25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಶ್ರೀ ಕ್ಷೇ.ಧ.ಗ್ರಾ. ಯೋಜನೆ ಧರ್ಮಸ್ಥಳ ಸಮುದಾಯದ ಅಭಿವೃದ್ಧಿ ವಿಭಾಗ ಆಶ್ರಯದಲ್ಲಿ 418 ಶಾಲೆಗಳಿಗೆ ರೂ.2.50 ಕೋಟಿ ಮೊತ್ತದ 3472 ಜೊತೆ ಪೀಠೋಪಕರಣ ವಿತರಣೆಗೆ ಡಾ.ಹೆಗ್ಗಡೆ ಚಾಲನೆ

ಧಮ೯ಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳ ಸಮುದಾಯದ ಅಭಿವೃದ್ಧಿ ವಿಭಾಗ ಇದರ ಆಶ್ರಯದಲ್ಲಿ ಜ್ಞಾನದೀಪ ಶಾಲಾ ಕಾಯ೯ಕ್ರಮದಂತೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಕೋಲಾರ ಜಿಲ್ಲೆಯ 418 ಶಾಲೆಗಳಿಗೆ 3472 ಜೊತೆ ಪೀಠೋಪಕರಣ ವಿತರಣೆ ಕಾಯ೯ಕ್ರಮ ಜ.1 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಜರುಗಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀಮತಿ ಹೇಮಾವತಿ ವೀ.ಹೆಗ್ಗಡೆ, ಸುರೇಂದ್ರ ಕುಮಾರ್, ಶ್ರದ್ಧಾ ಅಮಿತ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಯ೯ನಿವಾ೯ಹಣಾಧಿಕಾರಿ ಅನಿಲ್ ಕುಮಾರ್, ವೀರೂ ಶೆಟ್ಟಿ, ಉದ್ಯಮಿ ಮೋಹನ್ ಕುಮಾರ್ ಉಜಿರೆ ಮೊದಲಾದವರು ಉಪಸ್ಥಿತರಿದ್ದರು.

ಗ್ರಾಮೀಣ ಶಾಲೆಗಳಿಗೆ ಪೀಠೋಪಕರಣಗಳ ಕೊಡುಗೆ : ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಪೀಠೋಪಕರಣಗಳ ಕೊರತೆಯಿರುವ ಸರಕಾರಿ ಶಾಲೆಗಳಿಗೆ ಡೆಸ್ಕ್ ಬೆಂಚ್‌ಗಳನ್ನು ನೀಡಲಾಗುತ್ತಿದೆ. ಪ್ರಸ್ತುತ ಫೈಬರ್ ಮಾದರಿಯ ಡೆಸ್ಕ್ ಬೆಂಚ್‌ಗಳನ್ನು ಪೂರೈಕೆ ಮಾಡುತ್ತಿದ್ದು, ಅಧಿಕ ಬಾಳಿಕೆ ಹಾಗೂ ಕಡಿಮೆ ಭಾರವನ್ನು ಹೊಂದಿರುತ್ತದೆ. ಅನೇಕ ಗ್ರಾಮೀಣ ಶಾಲೆಗಳಲ್ಲಿ ಡೆಸ್ಕ್ ಬೆಂಚುಗಳ ಕೊರತೆಯನ್ನು ಗಮನಿಸಿ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಯೋಜನೆಯ ವತಿಯಿಂದ ಈ ವಿಶೇಷ ಕೊಡುಗೆಯನ್ನು ನೀಡಿದ್ದಾರೆ. ಇದರಂತೆ ಶಾಲೆಗಳಿಗೆ ಗರಿಷ್ಟ 10 ಜೊತೆ ಡೆಸ್ಕ್ ಬೆಂಚುಗಳನ್ನು ಒದಗಿಸಲಾಗುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ವತಿಯಿಂದಲೇ ಶಾಲೆಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಶೇ. 20ರಷ್ಟು ಮೊತ್ತವನ್ನು ಶಾಲಾಭಿವೃದ್ಧಿ ಸಮಿತಿಗಳು ಭರಿಸಿದರೆ ಉಳಿದ ಶೇ. 80 ರಷ್ಟು ಮೊತ್ತವನ್ನು ಕ್ಷೇತ್ರದಿಂದ ಭರಿಸಲಾಗುತ್ತಿದೆ. ಇದರಂತೆ ಇದುವರೆಗೆ ಒಟ್ಟು ರಾಜ್ಯದ 11,621 ಶಾಲೆಗಳಿಗೆ 75,518 ಜೊತೆ ಡೆಸ್ಕ್-ಬೆಂಚ್‌ಗಳನ್ನು ವಿತರಿಸಲಾಗಿದೆ. ಇದಕ್ಕಾಗಿ ರೂ. 28.55 ಕೋಟಿ ಅನುದಾನ ವಿನಿಯೋಗಿಸಲಾಗಿದೆ.

ಪ್ರಸ್ತುತ ವರ್ಷ ರಾಜ್ಯದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಕೋಲಾರ ಜಿಲ್ಲೆಯ ವಿವಿಧ ತಾಲೂಕುಗಳ 418 ಶಾಲೆಗಳಿಗೆ 3,472 ಜೊತೆ ಡೆಸ್ಕ್-ಬೆಂಚ್ಗಳನ್ನು ವಿತರಣೆ ಮಾಡಲಾಗುತ್ತಿದೆ.
2025-26ನೇ ಸಾಲಿನಲ್ಲಿ ವಿತರಿಸಲಾಗುವ ಡೆಸ್ಕ್-ಬೆಂಚ್‌ಗಳ ವಿವರ:
ಬೆಂಗಳೂರು ಗ್ರಾಮಾಂತರ 71 ಶಾಲೆಗಳಿಗೆ 650 ಡೆಸ್ಕ್-ಬೆಂಚುಗಳು, ಚಿಕ್ಕಬಳ್ಳಾಪುರ ಶಾಲೆಗಳಿಗೆ 47 352 ಡೆಸ್ಕ್-ಬೆಂಚುಗಳು,
ತುಮಕೂರು 212 ಶಾಲೆಗಳಿಗೆ 1731 ಡೆಸ್ಕ್-ಬೆಂಚುಗಳು, ಕೋಲಾರ 88 ಶಾಲೆಗಳಿಗೆ 739 ಡೆಸ್ಕ್-ಬೆಂಚುಗಳು,

ಪ್ರಸ್ತುತ ವರ್ಷ 4 ಜಿಲ್ಲೆಯ 418 ಶಾಲೆಗಳಿಗೆ 3,472 ಜೊತೆ ಡೆಸ್ಕ್-ಬೆಂಚ್‌ಗಳನ್ನು ಪೂರೈಕೆ ಮಾಡಲಾಗುತ್ತಿದ್ದು, ಒಟ್ಟು ರೂ 2.50 ಕೋಟಿ ಮೊತ್ತ ವಿನಿಯೋಗಿಸಲಾಗುತ್ತಿದೆ. ಇದರಿಂದಾಗಿ ಸುಮಾರು 17,360 ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ ಎಂದು ಯೋಜನೆಯ ಕಾಯ೯ನಿವ೯ಹಕ ನಿದೇ೯ಶಕರಾದ ಅನಿಲ್ ಕುಮಾರ್ ಈ ಸಂದರ್ಭದ ತಿಳಿಸಿದರು.

Related posts

ಪಿಕಪ್ – ಟಿಪ್ಪರ್ ನಲ್ಲಿ ಶಾಲಾ ಮಕ್ಕಳ ಪ್ರವಾಸ ಪ್ರಕರಣ: ಪ್ರಭಾರ ಮುಖ್ಯೋಪಾಧ್ಯಾಯ ಕಿರಣ್ ಅಮಾನತು

Suddi Udaya

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಬೆಳ್ತಂಗಡಿಯಿಂದ ಬೆಂಗಳೂರಿಗೆ ಸುಗಮ ಸಂಚಾರಕ್ಕಾಗಿ ಆರಂಭಗೊಂಡ “ಪಲ್ಲಕ್ಕಿ” ನೂತನ ಬಸ್ ಗೆ ಶಾಸಕ ಹರೀಶ್ ಪೂಂಜರಿಂದ ಚಾಲನೆ

Suddi Udaya

ಉಜಿರೆ ಮಾಚಾರು ಜಾತಿ ನಿಂದನೆ ಮಾಡಿ ಹಲ್ಲೆ ಆರೋಪ: ಯುವಕ ಆಸ್ಪತ್ರೆಗೆ ದಾಖಲು

Suddi Udaya

ಉಜಿರೆ ಎಸ್.ಡಿ.ಎಂ. ಪ.ಪೂ. ಕಾಲೇಜು: ಎನ್ಎಸ್ಎಸ್ ಕಾರ್ಯ ಚಟುವಟಿಕೆಗಳ ಉದ್ಘಾಟನೆ

Suddi Udaya

ರಾಜ್ಯಮಟ್ಟದ ಕರಾಟೆ ಪಂದ್ಯಕೂಟಕಕ್ಕಿಂಜೆಯ ಉಸ್ಮಾನ್ ಆದಿಲ್ ಕುಮಿಟೆ ವಿಭಾಗದಲ್ಲಿ ಪ್ರಥಮ

Suddi Udaya

ಕನ್ನಡ ಸೇನೆ -ಕರ್ನಾಟಕ ಬೆಳ್ತಂಗಡಿ ಸಮಿತಿ ವತಿಯಿಂದ ಬೆಳ್ತಂಗಡಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

Suddi Udaya
error: Content is protected !!