March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಜಾತಿನಿಂದನೆ ಮಾಡಿ ವ್ಯಕ್ತಿಯ ಕೊಲೆಗೆ ಯತ್ನ: ನಾವೂರು ನೌಷದ್ ನನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

ಬೆಳ್ತಂಗಡಿ: ಜಾತಿ ನಿಂದನೆ ಮಾಡಿ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಪ್ರಕರಣದ ಸಂಬಂಧ ಆರೋಪಿ ಆಂಬುಲೆನ್ಸ್ ಚಾಲಕ ನೌಷದ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ ಘಟನೆ ವರದಿಯಾಗಿದೆ.

ಪ್ರಕರಣ: ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಶಾಲೆಯೊಂದರಲ್ಲಿ ಡಿ.21 ರಂದು ರಾತ್ರಿ 9 ಗಂಟೆಗೆ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಇಂದಬೆಟ್ಟು ನಿವಾಸಿ ದಯಾನಂದ ಹಾಗೂ ಸ್ನೇಹಿತರಾದ ಆರೀಫ್ ಕಲ್ಲಾಜೆ, ಆಸೀಫ್ ಇಂದಬೆಟ್ಟು, ಸ್ವಾಲಿ ನಾವೂರ ಜೊತೆ ತೆರಳಿದ್ದು. ಸುಮಾರು ರಾತ್ರಿ 9:30 ರ ವೇಳೆಗೆ ಸ್ನೇಹಿತರಾದ ಆರೀಫ್ ಜೊತೆ ಆರೋಪಿ ಆಂಬುಲೆನ್ಸ್ ಚಾಲಕ ನಾವೂರು ನಿವಾಸಿ ನೌಷದ್ ಸ್ಥಳಕ್ಕೆ ಬಂದು ಕ್ಷುಲ್ಲಕ ವಿಚಾರದಲ್ಲಿ ಮಾತಿನ ಜಗಳವಾಡಿ ಕೈಯಿಂದ ಹಲ್ಲೆ ನಡೆಸಿದಾಗ ದಯಾನಂದರವರು ನೌಷದ್ ಗೆ ಬುದ್ದಿವಾದ ಹೇಳಿದಾಗ ದಯಾನಂದರವರಿಗೆ ಅವ್ಯಾಚ ಶಬ್ದಗಳಿಂದ ನಿಂದನೆ ಮಾಡಿ ಬಳಿಕ ಜಾತಿ ನಿಂದನೆ ಮಾಡಿ ಜೀವಬೆದರಿಕೆ ಹಾಕಿದ್ದಾನೆ.

ಇದನ್ನು ದಯಾನಂದ ಅವರು ಅಕ್ಷೇಪಿಸಿದಾಗ ಕೋಪಗೊಂಡ ನೌಷದ್ ಕೈಯಲ್ಲಿದ್ದ ಚಾಕುವಿನಿಂದ ಕೊಲೆ ಮಾಡುವ ಉದ್ದೇಶದಿಂದ ಚುಚ್ಚಲು ಬಂದಾಗ ಎಡ ಕೈಯಿಂದ ತಡೆಯುವಾಗ ದಯಾನಂದರವರ ಎಡಕೈಗೆ ಚೂರಿ ಚುಚ್ಚಿ ಗಾಯಗೊಳಿಸಿದ್ದು. ಬಳಿಕ ಸ್ನೇಹಿತರು ಸೇರಿ ದಯಾನಂದ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಯುವತಿಗೆ ಮೆಸೇಜ್ ಮತ್ತು ಜಾತಿ ಬಗ್ಗೆ ತಮಾಷೆ ಮಾಡಿದ್ದ ನೌಷದ್: ಈ ಘಟನೆಗೆ ಸುಮಾರು 3 ವರ್ಷದಿಂದ ಆರೋಪಿ ನೌಷದ್ ದಯಾನಂದ ಅವರ ಸಮುದಾಯದ ಯುವತಿಗೆ ಮೆಸೇಜ್ ಮಾಡಿದ್ದ ವಿಚಾರದಲ್ಲಿ ದಯಾನಂದರವರು ಆರೋಪಿ ನೌಷದ್ ಗೆ ಬುದ್ದಿವಾದ ಹೇಳಿರುವುದು ಹಾಗೂ ಇತ್ತಿಚೆಗೆ ದಯಾನಂದರವರ ಜಾತಿಯ ಬಗ್ಗೆ ತಮಾಷೆ ಮಾಡಿರುವುದಕ್ಕೆ ಬುದ್ದಿವಾದ ಹೇಳಿರುವುದು ಕಾರಣವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲು: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಡಿ.22 ರಂದು ಗಾಯಗೊಂಡ ದಯಾನಂದ ನೀಡಿದ ದೂರಿನ ಮೇರೆಗೆ ತನಗೆ ಮತ್ತು ತನ್ನ ಸ್ನೇಹತ ಆರೀಫ್ ಗೆ ಆರೋಪಿ ನೌಷದ್ ಜಾತಿ ನಿಂದನೆ ಮಾಡಿ ಕೊಲೆ ಮಾಡುವ ಉದ್ದೇಶದಿಂದ ಕೃತ್ಯ ಎಸಗಿರುವುದಾಗಿ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸರು ನೌಷದ್ ವಿರುದ್ಧ BNS -2023 (u/s-115(2),118(1),109,351(2),352), SC&ST Act-2015(u/s-3(1),(r)(s)) ರಂತೆ ಪ್ರಕರಣ ದಾಖಲಿಸಿದ್ದರು.

ಆರೋಪಿ ಬಂಧನ: ಪ್ರಕರಣದ ತನಿಖೆ ನಡೆಸಿದ ಬೆಳ್ತಂಗಡಿ ಇನ್ಸ್‌ಪೆಕ್ಟರ್ ಸುಬ್ಬಪುರ್ ಮಠ ಮತ್ತು ತಂಡ ಆರೋಪಿ ಆಂಬುಲೆನ್ಸ್ ಚಾಲಕ ನೌಷದ್ ನನ್ನು ಡಿ.23 ರಂದು ಸಂಜೆ ಮಂಗಳೂರಲ್ಲಿ ಬಂಧಿಸಿ ಮಂಗಳೂರು ಜಿಲ್ಲಾ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದು. ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ತನಗೆ ಹಲ್ಲೆ ಮಾಡಿರುವುದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಆರೋಪಿ: ಘಟನೆ ನಡೆದ ಬಳಿಕ ತನ್ನ ಮೇಲೆ ಸುಮಾರು 8 ಮಂದಿ ಹಣದ ವಿಚಾರವಾಗಿ ಹಲ್ಲೆ ಮಾಡಿ ಆಂಬುಲೆನ್ಸ್ ವಾಹನಕ್ಕೆ ಕಲ್ಲು ಹಾಕಿರುವುದಾಗಿ ಹೇಳಿ “ಬಂಗೇರ ಬ್ರಿಗೇಡ್ ಇಂದಬೆಟ್ಟು ” ವಾಟ್ಸಪ್ ಗ್ರೂಪ್ ನಲ್ಲಿ ಸಾರ್ವಜನಿಕರಿಗೆ ಸುಳ್ಳು ವಾಯ್ಸ್ ಮೆಸೇಜ್ ಮೂಲಕ ಸುದ್ದಿ ಹಬ್ಬಿಸಿ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಬಂದು ದಾಖಲಾಗಿ ಬಳಿಕ ಮಂಗಳೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿ ನೌಷದ್ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದ ಎನ್ನಲಾಗಿದೆ.

ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಇನ್ಸ್‌ಪೆಕ್ಟರ್ ಸುಬ್ಬಪುರ ಮಠ ನೇತೃತ್ವದಲ್ಲಿ ಬೆಳ್ತಂಗಡಿ ಇನ್ಸ್‌ಪೆಕ್ಟರ್ ಆನಂದ್.ಎಮ್ ಮತ್ತು ಸಿಬ್ಬಂದಿ ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Related posts

ನಡ: ಸಿಡಿಲು ಬಡಿದು ಹಾನಿ: ಸಾಬ್ ಜನ್ ರವರ ಮನೆಗೆ ಎಂ.ಎಲ್.ಸಿ. ಹರೀಶ್ ಕುಮಾರ್ ಭೇಟಿ

Suddi Udaya

ವಿಜಯರತ್ನ ಪ್ರಶಸ್ತಿ ಪುರಸ್ಕೃತ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ಕುಡುಮಶ್ರೀ ಟೈಗರ್ಸ್ ಧರ್ಮಸ್ಥಳ ತಂಡದಿಂದ ಗೌರವದ ಸನ್ಮಾನ

Suddi Udaya

ಪರೀಕ ಶ್ರೀ ಧ.ಮಂ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನದಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಕಣಿಯೂರು ಮಹಾ ಶಕ್ತಿ ಕೇಂದ್ರದ ಬಾರ್ಯ ಗ್ರಾಮದಲ್ಲಿ ಯುವ ಚೌಪಾಲ್

Suddi Udaya

ರಾಷ್ಟ್ರೀಯ ಯೋಗಾಸನ ಕ್ರೀಡಾ ಒಕ್ಕೂಟದ ಉಪಾಧ್ಯಕ್ಷರಾಗಿ ಡಾ. ಐ. ಶಶಿಕಾಂತ ಜೈನ್

Suddi Udaya

ಶಿಬಾಜೆ: ಕಾಡಾನೆ ದಾಳಿಗೆ ಹಸು ಬಲಿ

Suddi Udaya
error: Content is protected !!