26.5 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕಣಿಯೂರು ಗ್ರಾಮಪಂಚಾಯತ್ ಮಟ್ಟದ ಜನಸ್ಪಂದನ ಸಭೆ

ಬೆಳ್ತಂಗಡಿ : ಕಣಿಯೂರು ಗ್ರಾಮಪಂಚಾಯತ್ ವ್ಯಾಪ್ತಿಯ ಬೊಳ್ಳರಮಜಲು ಎಂಬಲ್ಲಿ ರಸ್ತೆ ಕುಸಿದು‌ ಕೆಲವು ಸಮಯಗಳೇ ಆಯಿತು. ಈ ಬಗ್ಗೆ ಗ್ರಾಮಸಭೆಯಲ್ಲಿ ಹೇಳಿದ್ರೂ ಗ್ರಾಮಪಂಚಾಯತ್ ನಲ್ಲಿ‌ ವಿನಂತಿಸಿಕೊಂಡರೂ ಇದುವರೆಗೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಇನ್ನು ರಸ್ತೆಯನ್ನು ಆ ಕಲ್ಕುಡನೇ ಸರಿ ಮಾಡಬೇಕಷ್ಟೆ ಎಂದು ಆಕ್ರೋಶಗೊಂಡ ಗ್ರಾಮಸ್ಥರೊಬ್ಬರು ಹೇಳಿದರು.

ಶಾಸಕರ ಅಧ್ಯಕ್ಷತೆಯಲ್ಲಿ ಪದ್ಮುಂಜದಲ್ಲಿ ಡಿ.31ರಂದು ನಡೆದ ಕಣಿಯೂರು ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಸಭೆಯಲ್ಲಿ ಮಾತನಾಡಿದರು.

ಪದ್ಮುಂಜ-ಕಣಿಯೂರು ರಸ್ತೆಯ ಬೊಳ್ಳರಮಜಲು ಎಂಬಲ್ಲಿ ರಸ್ತೆ ಕಾಂಕ್ರೀಟ್ ರಸ್ತೆ ಕುಸಿದು ಅಪಾಯಕಾರಿಯಾಗಿದೆ, ತಡೆಗೋಡೆ ಮಾಡಿಸುವಂತೆ ಕೆಲವು ಸಮಯಗಳಿಂದ ಹೇಳಿ‌ ಕೇಳಿ ಸಾಕಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಭೆಯಲ್ಲಿ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಸಂಬಂಧಿಸಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ಸೀತಾರಾಮ ಮಡಿವಾಳ ಬೊಳ್ಳರಮಜಲು ಪ್ರದೇಶದದ ಮೂರು ವರ್ಷಗಳಿಂದ ಟಿ.ಸಿ. ಸಮಸ್ಯೆ ಇದೆ ಇಲಾಖಾ ಜೆಇ ಅಥವಾ ಕೆಳಗಿನ ಅಧಿಕಾರಿಗಳು ಲೆಕ್ಕಕ್ಕಿದ್ದಾರೆ.
ಗ್ರಾಮಪಂಚಾಯತ್ ಅಧ್ಯಕ್ಷನಾಗಿ ಜೆ.ಇ. ವಾರಗಟ್ಟಲೆ ಕಾಲ್ ಮಾಡಿದ್ರೂ ಅವರು ರಿಸೀವ್ ಮಾಡುತ್ತಿಲ್ಲ ಎಂದು ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆಯಾ ಇಲಾಖಾಧಿಕಾರಿಗಳು ತಮ್ನ ಇಲಾಖೆಗಳಿಗೆ ಸಂಬಂಧಪಟ್ಟ ಸಮಸ್ಯೆ, ಕುಂದುಕೊರತೆಗಳ ಬಗ್ಗೆ ಉತ್ತರಿಸಿದರು.
ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದ ಬಗ್ಗೆ ಅದೇ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಯಾಗಿರುವ
ನಿವೃತ್ತ ಸೈನಿಕನ ಆಕ್ಷೇಪ ಕಿರುಕುಳ ನೀಡುತ್ತಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು.
ಈ ಬಗ್ಗೆ ಶಾಲೆಯ ಜಾಗವನ್ನು‌ ಯಾವ ಕಾರಣಕ್ಕೂ ಯಾರಿಗೂ ಮಂಜೂರಾತಿ ಮಾಡುವುದಿಲ್ಲ, ಯಾರೂ ಆತಂಕಪಡುವ ಅಗತ್ಯ ಇಲ್ಲ ; ಎಂದು ತಹಶೀಲ್ದಾರ್ ಪೃಥ್ವಿ ಸಾನಿಕಂ ತಿಳಿಸಿದರು.
ತಾ.ಪಂ. ಇಒ. ಭವಾನಿಶಂಕರ್, ಗ್ರಾ.ಪಂ. ಪಿಡಿಒ. ಗೀತ, ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು, ಗ್ರಾ.ಪಂ. ಉಪಸ್ಥಿತರಿದ್ದರು.

Related posts

ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಅಳದಂಗಡಿ ವಲಯ ವಾರ್ಷಿಕ ಮಹಾಸಭೆ

Suddi Udaya

ಮಾ.15-19: ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನ ಪ್ರತಿಷ್ಠಾ ವರ್ಧಂತಿ ಮತ್ತು ವರ್ಷಾವಧಿ ಜಾತ್ರೆ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಚಿದಾನಂದ ಇಡ್ಯ, ಕಾರ್ಯದರ್ಶಿಯಾಗಿ ಸಂತೋಷ್ ಶೆಟ್ಟಿ ಆಯ್ಕೆ

Suddi Udaya

ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಪ್ರೋತ್ಸಾಹಕ ಪ್ರಶಸ್ತಿಯ ಗೌರವ

Suddi Udaya

ಉರುವಾಲು: ನೆಕ್ಕಿಲು ಶಾಲಾ ಮುಖ್ಯ ಶಿಕ್ಷಕ ಬಿ . ಎಸ್ . ಬಿರಾದಾರ್ ಬೀಳ್ಕೊಡುಗೆ ಸಮಾರಂಭ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ಇಬ್ಬರಿಗೆ ಗೇಟ್ ಪಾಸ್: ನೂತನ ನಗರ ಸಮಿತಿಯ ಅಧ್ಯಕ್ಷರಾಗಿ ಸತೀಶ್ ಕೆ. ಕಾಶಿಪಟ್ಣ, ಗ್ರಾಮೀಣ ಸಮಿತಿಯ ಅಧ್ಯಕ್ಷರಾಗಿ ನಾಗೇಶ್ ಕುಮಾರ್ ಗೌಡ ನೇಮಕ

Suddi Udaya
error: Content is protected !!