37.9 C
ಪುತ್ತೂರು, ಬೆಳ್ತಂಗಡಿ
March 6, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿ

ಸಂಚಾರಿಸುತ್ತಿದ್ದ ಬೈಕ್ ಮೇಲೆ ಕಾಡುಕೋಣ ದಾಳಿ: ಸವಾರನಿಗೆ ಗಾಯ

ಬೆಳ್ತಂಗಡಿ: ಬೈಕ್‌ನಲ್ಲಿ ಸಂಚಾರಿಸುತ್ತಿದ್ದ ವೇಳೆ ಕಾಡುಕೋಣ ದಾಳಿ ಮಾಡಿದ್ದು, ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಲಾಲ ಗ್ರಾಮದಲ್ಲಿ ಡಿ.26ರಂದು ನಡೆದಿದೆ.

ನಡ ಗ್ರಾಮದ ಕೂಡೇಲು ನಿವಾಸಿ ವೆಂಕಪ್ಪ ಪೂಜಾರಿಯವರ ಪುತ್ರ ಸುಕೇಶ್(31) ರವರು ಬೆಳ್ತಂಗಡಿ ಬೈಕ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದು, ಎಂದಿನಂತೆ ಕರ್ತವ್ಯ ಮುಗಿಸಿ ರಾತ್ರಿ ಸುಮಾರು 8.45 ಕ್ಕೆ ಮನೆಗೆ ಹೋಗುತಿದ್ದ ವೇಳೆ ಲಾಲ ಗ್ರಾಮದ ಬೇಲಾಜೆ ಅಲೆಕ್ಕಿ ಎಂಬಲ್ಲಿ ರಸ್ತೆಯಲ್ಲಿ ಏಕಾಏಕಿ ಕಾಡುಕೋಣ ಕಾಡಿನಿಂದ ರಸ್ತೆಗೆ ದಾಟಿಕೊಂಡು ಬಂದು ಸಂಚಾರಿಸುತ್ತಿದ್ದ ಬೈಕ್ ಮೇಲೆ ದಾಳಿ ಮಾಡಿದೆ.

ಈ ವೇಳೆ ಬೈಕ್ ಸವಾರ ಸುಕೇಶ್ ರವರ ಕಾಲು ಮತ್ತು ಕೈ ಗೆ ಗಂಭೀರ ಗಾಯವಾಗಿದ್ದು ತಕ್ಷಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಕಾಡುಕೋಣ ದಾಳಿಗೆ ಬೈಕ್‌ಗೆ ಹಾನಿಯಾಗಿದೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಲಾಲ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜೆ ಡಿ.೨೭ರಂದು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ.

Related posts

ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಮುಂಗಾರು ಮಳೆಯ ಪೂರ್ವ ಸಿದ್ಧತೆ ಬಗ್ಗೆ ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳ-ಸಮಾಲೋಚನಾ ಸಭೆ

Suddi Udaya

ಕಾಯರ್ತಡ್ಕ: ಕುಂಬಾರ ಸೇವಾ ಸಂಘದ ವಾರ್ಷಿಕ ಮಹಾಸಭೆ ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಸಮಾರಂಭ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ., ಪಟ್ಟಣ ಪಂಚಾಯತ್ ಸದಸ್ಯರ ಮತ್ತು ಕಾರ್ಯಕರ್ತರ ಸಭೆ

Suddi Udaya

ಸಹಕಾರಿ ಕ್ಷೇತ್ರದ ಅಪ್ರತಿಮ ಸಾಧಕ ಪೆರಾಡಿ ಸೊಸೈಟಿ ಅಧ್ಯಕ್ಷ ಸತೀಶ್ ಕೆ ಕಾಶಿಪಟ್ಣರವರಿಗೆ ಈ ವರ್ಷದ ರಾಜ್ಯ “ಸಹಕಾರಿ ರತ್ನ” ಪ್ರಶಸ್ತಿ ಪ್ರದಾನ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ-200 ರಲ್ಲಿ ಸ್ವೀಪ್ ಸಮಿತಿಯಿಂದ ತಾಲೂಕಿನ 241 ಬಿಎಲ್ ಒ ಗಳಿಗೆ ತರಬೇತಿ

Suddi Udaya

ಕಾಶಿಪಟ್ಣ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya
error: Content is protected !!