26.5 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ಸಂಭ್ರಮ ಯುವವಾಹಿನಿ ಕುಟುಂಬದ ಸ್ನೇಹ ಸಮ್ಮಿಲನ ಕಾರ್ಯಕ್ರಮ

ಬೆಳ್ತಂಗಡಿ: ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಯುವವಾಹಿನಿ ಮಹಿಳಾ ಸಂಚಾಲನ ಸಮಿತಿ ಬೆಳ್ತಂಗಡಿ ತಾಲೂಕು ಸಹಕಾರದೊಂದಿಗೆ ಡಿ.30 ರಂದು ಸಂಭ್ರಮ ಯುವವಾಹಿನಿ ಕುಟುಂಬದ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಘಟಕದ ನಿರ್ದೇಶಕರಾದ ಸೌಮ್ಯ ಲಾಯಿಲಾ ಇವರ “ಕನಸು” ಮನೆಯಲ್ಲಿ ಯುವವಾಹಿನಿ ಕುಟುಂಬ ಸದಸ್ಯರ ಭಾಗವಹಿಸುವಿಕೆಯೊಂದಿಗೆ ನಡೆಯಿತು.

ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ ಇವರ ಸಭಾಧ್ಯಕ್ಷತೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮವನ್ನು ಹಿರಿಯರಾದ ಗಿರಿಧರ ಪೂಜಾರಿ ಉದ್ಘಾಟಿಸಿದರು. ಘಟಕದ ಸ್ಥಾಪಕ ಅಧ್ಯಕ್ಷ ರಾಕೇಶ್ ಕುಮಾರ್ ಮೂಡುಕೋಡಿ, ಮಾಜಿ ಅಧ್ಯಕ್ಷ ಎಂ ಕೆ ಪ್ರಸಾದ್, ಅಶ್ವತ್ ಕುಮಾರ್, ಸದಾಶಿವ ಪೂಜಾರಿ, ಊರ ಸಲಹೆಗಾರರಾದ ಸುಧಾಮಣಿ ಆರ್, ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ಪ್ರಕಾಶ್ ಕೋಟ್ಯಾನ್ ನಾರಾವಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ನೂತನ ಆರೋಗ್ಯ ನಿರ್ದೇಶಕರಾಗಿ ಆಯ್ಕೆಯಾದ ಘಟಕದ ಮಾಜಿ ಅಧ್ಯಕ್ಷ ರಾಕೇಶ್ ಕುಮಾರ್ ಮೂಡುಕೋಡಿ, ಕೇಂದ್ರ ಸಮಿತಿಯ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಶ್ರೀಮತಿ ಸೌಮ್ಯ ಲಾಯಿಲ, ಜೆಸಿಐ ಬೆಳ್ತಂಗಡಿ ಮಂಜುಶ್ರೀ ಇದರ ನೂತನ ಅಧ್ಯಕ್ಷರಾಗಿ ನಿಯೋಜನೆಗೊಂಡ ಘಟಕದ ನಿರ್ದೇಶಕ ಜಿತೇಶ್ ಕುಮಾರ್ ಬೆಳ್ತಂಗಡಿ, ಈ ವರ್ಷ ಕೇಂದ್ರ ಸಮಿತಿಯ ಆಶ್ರಯದಲ್ಲಿ ನಡೆದ ಡೆನ್ನಾನ ಡೆನ್ನನ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಹಾಗೂ ಯುವವಾಹಿನಿ ಬೆಂಗಳೂರು ಘಟಕದ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಯುವ ವೈಭವ 2025 ಇದರಲ್ಲಿ ಭಾಗವಹಿಸಿ ಅಮೋಘ ಪ್ರದರ್ಶನದೊಂದಿಗೆ ಸಮಗ್ರ ದ್ವಿತೀಯ ಸ್ಥಾನವನ್ನು ಪಡೆದ ಬೆಳ್ತಂಗಡಿ ಘಟಕದ ಕಲಾವಿದರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದ ನಂತರ ಯುವವಾಹಿನಿ ಕುಟುಂಬ ಸದಸ್ಯರಿಗಾಗಿ ಕೆಲವೊಂದು ಮನೋರಂಜನ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು . ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸಂತೋಷ್ ಅರಳಿ, ನಾಳ ದುರ್ಗಾಪರಮೇಶ್ವರಿ ದೇವಸ್ಥಾನ ಅಧ್ಯಕ್ಷ ಬಿ ಹರೀಶ್ ಕಳಿಯ, ವೇಣೂರು ಘಟಕದ ನಿಕಟಪೂರ್ವ ಅಧ್ಯಕ್ಷ ಶುಭಕರ ಪೂಜಾರಿ ಸಾವ್ಯ, ಗಣೇಶ್ ಪೂಜಾರಿ ಸಾವ್ಯ, ಕಿಶೋರ್ ಕುಮಾರ್ ಕಲ್ಲಾಪು, ಘಟಕದ ಕೋಶಾಧಿಕಾರಿ ನಾಗೇಶ್ ಆದೇಲೂ, ಸಲಹೆಗಾರರಾದ ನಿರಂಜನ್, ಶ್ರೀಮತಿ ಸೇವಂತಿ ನಿರಂಜನ್, ನಿವೃತ್ತ ಯೋಧ ಉಮೇಶ್, ಹಾಗೂ ಯುವವಾಹಿನಿ ಕುಟುಂಬ ಸದಸ್ಯರು ಭಾಗವಹಿಸಿದ್ದರು.


ಘಟಕದ ಪ್ರಧಾನ ಕಾರ್ಯದರ್ಶಿ ಮಧುರ ರಾಘವ್ ಸ್ವಾಗತಿಸಿ, ಘಟಕದ ಸದಸ್ಯರಾದ ಶ್ರುತ ಮುಂಡೂರು ನಿರೂಪಿಸಿ, ಆಕಾಶ್ ಗೇರುಕಟ್ಟೆ ವಂದಿಸಿದರು.

Related posts

ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರಕ್ಕೆ “ಸರಿಗಮಪ ” ವಿನ್ನರ್ ಚನ್ನಪ್ಪ ಭೇಟಿ

Suddi Udaya

ಪುಂಜಾಲಕಟ್ಟೆ ಕೆಪಿಎಸ್ ವಿದ್ಯಾರ್ಥಿಗಳಿಗೆ ಮೈಟ್ ಇಂಜಿನಿಯರಿಂಗ್ ಕಾಲೇಜಿನಿಂದ ನವೀನತೆ ಮತ್ತು ತಾಂತ್ರಿಕ ಕೌಶಲ್ಯ ತರಬೇತಿ

Suddi Udaya

ಜ.3 -4: ಭಾರತೀಯ ಜೈನ್ ಮಿಲನ್ ವಲಯ 8 ರ ಆಶ್ರಯದಲ್ಲಿ ರಾಜ್ಯ ಮಟ್ಟದ ಜಿನ ಭಜನಾ ಸ್ಪರ್ಧೆ ಸೀಸನ್ 9

Suddi Udaya

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಉಪ ನಿರೀಕ್ಷಕರಾಗಿ (ಎಸ್.ಐ) ಭಡ್ತಿಗೊಂಡು, ವರ್ಗಾವಣೆಗೊಂಡ ದೇವಪ್ಪ ಎಂ. ರವರಿಗೆ ಬಿಳ್ಕೋಡುಗೆ

Suddi Udaya

ಮಲವಂತಿಗೆ ಜನಸ್ಪಂದನ ಸಭೆ

Suddi Udaya

ಗುರುವಾಯನಕೆರೆಯಲ್ಲಿ ವ್ಯಕ್ತಿಯೋರ್ವ ಅನುಮಾನಸ್ಪದ ಸಾವು!!?

Suddi Udaya
error: Content is protected !!