March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮುಂಡಾಜೆ: ಟೈಲರಿಂಗ್ ತರಬೇತಿ ಸಮಾರೋಪ ಸಮಾರಂಭ

ಮುಂಡಾಜೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಮುಂಡಾಜೆ ವಲಯದ ಕಡಿರುದ್ಯಾವರ ಕಾರ್ಯಕ್ಷೇತ್ರದಲ್ಲಿ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ಮೇರಿ ಅಬ್ರಹಾಂ ರವರ ಮನೆಯಲ್ಲಿ ನಡೆಸಲಾಗಿದ್ದು ಇದರ ಸಮಾರೋಪ ಸಮಾರಂಭವನ್ನು ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲೆಯ ನಿರ್ದೇಶಕ ದಿನೇಶ್ ಡಿ ದೀಪ ಬೆಳಗಿಸಿ ಅವಕಾಶವನ್ನು ಬಳಸಿಕೊಂಡು ಉತ್ತಮ ರೀತಿಯಲ್ಲಿ ತೊಡಗಿಸಿಕೊಂಡಲ್ಲಿ ಅಬಿವೃದ್ದಿ ಸಾಧ್ಯ ಮನೆಯಲ್ಲಿಯೇ ಇದ್ದುಕೊಂಡು ಸ್ಪ ಉದ್ಯೋಗ ಮಾಡಿ ಆದಾಯ ಪಡೆಯಲು ಟೈಲರಿಂಗ್ ಉದ್ಯೋಗ ಉತ್ತಮವಾಗಿದೆ. ಕ್ಷೇತ್ರದಿಂದ ಈ ಒಂದು ತರಬೇತಿ ಪಡೆಯಲು ಅವಕಾಶ ಕಲ್ಪಿಸಿದ್ದು ಇನ್ನೂ CRE ಮತ್ತು ರುಡ್ ಸೆಟ್ ಮೂಲಕ ಹೆಚ್ಚಿನ ತರಬೇತಿ ಪಡೆಯಬಹುದು.ಅವಶ್ಯಕತೆ ಇದ್ದಲ್ಲಿ ಸಿಡ್ನಿ ಸಾಲ ಪಡೆಯಬಹುದು ಎಂದು ತಿಳಿಸಿದರು.

ಸಿ ಎ ಬ್ಯಾಂಕ್ ಉಪಾಧ್ಯಕ್ಷ ಆನಂದ ರವರು ನಮ್ಮ ಊರಿನ ಮಹಿಳೆಯರಿಗೆ ಸ್ವಉದ್ಯೋಗ ಮಾಡಲು ತರಬೇತಿಗೆ ಅವಕಾಶ ಕಲ್ಪಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಾವತಿ ಮಾತನಾಡುತ್ತ ನಾನು ಇವತ್ತು ಈ ವೇದಿಕೆಯಲ್ಲಿ ನಿಂತು ಧೈರ್ಯದಿಂದ ಮಾತನಾಡ ಬೇಕಾದರೆ ಜ್ಞಾನ ವಿಕಾಸ ಕೇಂದ್ರವೇ ಪ್ರೇರಣೆಯಾಗಿದೆ . ಇವತ್ತಿನ ಕಾರ್ಯಕ್ರಮದ ಸದುಪಯೋಗವನ್ನೂ ಪಡೆದುಕೊಂಡು ನಿಮ್ಮ ಅದಾಯವನ್ನು ಹೆಚ್ಚಿಸಿಕೊಳ್ಳಿ ಎಂದು ತಿಳಿಸಿದರು.

ಟೈಲರಿಂಗ್ ತರಬೇತಿ ಪಡೆದ ಸದಸ್ಯರು ಹಾಗೂ ಶಿಕ್ಷಕರು ಅನಿಸಿಕೆಯನ್ನು ವ್ಯಕ್ತ ಪಡಿಸಿದರು. ವೇದಿಕೆಯಲ್ಲಿ ಯೋಜನಾಧಿಕಾರಿ ಯಶೋಧರ , ಮನೆಯ ಹಿರಿಯರಾದ ಅಬ್ರಹಾಂ , ಮಲ್ಲಡ್ಕ ಒಕ್ಕೂಟ ಅಧ್ಯಕ್ಷ ಗೋಪಾಲ, ಟೈಲರಿಂಗ್ ತರಬೇತಿ ಶಿಕ್ಷಕಿ ಪುಷ್ಪ , ಮೇಲ್ವಿಚಾರಕರಾದ ಜನಾರ್ದನ್ ಉಪಸ್ಥಿತರಿದ್ದರು. ಜ್ಞಾನ ವಿಕಾಸ ಸಮನ್ವಯಧಿಕಾರಿ ಮಧುರಾವಸಂತ್ ನಿರೂಪಿಸಿ, ದಿವ್ಯ ಸ್ವಾಗತಿಸಿ ಸೇವಾಪ್ರತಿನಿಧಿ ರಶ್ಮಿ ಧನ್ಯವಾದ ನೀಡಿದರು.

Related posts

17 ವರ್ಷಗಳಿಂದ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬೆಳ್ತಂಗಡಿ ಸಂತೆಕಟ್ಟೆ ಬಳಿ ಬಂಧನ

Suddi Udaya

ಪ್ರಶಾಂತ್ ಲಾೖಲ ರವರಿಗೆ ಜೆಸಿಐ ಭಾರತದ ವಲಯ 15 ರ ಅತ್ಯುನ್ನತ “ಕಮಲ ಪತ್ರ” ಪ್ರಶಸ್ತಿ

Suddi Udaya

ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಮಟ್ಟದ ಅನುಷ್ಟಾನ ಸಮಿತಿ ಸಭೆ

Suddi Udaya

ಕಳಿಯ ಪ್ರಾ.ಕೃ.ಪ.ಸ. ಸಂಘಕ್ಕೆ ನೂತನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಕವಿತಾ ಅಧಿಕಾರ ಸ್ವೀಕಾರ

Suddi Udaya

ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ವತಿಯಿಂದ ಅಸಮರ್ಪಕ ಹಾಗೂ ಅವೈಜ್ಞಾನಿಕ ಬ್ರಹ್ಮರಕೊಟ್ಲು ಟೋಲ್ ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಬೆಳ್ತಂಗಡಿಯಲ್ಲಿ ಸಾರ್ವಜನಿಕ ಸಹಿ ಸಂಗ್ರಹ ಅಭಿಯಾನ

Suddi Udaya

ಅಳದಂಗಡಿ ಒಕ್ಕೂಟದ ಪದಾಧಿಕಾರಿಗಳ ಸಭೆ

Suddi Udaya
error: Content is protected !!