March 7, 2026
ಚಿತ್ರ ವರದಿತಾಲೂಕು ಸುದ್ದಿ

ಕೊಕ್ರಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳ ಸಮಾರೋಪ ಸಮಾರಂಭ ಪ್ರತಿಭಾ ದಿನ

ಕೊಕ್ರಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ 2025 -26ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಸಮಾರೋಪ ಸಮಾರಂಭ ಪ್ರತಿಭಾ ದಿನ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಕ್ರಾಡಿ ಹೈಸ್ಕೂಲ್ ಬೆಟರ್ ಮೆಂಟ್ ಟ್ರಸ್ಟ್ಅಧ್ಯಕ್ಷ ದೇವೇಂದ್ರ ಹೆಗ್ಡೆ ವಹಿಸಿದ್ದರು.

ಲೋಕೋಪಯೋಗಿ ಇಲಾಖೆ ನಿವೃತ್ತ ಮುಖ್ಯ ಅಭಿಯಂತರರು ಶಿವಪ್ರಸಾದ್ ಅಜಿಲ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಶಶಿಧರ್ ಜಿ.ಎಸ್. , ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ತಾರಕೇಸರಿ, ಕೊಕ್ರಾಡಿ ಹೈಸ್ಕೂಲ್ ಬೆಟರ್ಮೆಂಟ್ ಟ್ರಸ್ಟ್‌ ಅಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಕೊಕ್ರಾಡಿ ಸರಕಾರಿ ಪದವಿ ಪೂರ್ವ ಕಾಲೇಜು ಉಪಾಧ್ಯಕ್ಷ ಮೋಹನ್ ಅಂಡಿಂಜೆ , ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ಜಗದೀಶ್ ಹೆಗ್ಡೆ, ಕೊಕ್ರಾಡಿ ಸರಕಾರಿ ಪ್ರೌಢಶಾಲೆ ಪ್ರಾಂಶುಪಾಲರು ದಯಾನಂದ ಉಪಸ್ಥಿತರಿದ್ದರು.

ಈ ವೇಳೆ ನಿವೃತ್ತ ಮುಖ್ಯ ಅಭಿಯಂತರರು ಶಿವಪ್ರಸಾದ್ ಅಜಿಲ, ಶಾಲೆಯ ಹಿರಿಯ ವಿದ್ಯಾರ್ಥಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹರೀಶ್ , ಹಿರಿಯ ವಿದ್ಯಾರ್ಥಿಗಳು ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಹೆಗ್ಡೆ, ಜಗದೀಶ್ ಹೆಗ್ಡೆ, ಪರಮೇಶ್, ಸರೋಜಾ ಹಾಗೂ ಕಳೆದ ವರ್ಷ ಎಸ್ ಎಸ್. ಎಲ್. ಸಿ ಯಲ್ಲಿ ಅತ್ಯುತ್ತಮ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ನಂತರ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬೆಳಾಲು ಎಸ್.ಡಿ.ಎಂ ಮುಖ್ಯ ಶಿಕ್ಷಕ ಜಯರಾಮ್ ಮಯ್ಯ, ಎಸ್.ಡಿ.ಎಂ.ಸಿ ಗಣೇಶ್, ಲಕ್ಷ್ಮಣ ಪೂಜಾರಿ, ನೀಲಕಂಠ, ಶ್ರೀಮತಿ ಜಯಂತಿ ಲೋಕಯ್ಯ ಪೂಜಾರಿ, ಶಾಲಾ ಅಧ್ಯಾಪಕರಾದ ಶ್ರೀಮತಿ ಲವೀನಾ ವೀಣಾ ಡಯಾಸ್, ಶ್ರೀಮತಿ ಉಷಾರಾಣಿ, ಪ್ರಕಾಶ್ ಬಿ. ಆರ್ ಉಪಸ್ಥಿತರಿದ್ದರು.

ಶ್ರೀಮತಿ ಅಸ್ಮಾ ಸ್ವಾಗತಿಸಿ, ಮುಖ್ಯ ಶಿಕ್ಷಕ ಮಹಮದ್ ರಿಯಾಜ್ ಪ್ರಾಸ್ತವಿಕ ಮಾತು ಮತ್ತು ವರದಿ ವಾಚಿಸಿದರು.
ಶ್ರೀಮತಿ ವಿದ್ಯಾ ಧನ್ಯವಾದವಿತ್ತರು. ಶ್ರೀಮತಿ ಅಕ್ಕಮ್ಮ ನಿರೂಪಿಸಿದರು.

Related posts

ನಾಲ್ಕೂರು ಗ್ರಾಮದ ಅಲೈಮಾರ್ ನಲ್ಲಿ ರಸ್ತೆ ದುರಸ್ಥಿ,

Suddi Udaya

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ಮಹಿಳೆಯ ಬ್ಯಾಗಿನಲ್ಲಿದ್ದ ಪರ್ಸಿನಿಂದ ರೂ 2.16ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ರೂ. 5 ಸಾವಿರ ನಗದು ಕಳವು

Suddi Udaya

ಚಾರ್ಮಾಡಿ: ಇರ್ಫಾನ್ ಅಸೌಖ್ಯದಿಂದ ನಿಧನ

Suddi Udaya

ಗಂಡಿಬಾಗಿಲು: ಸಿಯೋನ್ ಆಶ್ರಮದಲ್ಲಿ 26ನೇ ವಾರ್ಷಿಕೋತ್ಸವ ಆಚರಣೆ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಮುಂಡಾಜೆ: ಚಿತ್ಪಾವನ ಸಂಘಟನೆಯ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಸುಶ್ಮಾ ಶಶಾಂಕ ಭಿಡೆ

Suddi Udaya
error: Content is protected !!