March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಳಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಪ್ಯೂಟರ್ ಕೊಠಡಿಗೆ ಶಿಲಾನ್ಯಾಸ

ಬಳಂಜ: ಹಿರಿಯರು ಗ್ರಾಮದ ವಿದ್ಯಾರ್ಥಿಗಳು ಶಿಕ್ಷಣವಂತರಾಗಬೇಕು ಎಂದು ಕಷ್ಟದ ಸಮಯದಲ್ಲಿ ಶಾಲೆ ಪ್ರಾರಂಭಿಸಿದ ಪರಿಣಾಮ ಸಾವಿರಾರು ಮಕ್ಕಳು ಶಿಕ್ಷಣ ಪಡೆದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಇಂತಹ ಹಿರಿಯರ ಕೊಡುಗೆಯನ್ನು ಮರೆಯಬಾರದು.ಈ ನಿಟ್ಟಿನಲ್ಲಿ ಬಳಂಜದಲ್ಲಿ ಇವರ ಸೇವೆಯನ್ನು ಮುಂದುವರೆಸುವ ಕಾರ್ಯ ನಡೆಯುತ್ತಿದ್ದು ಇದು ಇತರರಿಗೆ ಮಾದರಿಯಾಗಿದೆ. ಸರಕಾರಿ ಶಾಲೆ ಉಳಿಸಿ ಬೆಳೆಸಲು ಗ್ರಾಮಸ್ಥರ ಕೊಡುಗೆ ಅಗತ್ಯ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ, ಮಂಗಳೂರು ಮೆಸ್ಕಾಂ ಅದ್ಯಕ್ಷ ಕೆ ಹರೀಶ್ ಕುಮಾರ್ ಹೇಳಿದರು.

ಅವರು ಡಿ.12ರಂದು ಬಳಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಳಂಜ ಶಿಕ್ಷಣ ಟ್ರಸ್ಟ್ ನ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ 4 ನೇ ತರಗತಿಯಿಂದ 10 ನೇ ತರಗತಿ ಮಕ್ಕಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣಕ್ಕೆ ಮಂಗಳೂರು ಮೆಸ್ಕಾಂ ಅದ್ಯಕ್ಷ ಕೆ ಹರೀಶ್ ಕುಮಾರ್ ಅವರ ಶಿಪಾರಸ್ಸಿನಂತೆ ಎಂ ಅರ್ ಪಿ ಎಲ್ ನ ಸಿ ಎಸ್ ಅರ್ ಅನುದಾನದಿಂದ 15 ಲಕ್ಷ ರೂ ಮಂಜೂರುಗೊಳಿಸಿದ್ದು ಇದರ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಸರಕಾರ ಸರಕಾರಿ ಶಾಲೆಯಲ್ಲಿ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು ಗುಣಾತ್ಮಕ ಶಿಕ್ಷಣ ಸಹಕಾರಿಯಾಗಿದೆ. ಸರಕಾರಿ ಶಾಲೆಯಲ್ಲಿ ಕಲಿತ ಅನೇಕರು ಅತ್ಯುತ್ತಮ ಸಾಧಕರಾಗಿದ್ದಾರೆ. ಇದರಿಂದ ಸರಕಾರಿ ಶಾಲೆಯಲ್ಲಿ ಕಲಿಯುತ್ತಿದ್ದೇವೆ ಎಂಬ ಕೀಳರಿಮೆ ಮಾಡಬಾರದು ಎಂದರು. ಬಳಂಜ ಶಾಲೆಯಲ್ಲಿ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣದ ಜೊತೆಗೆ ಕಂಪ್ಯೂಟರ್ ಶಿಕ್ಷಣ ನೀಡುವ ಚಿಂತನೆ ಅಬಿನಂದನೀಯ ಎಂದರು.

ಬಳಂಜ ಶಾಲಾ ಅಮ್ರುತ ಮಹೋತ್ಸವ ಅದ್ಯಕ್ಷ ಚಂದ್ರಶೇಖರ ಪಿ ಕೆ ಮಾತನಾಡಿ ಬಳಂಜ ಶಿಕ್ಷಣ ಟ್ರಸ್ಟ್, ಅಮೃತ ಮಹೋತ್ಸವ ಸಮಿತಿ, ಹಳೆವಿದ್ಯಾರ್ಥಿ ಸಂಘ ,ಯುವಕ ಮಂಡಲ,ಮಹಿಳಾ ಮಂಡಲ ಹಾಗೂ ಇತರ ಅನೇಕ ಸಂಘ ಸಂಸ್ಥೆಗಳು ಶಾಲೆಯ ಅಭಿವೃದ್ದಿಗೆ ಶ್ರಮಿಸುತ್ತಿದೆ ಎಂದರು.

ನಮ್ಮ ಬಳಂಜ ಶಾಲೆಯ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಜೊತೆ ಸರಕಾರಿ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಸಂಸ್ಕಾರಯುತ ಶಿಕ್ಷಣ ಸಿಗಬೇಕು ಎಂದು ಬಳಂಜ ಶಿಕ್ಷಣ ಟ್ರಸ್ಟ್ ಉದ್ದೇಶ .ಈಗಾಗಲೇ ಟ್ರಸ್ಟ್ ವತಿಯಿಂದ ಉಚಿತ ಎಲ್ ಕೆಜಿ- ಯು ಕೆ ಜಿ ಶಿಕ್ಷಣ ನೀಡುತ್ತಿದ್ದು ಮುಂದೆ 6 ನೇ ತರಗತಿಯಿಂದ ಉಚಿತ ಕಂಪ್ಯೂಟರ್ ತರಬೇತಿ ನೀಡಲು ಚಿಂತಿಸಿದ್ದೇವೆ.ಇದಕ್ಕೆ ಕೊಠಡಿಯ ಅಗತ್ಯತೆ ಬಗ್ಗೆ ಮಾಜಿ ವಿಧಾನ ಪರಿಷತ್ ಸದಸ್ಯರು, ಮಂಗಳೂರು ಮೆಸ್ಕಾಂ ಅದ್ಯಕ್ಷ ಕೆ ಹರೀಶ್ ಕುಮಾರ್ ರವರಲ್ಲಿ ಮನವಿ ಮಾಡಿದಾಗ ಎಂ ಅರ್ ಪಿ ಎಲ್ ಕಂಪೆನಿ ಮುಖಾಂತರ ಕೊಠಡಿ ನೀಡಿದ್ದಾರೆ. ಇದು ಸರಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಬೆಳವಣಿಗೆ ನೀಡಿದ ಸಹಕಾರ. ಅಲ್ಲದೆ ಶಾಲಾ ಕ್ರೀಡಾಂಗಣ ಅಭಿವೃದ್ದಿ ಶ್ರಿ ಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನೆರವು ಮಂಜೂರುಗೊಳಿಸಿದ್ದಾರೆ. ಶಾಲೆಯ ಅಭಿವೃದ್ದಿ, ಶಿಕ್ಷಣದ ಕೊಡುಗೆಯೇ ನಮ್ಮ ಉದ್ದೇಶ.


ಮನೋಹರ್ ಬಳಂಜ ಪತ್ರಕರ್ತರು, ಅದ್ಯಕ್ಷರು ಬಳಂಜ ಶಿಕ್ಷಣ ಟ್ರಸ್ಟ್ ರಿ ಬಳಂಜ

ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ರತ್ನಾಕರ್,, ಅಮೃತ ಮಹೋತ್ಸವ ಸಮಿತಿಯ ಗೌರವಾದ್ಯಕ್ಷ ಸುರೇಶ್ ಶೆಟ್ಟಿ ಕುರೇಲ್ಯ, ಪ್ರದಾನ ಸಂಚಾಲಕ ಅಶ್ವಥ್ ಹೆಗ್ಡೆ, ಸ್ಮರಣ ಸಂಚಿಕೆ ಸಂಚಾಲಕ ದಿನೇಶ್ ಪಿ.ಕೆ, ಅಳದಂಗಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕ ದೇಜಪ್ಪ ಪೂಜಾರಿ, ಬಳಂಜ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ರತ್ನರಾಜ್ ಜೈನ್ ಪೇರಂದಬೈಲ್, ಟ್ರಷ್ಡಿಗಳಾದ ಪ್ರಮೋದ್ ಜೈನ್, ಸಂತೋಷ್ ಕಾಪಿನಡ್ಕ, ಉದ್ಯಮಿ ದೀಪಕ್ ಹೆಚ್ ,ಡಿ, ಅಶ್ವಿನ್ ಬಳಂಜ, ಡೀಕಯ್ಯ ಕೆ, ಬಳಂಜ ಗ್ರಾಮ ಪಂಚಾಯತಿ ಅದ್ಯಕ್ಷೆ ಶೋಭಾ ಕುಲಾಲ್, ಹಳೆವಿದ್ಯಾರ್ಥಿ ಸಂಘದ ಅದ್ಯಕ್ಷ ಹರೀಶ್ ವೈ, ಮಹಿಳಾ ಮಂಡಲದ ಅದ್ಯಕ್ಷೆ ಚೇತನಾ, ಯುವಕ ಮಂಡಲದ ಅದ್ಯಕ್ಷ ಸುಕೇಶ್ ಹಾಣಿಂಜ. ಬಳಂಜ ಪಂಚಲಿಂಗೇಶ್ವರ ದೇವಸ್ಥಾನದ ಅಡಳಿತ ಮೊಕ್ತೆಸರ ಶೀತಲ್ ಪಡಿವಾಳ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ರಂಗಸ್ವಾಮಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸುಲೋಚನ, ಪಿ ಡ್ಯಬ್ಯುಡಿ ಇಂಜಿನಿಯರ ಸೂರಜ್, ಪ್ರಗತಿಪರ ಕ್ರುಷಿಕ ದನ್ಯಕುಮಾರ್, ಶಿಕ್ಷಕರು, ಹಳೆವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಶಿಕ್ಷಕ ಕಿರಣ್ ಕಾರ್ಯಕ್ರಮ ನಿರೂಪಿಸಿದರು, ಮುಖ್ಯೋಪಾಧ್ಯಾಯಿನಿ ಸುಲೋಚನ ವಂದಿಸಿದರು.

Related posts

ಉಜಿರೆ: ಮಲೆಬೆಟ್ಟುನಲ್ಲಿ ರೈತರಿಗೆ ಹೊರ ಆವರಣ ಕೃಷಿ ತರಬೇತಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ 666ನೇ ವಾತ್ಸಲ್ಯ ಮನೆ ಹಸ್ತಾಂತರ ಹಾಗೂ ಮಾಸಾಶನ ಜನಮಂಗಳ ಕಾರ್ಯಕ್ರಮ: ಪರೋಪಕಾರ ಮತ್ತು ಭಕ್ತಿಯ ಭಗವಂತನ ಆರಾಧನೆಯಿಂದ ಜೀವನ ಪಾವನ: ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು

Suddi Udaya

ಕೊಕ್ಕಡ: ಡಾ.ಬಿ ಮೋಹನ್ ದಾಸ್ ಗೌಡ ರವರ 90ನೇ ವರ್ಷದ ನವತಿ ಕಾರ್ಯಕ್ರಮ

Suddi Udaya

ವೇಣೂರಿನಲ್ಲಿ ಕ್ರಿಸ್ಮಸ್ ಸೌಹಾರ್ದ ಕೂಟ

Suddi Udaya

ಜು.10-ಆ.20: ಕುಮುಟಾ ಕೋನಳ್ಳಿ ವನದುರ್ಗಾ ದೇಗುಲದಲ್ಲಿ ಮಹಾಮಂಡಲೇಶ್ವರ ಕನ್ಯಾಡಿ ಶ್ರೀಗಳ ಚಾತುರ್ಮಾಸ್ಯ ವ್ರತ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ

Suddi Udaya
error: Content is protected !!