September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಡಿ.29: ಶಿಶಿಲ ಸ.ಉ.ಹಿ.ಪ್ರಾ. ಶಾಲೆಯ ನೂತನ ಕಟ್ಟಡದ ಉದ್ಘಾಟನೆ ಹಾಗೂ ಸಾಂಸ್ಕೃತಿಕ ವೈಭವ

ಶಿಶಿಲ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳು ಮತ್ತು ವಿದ್ಯಾಭಿಮಾನಿಗಳು ಕಟ್ಟಿಸಿದ ಸರಕಾರಿ ಶಾಲೆಯ ಉದ್ಘಾಟನಾ ಸಮಾರಂಭ ಮತ್ತು ಶಾಲಾ ವಿದ್ಯಾರ್ಥಿಗಳು, ಹಳೆವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಿಂದ ಸಾಂಸ್ಕೃತಿಕ ವೈಭವ ಡಿ. 29 ರಂದು ನಡೆಯಲಿದೆ.

ಬೆಳಿಗ್ಗೆ 10ಕ್ಕೆ ನೂತನ ಕೊಠಡಿಗಳ ಉದ್ಘಾಟನೆಯನ್ನು ಕೇಂದ್ರ ಅತೀ ಸಣ್ಣ ಮಧ್ಯಮ ಕೈಗಾರಿಕಾ ಮತ್ತು ಉದ್ಯೋಗ ಖಾತೆಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಭಾಧ್ಯಕ್ಷ ಯುಟಿ ಖಾದರ್ ಫರೀದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ಎಸ್, ಸಂಸದರು ಕ್ಯಾ| ಬ್ರಿಜೇಶ್ ಚೌಟ, ರಾಜ್ಯಸಭೆ ಸಂಸದರು ಡಾ.ಡಿ. ವೀರೇಂದ್ರ ಹೆಗ್ಗಡೆ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಶಾಸಕರಾದ ಎಸ್ ಎಲ್ ಭೋಜೆ ಗೌಡ, ಐವನ್ ಡಿ’ಸೋಜ, ಪ್ರತಾಪ್ ಸಿಂಹ ನಾಯಕ್, ಮಂಜುನಾಥ ಭಂಡಾರಿ, ಧನಂಜಯ ಸರ್ಜಿ, ಕಿಶೋರ್ ಕುಮಾರ್ ಬೊಟ್ಯಾಡಿ, ಶಿತಿಲ ಗ್ರಾ. ಪಂ ಅಧ್ಯಕ್ಷ ಸುದಿನ್, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಶಿಕ್ಷಣ ಸಂಯೋಜಕರು ಚೇತನಾಕ್ಷಿ, ಸಿಆರ್‌ಪಿ ಕೊಕ್ಕಡ ಮತ್ತು ಪೆರ್ಲ ಕ್ಲಸ್ಟರ್ ವಿಲೈಡ್ ಪಿಂಟೋ ಭಾಗವಹಿಸಲಿದ್ದಾರೆ.

ರೋಟರಿ ಕ್ಲಬ್ ಬೆಳ್ತಂಗಡಿ ಇವರ ಸಹಕಾರದಲ್ಲಿ ಸುಮಾರು ಹತ್ತು ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಶೌಚಾಲಯ ಕೊಠಡಿ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.
ಸಾಂಸ್ಕೃತಿಕ ವೈಭವ: ಸಂಜೆ ೬.೦೦ ರಿಂದ ಸಾಂಸ್ಕೃತಿಕ ವೈಭವವು ನಡೆಯಲಿದ್ದು ಇದರ ಸಭಾ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮೋಹನ್ ಗೌಡ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೆಕಳ ಹಾಜಬ್ಬ, ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪ್ರಭು, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕರು ಮೋಹನ್ ಕುಮಾರ್, ಮೆಂಬರ್ ಗ್ಲೋಬಲ್ ಎಕ್ಸಿಕ್ಯೂಟಿವ್ ಕಮಿಟಿ ಸಿ.ಇ.ಒ.(ಇಂಡಿಯಾ) ರಾಜೇಶ್ ಫಡ್ಕೆ, ಶಶಿಧರ್ ಶೆಟ್ಟಿ ಬರೋಡ ಉದ್ಯಮಿಗಳು ಬೆಂಗಳೂರು, ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಡಿ ಪುಷ್ಪಗಿರಿ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವಾರಂ ಹಾಗೂ ಇತರರು ಭಾಗವಹಿಸಲಿದ್ದಾರೆ. ರಾತ್ರಿ ಗಂಟೆ ೯:೩೦ ರಿಂದ ಚೈತನ್ಯ ಕಲಾವಿದರು ಬೈಲೂರು ವತಿಯಿಂದ ರಾಘು ಮಾಸ್ಟುç ಹಾಸ್ಯಮಯ ತುಳುನಾಟಕ ನಡೆಯಲಿದೆ. ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

Related posts

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

Suddi Udaya

ಎಲ್ ಸಿ ಆರ್ ವಿದ್ಯಾಸಂಸ್ಥೆಯಲ್ಲಿ ದಶಮ ಸಂಭ್ರಮದ ಸಭಾ ಕಾರ್ಯಕ್ರಮ

Suddi Udaya

ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಪದಗ್ರಹಣ ಸಮಾರಂಭದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪುರಸ್ಕೃತೆ ಕನ್ನಾಜೆಯ ಸುರಕ್ಷಾ ಆಚಾರ್ಯರಿಗೆ ಸನ್ಮಾನ

Suddi Udaya

ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಪ್ರಥಮವಾಗಿ ಆರಂಭ: ಸಿ.ಬಿ.ಜಿ ಘಟಕದ ಲೋಕಾರ್ಪಣೆ

Suddi Udaya

ಅಳದಂಗಡಿ: ಲುಕ್ ಮಿ ಲೇಡಿಸ್ ಬ್ಯೂಟಿ ಝೋನ್ ಉದ್ಘಾಟನೆ: ಲೇಡಿಸ್ ಟೈಲರಿಂಗ್ ಮತ್ತು ತರಬೇತಿ ಕೇಂದ್ರ, ಟೈಲರಿಂಗ್ ಮೆಟಿರಿಯಲ್ಸ್ & ಎಂಬ್ರೈಡರಿ ವರ್ಕ್ಸ್

Suddi Udaya

ವಾಣಿ ಪ.ಪೂ. ಕಾಲೇಜಿನ ರಿತ್ವಿಕ್ ಶೆಟ್ಟಿ ಏಕಪಾತ್ರ ಅಭಿನಯದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya
error: Content is protected !!