂಡೆಕೇರಿ ಜುಮ್ಮಾ ಮಸೀದಿ ಧರ್ಮ ಗುರುಗಳಾದ ಶಫೀ ಅಹ್ಮನಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುಪ್ರಸಾದ್, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಪೊಲೀಸ್ ಪಿ.ಎಸ್ ವೆಂಕಪ್ಪ, ಹಿರಿಯ ವಿದ್ಯಾರ್ಥಿ ಅಂಚೆ ಇಲಾಖೆಯ ಸಹಾಯಕ ಅಧಿಕ್ಷಕರು ಮೋಹನ್ ಶೆಟ್ಟಿ ಬಾಂಗೇರು, ಬಂದಾರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಪರಮೇಶ್ವರಿ ಕೆ ಗೌಡ, ಶ್ರೀಮತಿ ಸುಚಿತ್ರಾ ಮುರ್ತಾಜೆ, ಕುಪ್ಪೆಟ್ಟಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಶ್ರೀಮತಿ ವಾರಿಜ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಚoದ್ರಾವತಿ ಪ್ರಸ್ತಾವನೆಗೈದರು, ಶಾಲೆಗೆ ಬೆಂಚು, ಡೆಸ್ಕ್ ಕೊಡುಗೆ ನೀಡಿದ ದಾನಿಗಳಾದ ಶ್ರೀಮತಿ ಲೀಲಾವತಿ ಗಿರಿಯಪ್ಪ ಪೂಜಾರಿ ಸೊರಗೆದಡಿ, ಶ್ರೀಮತಿ ಮತ್ತು ಬಾಬು ಗೌಡ ಮಡ್ಯಲಕಂಡ, ನಡುಮಜಲು ಕುಟುಂಬಸ್ಥರು, ಶ್ರೀಮತಿ ವಾರಿಜ ಮತ್ತು ಧರ್ಣಪ್ಪ ಪೂಜಾರಿ ನೂಜಿ ಇವರುಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಪ್ರಾರ್ಥನೆಗೈದು, ಶಿಕ್ಷಕರಾದ ದಿನೇಶ್ ಸ್ವಾಗತಿಸಿ, ಸಹಶಿಕ್ಷಕಿ ರಾಜಶ್ರೀ ನಿರೂಪಿಸಿ, ಶಿಕ್ಷಕರಾದ ಶ್ರೀಧರ್ ಧನ್ಯವಾದವಿತ್ತರು, ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು, ಬಹುಮಾನ ವಿಜೇತರ ಪಟ್ಟಿಯನ್ನು ಪ್ರಭು ನಾಯ್ಕ ಎಲ್, ಸುಶೀಲಾ, ಅರ್ಚನಾ, ವೀಕ್ಷಿತಾ ಇವರುಗಳು ವಾಚಿಸಿದರು, ತೀರ್ಥ ಕುಮಾರಿ ಸಾoಸ್ಕೃತಿಕ ಸಂಯೋಜನೆ ಮಾಡಿದರು. ಪೋಷಕರು, ಗ್ರಾಮಸ್ಥರು, ಹಿರಿಯ ವಿದ್ಯಾರ್ಥಿಗಳಿಗೆ ಹಗ್ಗಜಗ್ಗಾಟ ಸ್ಪರ್ಧೆಯು ನೇರವೇರಿತು. ಹಿರಿಯ ವಿದ್ಯಾರ್ಥಿಗಳು, ಪೋಷಕರು, ವಿದ್ಯಾಭಿಮಾನಿಗಳು, ಶಿಕ್ಷಕ ವೃಂದ ಸಿಬ್ಬಂದಿ ವರ್ಗ ಸಹಕರಿಸಿದರು.

Related posts

ಪಡಂಗಡಿ ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮದ್ದಡ್ಕ ಒಕ್ಕೂಟ ಹಾಗೂ ಶೌರ್ಯ ವಿಪತ್ತು ಘಟಕದಿಂದ ಸ್ವಚ್ಛತಾ ಕಾರ್ಯಕ್ರಮ

Suddi Udaya

ಓಡಿಲ್ನಾಳ : ಮೈರಲ್ಕೆ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರಥಮ ವರ್ಷದ ಶ್ರೀ ಶಾರದೋತ್ಸವ: ಧಾರ್ಮಿಕ ಸಭೆ

Suddi Udaya

ಮಡಂತ್ಯಾರು: ಹೊಂಡಗಳಿಂದ ಹದಗೆಟ್ಟ ರಸ್ತೆ: ಬಿಎಂಎಸ್ ರಿಕ್ಷಾ ಚಾಲಕರಿಂದ ಹೊಂಡ ಮುಚ್ಚುವ ಕಾರ್ಯ

Suddi Udaya

ಮುಂಡಾಜೆ ನಶಾ ಮುಕ್ತ ಭಾರತ ಅಭಿಯಾನ ಕಾರ್ಯ ಕ್ರಮ

Suddi Udaya

ಉಜಿರೆ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಭಟ್ ರವರ “ಅಮ್ಮ ಹೇಳಿದ ಕತೆಗಳು” ಪುಸ್ತಕ ಬಿಡುಗಡೆ

Suddi Udaya

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವತಿಯಿಂದ ಶಾಸಕ ಹರೀಶ್ ಪೂಂಜರ ಭೇಟಿ

Suddi Udaya
error: Content is protected !!