September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜೆಸಿಐ ಮಡಂತ್ಯಾರಿನ ಪದಗ್ರಹಣ ಸಮಾರಂಭ

ಮಡಂತ್ಯಾರು: ಜೆಸಿಐ ಮಡಂತ್ಯಾರಿನ 36 ನೇ ಅಧ್ಯಕ್ಷೆಯಾಗಿ ಹಾಗೂ ದ್ವಿತೀಯ ಮಹಿಳಾ ಅಧ್ಯಕ್ಷೆಯಾಗಿ ಜೇಸಿ ಸಾಯಿಸುಮಾ ಎಂ. ನಾವಡ ಹಾಗೂ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಜ.4 ರಂದು ಮಡಂತ್ಯಾರಿನ ಗಣಪತಿ ಮಂಟಪದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಜೆಸಿಐ ಭಾರತ, ವಲಯ 15 ರ ಅಧ್ಯಕ್ಷರಾದ ಜೆ.ಎಫ್.ಎಫ್. ಸಂತೋಷ ಶೆಟ್ಟಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ನ್ಯಾಯವಾದಿ ಸುರೇಶ್ ಕುಮಾರ್ ಬಿ. ನಾವೂರು ಭಾಗವಹಿಸಿ, ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು. ಜೆಸಿಐ ಮಡಂತ್ಯಾರಿನ ಪೂರ್ವಾಧ್ಯಕ್ಷರಾದ ಜೇಸಿ ಡಾ. ಹರ್ಷ ಸಂಪಿಗೆತ್ತಾಯ ಹಾಗೂ ಜೆಸಿಐ ಭಾರತ, ವಲಯ 15, ನಂದಿನಿ(ಪ್ರಾಂತ್ಯ ಎ) ಯ ಉಪಾಧ್ಯಕ್ಷರಾದ ಜೆ.ಎಫ್.ಎಮ್. ಅರುಣ್ ಮಾಂಜ ಇವರ ಗೌರವ ಉಪಸ್ಥಿತಿ ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿತು.

ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಜೇಸಿ ಅಮಿತಾ ಅಶೋಕ್, ಪೂರ್ವಾಧ್ಯಕ್ಷರಾದ ಜೇಸಿ ವಿಕೇಶ್ ಮಾನ್ಯ, ಕಾರ್ಯದರ್ಶಿ ಜೇಸಿ ಯತೀಶ್ ರೈ ಹಾಗೂ ಯುವ ಜೇಸಿ ಅಧ್ಯಕ್ಷ ಜೆಜೆಸಿ ಕೃಪಾಲ್ ಉಪಸ್ಥಿತರಿದ್ದರು.

ಜೆಸಿಐ ಮಡಂತ್ಯಾರಿನ ಪೂರ್ವಾಧ್ಯಕ್ಷರು , ಸದಸ್ಯರು, ಅನೇಕ ಗಣ್ಯರು ಭಾಗವಹಿಸಿ, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

Related posts

ಬಳಂಜ ಶಿವಾಜಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಬಳಂಜ ಶಾಲೆಯಲ್ಲಿ ರಕ್ಷಾಬಂಧನ ಆಚರಣೆ

Suddi Udaya

ಗುರುವಾಯನಕೆರೆಯಿಂದ ರಸ್ತೆ ತೇಪೆ ಕಾರ್ಯ ಆರಂಭ

Suddi Udaya

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವಿನೂತನ ‘ಸಿರಿ ಮಿಲ್ಲೆಟ್ ಕೆಫೆ’ ಧಾರವಾಡದಲ್ಲಿ ಶುಭಾರಂಭ

Suddi Udaya

ಉಜಿರೆ ಎಸ್‌.ಡಿ.ಎಂ ಸಿ.ಬಿ.ಎಸ್.ಇ ಶಾಲೆಯ ಶಿಕ್ಷಕರಿಗೆ “ಆಕ್ಸ್ಫರ್ಡ್ ಅಡ್ವಾಂಟೇಜ್ ಪೆಡಗೋಜಿ” ಕಾರ್ಯಾಗಾರ

Suddi Udaya

ಜೆಸಿಐ ಬೆಳ್ತಂಗಡಿ ಆತಿಥ್ಯದಲ್ಲಿ ಎಕ್ಸೆಲ್ ಪಿಯು ಕಾಲೇಜು ಸಹಭಾಗಿತ್ವದಲ್ಲಿ ಜೆಸಿಐ ಭಾರತದ ವಲಯ 15 ರ ಚಿಗುರು ತರಬೇತಿ ಕಾರ್ಯಾಗಾರ

Suddi Udaya

ಮೈಸೂರಿನಲ್ಲಿ ಬಾಲಕಿಯರ ವಿಭಾಗದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟ: ಜಿದ್ದಾಜಿದ್ದಿನ ಪಂದ್ಯಾವಳಿಯಲ್ಲಿ ಸತತ 9ನೇ ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಬಂದಾರು ಶಾಲೆ

Suddi Udaya
error: Content is protected !!