ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಡಿ. 30: ಬಳಂಜ ಬೊಂಟ್ರೋಟ್ಟು ಗುತ್ತು ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಪರಿವಾರ ದೈವಗಳ ವಾರ್ಷಿಕ ಪ್ರತಿಷ್ಠಾ ವರ್ಧಂತಿ

ಬಳಂಜ: ಬೊಂಟ್ರೋಟ್ಟು ಗುತ್ತು ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಪರಿವಾರ ದೈವಗಳ ಸೇವಾ ಟ್ರಸ್ಟ್ ನಿಂದ ಡಿ. 30 ರಂದು ಬೊಂಟ್ರೋಟ್ಟು ಗುತ್ತು ಗ್ರಾಮ ದೈವಗಳ ಭಂಡಾರ ಚಾವಡಿಯಲ್ಲಿ ಮದ್ದಡ್ಕ ಶ್ರೀನಿವಾಸ ಅಮ್ಮಣ್ಣಾಯ ಅಸ್ರಣ್ಣರ ನೇತೃತ್ವದಲ್ಲಿ ವಾರ್ಷಿಕ ಪ್ರತಿಷ್ಠಾ ವರ್ಧಂತಿ ದಿನ ನಾಗದೇವರಿಗೆ ಸನ್ನಿಧಿಯಲ್ಲಿ ತನು ತಂಬಿಲ ಸೇವೆ ಮತ್ತು ಧರ್ಮರಸು ದೈವ – ಕೊಡಮಣಿತ್ತಾಯ, ಮೈಸಂದಾಯ ಕೇತುಲ್ಲಾಯ ಅಂಗಣ ಪಂಜುರ್ಲಿ, ಕಲ್ಲುರ್ಟಿ, ಕಲ್ಕುಡ, ಕ್ಷೇತ್ರ ಗುಳಿಗ ದೈವಗಳಿಗೆ ಪ್ರಧಾನ ಕಲಶಾಭಿಷೇಕ ಮತ್ತು ಪಂಚಪರ್ವ ನಡೆಯಲಿದೆ.

ಡಿ. 30 ರಂದು ಬೆಳಿಗ್ಗೆ ಗಂಟೆ 9.00ಕ್ಕೆ ಗಣಹೋಮ, ಬೆಳಿಗ್ಗೆ ಗಂಟೆ 10.00ಕ್ಕೆ ನಾಗಸನ್ನಿಧಿಯಲ್ಲಿ ತನು ತಂಬಿಲ ಸೇವೆ, ಬೆಳಿಗ್ಗೆ ಗಂಟೆ 11.30ಕ್ಕೆ ಚಾವಡಿಯಲ್ಲಿ ಪ್ರಧಾನ ಹೋಮ, ಮಧ್ಯಾಹ್ನ ಗಂಟೆ 12.15ಕ್ಕೆ ದೈವಗಳಿಗೆ, ಕಲಶಾಭಿಷೇಕ, ಪರ್ವ, ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಮಧ್ಯಾಹ್ನ ಗಂಟೆ 1.00ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.

Related posts

ನ್ಯಾಯತರ್ಪು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ವಿಜಯ ಗೌಡ ಕಲಾಯಿತೊಟ್ಟು ಆಯ್ಕೆ

Suddi Udaya

ನಾಲ್ಕೂರು: ಜಯಂತಿ ಮಜ್ಜೇನಿಗುರಿ ಅಸೌಖ್ಯದಿಂದ ನಿಧನ

Suddi Udaya

ವೇಣೂರು: ಸರಕಾರಿ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಗಳ ಅಪೂರ್ವ ಸಮಾಗಮ “ಸ್ನೇಹ ಸಮ್ಮಿಲನ”

Suddi Udaya

ಪುಂಜಾಲಕಟ್ಟೆ : ದಾಖಲೆ ಇಲ್ಲದೆ ಎಟಿಎಂ ವಾಹನದಲ್ಲಿ ಸಾಗಿಸುತ್ತಿದ್ದ ರೂ.10 ಲಕ್ಷ ಹಣ ವಶ

Suddi Udaya

ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಗುಂಡೇರಿಯಲ್ಲಿ ನೂತನವಾಗಿ ನಿರ್ಮಿಸಲಾದ ಕೇಳ್ಕರೇಶ್ವರ ಬಸ್ಸು ತಂಗುದಾಣ ಉದ್ಘಾಟನೆ

Suddi Udaya

ಅಳದಂಗಡಿಯಲ್ಲಿ ಆಮಂತ್ರಣ ದಶಮಾನೋತ್ಸವಕ್ಕೆ ಚಾಲನೆ

Suddi Udaya
error: Content is protected !!