March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ ಪಿಲಿಚಾಮುಂಡಿಕಲ್ಲಿನಲ್ಲಿ ದೊಂಪದ ಬಲಿ ಉತ್ಸವ

ಗುರುವಾಯನಕೆರೆ: ಕುವೆಟ್ಟು ಗ್ರಾಮ ಗುರುವಾಯನಕೆರೆ ಪಿಲಿಚಾಮುಂಡಿ ಕಲ್ಲಿನಲ್ಲಿ ದೊಂಪದಬಲಿ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ವರ್ಷಂಪ್ರತಿ ನಡೆಯುವ ಕಾರಣಿಕ ದೈವ ಶ್ರೀ ಪಿಲಿಚಾಮುಂಡಿ ದೈವದ ದೊಂಪದ ಬಲಿ ಉತ್ಸವವು ಡಿ.13ರಂದು ಸಂಭ್ರಮ ಸಡಗರದಿಂದ ನಡೆಯಿತು.

ಸಂಜೆ 7ಕ್ಕೆ ಪಾಡ್ಯಾರುಬೀಡು ಮನೆಯಿಂದ ಭವ್ಯವಾದ ಮೆರವಣಿಗೆಯಲ್ಲಿ ದೈವದ ಭಂಡಾರವನ್ನು ಪಿಲಿಚಾಮುಂಡಿ ಕಲ್ಲಿಗೆ ತರಲಾಯಿತು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ 10ರಿಂದ ರಾತ್ರಿ 2 ಗಂಟೆಯ ತನಕ ಕಾರಣಿಕ ದೈವ ಶ್ರೀ ಪಿಲಿಚಾಮುಂಡಿ ದೈವದ ದೊಂಪದಬಲಿ ಉತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ಊರು ಹಾಗೂ ಪರವೂರಿನಿಂದ ಬೃಹತ್ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀ ಪಿಲಿಚಾಮುಂಡಿ ದೈವದ ಗಂಧಪ್ರಸಾದವನ್ನು ಸ್ವೀಕರಿಸಿ ಧನ್ಯತೆಯನ್ನು ಪಡೆದರು.
ಸಮಿತಿಯ ಗೌರವಾಧ್ಯಕ್ಷರು ಅಧ್ಯಕ್ಷರು, ಪದಾಧಿಕಾರಿಗಳು ಸಹಕಾರ ನೀಡಿದರು.

Related posts

ಜಿತೇಶ್‌ನ ಮನೆಗೆ ಭೇಟಿ ನೀಡಿದ ಕಿರಣ್‌ಚಂದ್ರ ಪುಷ್ಪಗಿರಿ

Suddi Udaya

ಅರಸಿನಮಕ್ಕಿ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Suddi Udaya

ಉಜಿರೆ ಎಸ್‌.ಡಿ.ಎಂ (ಸಿ.ಬಿ.ಎಸ್.ಇ) ಶಾಲೆಯ ಶಿಕ್ಷಕರಿಗೆ “ಸಾಧ್ಯತೆಗಳ ಹಾದಿಗಳು: ವೈಯಕ್ತಿಕ ಕಲಿಕೆಯ ವಿನ್ಯಾಸ” ಕಾರ್ಯಾಗಾರ

Suddi Udaya

ಮಿತ್ತಬಾಗಿಲು: ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಮಾರಾಕಾಸ್ತ್ರದಿಂದ ಹಲ್ಲೆ

Suddi Udaya

ವೇಣೂರು: ಬಜಿರೆ ನಿವಾಸಿ ಶ್ರೀಮತಿ ವಸಂತಿ ನಿಧನ

Suddi Udaya

ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಯಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ

Suddi Udaya
error: Content is protected !!