ಶಿವಮೊಗ್ಗ : ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಆರೋಪಿ ಚಿನ್ನಯ್ಯನಿಗೆ ಬೆಳ್ತಂಗಡಿ ನ್ಯಾಯಾಲಯದಲ್ಲಿ ಡಿ.17 ರಂದು ಸಂಜೆ ಬಿಡುಗಡೆ ಆದೇಶ ಬೆನ್ನಲ್ಲೇ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಡಿ.18 ರಂದು ಬೆಳಗ್ಗೆ 8:30 ಕ್ಕೆ ಬಿಡುಗಡೆಯಾಗಿದ್ದಾನೆ. ಚಿನ್ನಯ್ಯ ಪತ್ನಿ ಮಲ್ಲಿಕಾ ಮತ್ತು ಸಹೋದರಿ ರತ್ನ ಜೊತೆಯಲ್ಲಿ ಬಾಡಿಗೆ ಕಾರಿನಲ್ಲಿ ಊರಿನತ್ತ ಪ್ರಯಾಣ ಮಾಡಿದ್ದಾರೆ.






