March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸ್ಟಾರ್ ಲೈನ್ ಶಾಲೆಯಲ್ಲಿ ಸಂಭ್ರಮದ ಫಿಟ್ ಫೆಸ್ಟ್ : ವಾರ್ಷಿಕ ಕ್ರೀಡಾಕೂಟ :

ನಡ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ರಝಾ ಗಾರ್ಡನ್ ಮಂಜೊಟ್ಟಿ ಇಲ್ಲಿ 2025- 26 ನೇ ಸಾಲಿನ” ಫಿಟ್ ಫೆಸ್ಟ್ “ವಾರ್ಷಿಕ ಕ್ರೀಡಾಕೂಟವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು.

ಧ್ವಜಾರೋಹಣ ಕಾರ್ಯಕ್ರಮವನ್ನು ರಾಷ್ಟ್ರ ಶಿಕ್ಷಕ ಪ್ರಶಸ್ತಿ ವಿಜೇತ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನಾವೂರು ಇಲ್ಲಿಯ ಶಿಕ್ಷಕ ಅಮಿತಾನಂದ ಹೆಡ್ಡೆ ನೆರವೇರಿಸಿಕೊಟ್ಟರು. ಅತಿಥಿಗಳಾಗಿ ಶಾಲಾ ಆಡಳಿತ ಟ್ರಸ್ಟಿನ ಕಾರ್ಯದರ್ಶಿಯಾದ ಸಯ್ಯದ್ ಅಯ್ಯುಬ್, ಕೋಶಾಧಿಕಾರಿಯದ ಸಯ್ಯದ್ ಇರ್ಫಾನ್ ಹಾಗೂ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಾಕಿನ್ ಬಿನ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯನಿ ಪ್ರಾಸ್ತಾವಿಕ ಮಾತನಾಡಿದರು.

ಕ್ರೀಡಾ ಜ್ಯೋತಿಯ ಆಗಮನದ ಬಳಿಕ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯ ಅತಿಥಿಯವರು ಮಾತನಾಡಿ ” ನಿಷ್ಕಲ್ಮಶ ಮತ್ತು ಹೃದಯ ವೈಶಾಲ್ಯತೆಯ ಮನಸ್ಸಿರುವ ವ್ಯಕ್ತಿಗಳ ಸದೃಢ ಸಾಧನೆಯ ಪ್ರತಿಫಲವೇ ಸ್ಟಾರ್ ಲೈನ್ ವಿದ್ಯಾ ಸಂಸ್ಥೆ. ವಿದ್ಯಾರ್ಥಿಗಳಿಗೆ ನೀಡುತ್ತಿರುವ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಕ್ರೀಡಾ ಲೋಕದ ಸಾಧನೆ ಶಾಲೆಯ ಹೆಸರನ್ನು ಉನ್ನತ ಮಟ್ಟಕ್ಕೇರಿಸಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಾಬ್ ಸಯ್ಯದ್ ಹಬೀಬ್ ಸಾಹೇಬ್ ವಹಿಸಿ ಮಾತನಾಡಿ ಶಾಲಾ ಆಡಳಿತ ಟ್ರಸ್ಟಿನ ಸಂಚಾಲಕರು ” ಆಟ ಮತ್ತು ಪಾಠ ಶಿಕ್ಷಣದ ಎರಡು ಮುಖಗಳಿದ್ದಂತೆ, ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಹೇಳಿ ಕ್ರೀಡಾಕೂಟಕ್ಕೆ ಶುಭವನ್ನು ಕೋರಿದರು.

ಹತ್ತನೇ ತರಗತಿಯ ವಿದ್ಯಾರ್ಥಿ ಮಹಮ್ಮದ್ ಝಿಶಾನ್ ಕಾರ್ಯಕ್ರಮವನ್ನು ನಿರೂಪಿಸಿದರು. ಹತ್ತನೆ ತರಗತಿಯ ಶಿಫಾನ್ ಸ್ವಾಗತಿಸಿದರು. ಹತ್ತನೇ ತರಗತಿಯ ವಿದ್ಯಾರ್ಥಿನಿ ಅಫ್ರಾ ಆಶೀಯಾನ ಧನ್ಯವಾದವಿತ್ತರು. ನಂತರ ನಡೆದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಆಟೊಟ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಣೆಯನ್ನು ಮಾಡಲಾಯಿತು.

Related posts

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನಕ್ಕೆ ಹೈ ಮಾಸ್ಕ್ ದೀಪದ ಕೊಡುಗೆ ನೀಡಿದ ವಿಧಾನ ಪರಿಷತ್ತು ಶಾಸಕ ಪ್ರತಾಪ್ ಸಿಂಹ ನಾಯಕ್

Suddi Udaya

ಬೆಳ್ತಂಗಡಿ: ಪರಿಶಿಷ್ಟ ಜಾತಿ/ ಪಂಗಡಗಳ ಕುಂದುಕೊರತೆಗಳ ಸಭೆ

Suddi Udaya

ಫಾತಿಮಾ ಹೆಲ್ತ್ ಫೌಂಡೇಶನ್, ಇಂಡಿಯಾನ ಆಸ್ಪತ್ರೆಯಿಂದ ಸೇವಾ ಯೋಜನೆಯಿಂದ ಮದ್ದಡ್ಕದಲ್ಲಿ 68 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ

Suddi Udaya

ಪುಂಜಾಲಕಟ್ಟೆ : ನಯನಾಡು ಸಮೀಪ ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

Suddi Udaya

ಬೈಕ್ ಅಪಘಾತ: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಅಶೋಕ ಕುಮಾರ್ ನಿಧನ

Suddi Udaya

ನಾಲ್ಕೂರು: ಅನಾರೋಗ್ಯದಿಂದ ಸುಶೀಲ ಜೈಮಾತಾ ನಿಧನ

Suddi Udaya
error: Content is protected !!