ಬೆಳ್ತಂಗಡಿ: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಬೆಳ್ತಂಗಡಿ ವತಿಯಿಂದ ತಾಲೂಕಿನ 19 ನೇ ಕನ್ನಡ ಸಾಹಿತ್ಯ ಸಮ್ಮೇಳನವು ಕೊಯ್ಯೂರು ಸರಕಾರಿ ಪ್ರೌಢ ಶಾಲೆಯಲ್ಲಿ ಡಿ.28 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಅಶೀರ್ವದಿಸಿದರು.
ಈ ವೇಳೆ ಕ.ಸಾ. ಪ ಜಿಲ್ಲಾಧ್ಯಕ್ಷ ಡಾ.ಎಂ ಪಿ ಶ್ರೀನಾಥ್, ತಾ. ಅಧ್ಯಕ್ಷ ಡಿ ಯದುಪತಿ ಗೌಡ, ಬೆಳ್ತಂಗಡಿ ಹೋಬಳಿ ಅಧ್ಯಕ್ಷ ಡಾ. ದಿವ ಕೊಕ್ಕಡ, ಸಂಯೋಜನಾ ಸಮಿತಿ ಕಾರ್ಯಾಧ್ಯಕ್ಷರುಗಳಾದ ಮೋಹನ ಗೌಡ ಕೊಯ್ಯೂರು ಮತ್ತು ರಾಧಾಕೃಷ್ಣ ತಚ್ಚಮೆ,
ಪ್ರಧಾನ ಕಾರ್ಯದರ್ಶಿ ಲೋಕೇಶ್ ಗೌಡ ಪಾಂಬೇಲು, ಸಂಘಟನಾ ಕಾರ್ಯದರ್ಶಿ ಕೇಶವ ಗೌಡ ಕೋಂಗುಜೆ, ಕೋಶಾಧಿಕಾರಿ ಸುಧಾಕರ ಶೆಟ್ಟಿ, ಪದಾಧಿಕಾರಿಗಳಾದ ಕೇಶವ ಗೌಡ ಕಂಗಿತ್ತಿಲು, ನವೀನ್ ಗೌಡ ವಾದ್ಯಕೋಡಿ, ರಾಜ್ಯ ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು.











