March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸರ್ಕಾರದ ಹಿಂದೂ ವಿರೋಧಿ ‘ದ್ವೇಷ ಭಾಷಣ ತಡೆ ಕಾಯಿದೆ’ ಮತ್ತು ಬಾಂಗ್ಲಾದೇಶದ ಹಿಂದೂ ಹತ್ಯಾಕಾಂಡದ ವಿರುದ್ಧ ಬೆಳ್ತಂಗಡಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ

ಬೆಳ್ತಂಗಡಿ : ಒಂದು ಕಡೆ ಕರ್ನಾಟಕದಲ್ಲಿ ರಾಜ್ಯ ಸರ್ಕಾರವು ಕಾನೂನಿನ ಹೆಸರಿನಲ್ಲಿ ಹಿಂದೂಗಳ ಧ್ವನಿಯನ್ನು ಹತ್ತಿಕ್ಕಲು ಸಂಚು ರೂಪಿಸುತ್ತಿದ್ದರೆ, ಇನ್ನೊಂದೆಡೆ ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧ ನಡೆಯುತ್ತಿದೆ. ಈ ಎರಡೂ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿರುವ ಹಿಂದೂ ಜನಜಾಗೃತಿ ಸಮಿತಿಯು, ಹಿಂದೂ ಸಮಾಜದ ರಕ್ಷಣೆಗಾಗಿ ರಾಜ್ಯದ ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರಗಳು ತಕ್ಷಣವೇ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದೆ.

ಅಸಂವಿಧಾನಿಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆ ಕಾಯ್ದೆಗೆ ಅನುಮತಿ ನೀಡಬಾರದು ಹಾಗೂ ಬಾಂಗ್ಲಾ ಹಿಂದೂ ಅಲ್ಪ ಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಲು ಭಾರತ ಸರಕಾರದಿಂದ ಕಠಿಣ ರಾಜಕೀಯ ಹಸ್ತಕ್ಷೇಪ ಹಾಗೂ ಅಂತಾರಾಷ್ಟ್ರೀಯ ಒತ್ತಡ ಹೇರುವಂತೆ ಆಗ್ರಹಿಸಿ ಬೆಳ್ತಂಗಡಿ ತಹಶೀಲ್ದಾರಾದ ಪೃಥ್ವಿ ಸಾನಿಕಂ ಇವರ ಮೂಲಕ ರಾಜ್ಯಪಾಲರಿಗೆ ಮತ್ತು ಪ್ರಧಾನಿಯವರಿಗೆ ಮನವಿಯನ್ನು ನೀಡಲಾಯಿತು.


ಹಿಂದೂ ಸಮಾಜದ ಅಸ್ತಿತ್ವಕ್ಕೆ ಧಕ್ಕೆ ತರುತ್ತಿರುವ ವಿಚಾರಗಳಲ್ಲಿ ಸರ್ಕಾರಗಳು ವಿಫಲವಾದರೆ ಹಿಂದೂ ಸಮಾಜವು ಬೀದಿಗೆ ಇಳಿದು ಹೋರಾಟ ಮಾಡಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯು ಎಚ್ಚರಿಸಿದೆ.

ಈ ಸಂದರ್ಭದಲ್ಲಿ ಧರ್ಮ ಪ್ರೇಮಿಗಳಾದ ಯಶವಂತ ಗೌಡ ಪಂಚಾಯತಿ ಅಧ್ಯಕ್ಷರು ಕೊಯ್ಯೂರು, ಉಮಾ ರಾವ್ ಮಹಿಳಾ ಒಕ್ಕೂಟ ಅಧ್ಯಕ್ಷರು ಬೆಳ್ತಂಗಡಿ, ಕೇಶವ ಅಚ್ಚಿನಡ್ಕ, ರಾಜೇಂದ್ರ ಜಿ ಕಾನರ್ಪ, ಮೋಹನ್ ಬೈರಾ ಪುತ್ರಬೈಲು, ವಸಂತ ಕಲ್ಲಾಜೆ, ಶಾಂತ ಉಜಿರೆ, ಸಂತೋಷ್ ಪನೇಜಾಲ್, ವಿನೋದ ಉಜಿರೆ, ವಸಂತ ಗುರುವಾಯನಕೆರೆ, ಶಾರದಾ ಭಂಡಾರಕರ್, ಯೋಗೀಶ್ ಕೆಂಬರ್ಜೆ, ಯಂ ಹರೀಶ್ ಜಿ ಮುದ್ದಿನಡ್ಕ ಮುಂತಾದವರು ಉಪಸ್ಥಿತರಿದ್ದರು.

Related posts

ಮದ್ದಡ್ಕ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಕ್ರೀಡಾಕೂಟಕ್ಕೆ ಚಾಲನೆ

Suddi Udaya

ಎ.ಕೃಷ್ಣಪ್ಪ ಪೂಜಾರಿಯವರಿಗೆ ’ಶ್ರೇಷ್ಠ ಶಿಕ್ಷಕ ಸೌರಭ ಪ್ರಶಸ್ತಿ

Suddi Udaya

ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ

Suddi Udaya

ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ವತಿಯಿಂದ ಜನಮಂಗಳ ಕಾರ್ಯಕ್ರಮದಡಿಯಲ್ಲಿ ವೀಲ್ ಚೇರ್ ವಿತರಣೆ

Suddi Udaya

ಕಲ್ಮಂಜ : ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯಾಗಿ ನಾಗಶಯನ ರಾವ್ ಅಧಿಕಾರ ಸ್ವೀಕಾರ

Suddi Udaya

ಕಾಡಾನೆ ದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಶೆಟ್ಟಿ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya
error: Content is protected !!