ಸಾವ್ಯ ಗ್ರಾಮದ ಕರ್ಪೋಟ್ಟು ಅನುರಾಧ ನಿವಾಸದ ದಿ. ಶಿವಣ್ಣ ಪೂಜಾರಿ ಅವರ ಧರ್ಮಪತ್ನಿ ಶ್ರೀಮತಿ ರಾಧಾ (72ವ) ಅವರು ಹೃದಯಾಘಾತದಿಂದ ಸ್ವಗೃಹದಲ್ಲಿ ಡಿ. 14ರಂದು ನಿಧನರಾದರು.
ಮೃತರು ಕುಟುಂಬದೊಂದಿಗೆ ಹಾಗೂ ಊರಿನಲ್ಲಿ ಎಲ್ಲರೊಂದಿಗೂ ಒಳ್ಳೆಯ ಬಾಂಧವ್ಯ ಹೊಂದಿದ್ದರು.
ಇವರು ಎಂಟು ಮಕ್ಕಳಾದ ಸುರೇಶ್ ಪೂಜಾರಿ ಉಜಿರೆ, ರಮೇಶ್ ಪೂಜಾರಿ ಸಾವ್ಯ, ಗಣೇಶ್ ಪೂಜಾರಿ ಸಾವ್ಯ, ಶುಭಕರ ಪೂಜಾರಿ ಸಾವ್ಯ,ವಿಮಲ ಧರ್ಮಸ್ಥಳ, ರೇವತಿ ಮಂಗಳೂರು, ಸತೀಶ್ ಪೂಜಾರಿ ಉಜಿರೆ, ದಿನೇಶ್ ಕೋಟ್ಯಾನ್ ಸಾವ್ಯ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.











