ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಂಡಿಂಜೆ ಗ್ರಾ.ಪಂ. ಮಕ್ಕಳ ಗ್ರಾಮಸಭೆ

ಅಂಡಿಂಜೆ : ಇಲ್ಲಿಯ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತಿನ್ ಎಂ ಇವರ ಅಧ್ಯಕ್ಷತೆಯಲ್ಲಿ ಮಕ್ಕಳ ಗ್ರಾಮಸಭೆ ಜ.6ರಂದು ನಡೆಯಿತು.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ವಿವಿಧ ಶಾಲಾ ಮಕ್ಕಳಿಂದ ಶೈಕ್ಷಣಿಕ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ವೇತಾ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವರಿ ಸಮಿತಿ ಅಂಡಿಂಜೆ ಶಾಲಾ ಅಧ್ಯಕ್ಷ ರಮೇಶ , ಸದಸ್ಯರಾದ ವಿಜಯ ಬಂಗೇರ ಅಂಡಿಂಜೆ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ನಳಿನಿ, ಸರಕಾರಿ ಪ್ರೌಢ ಶಾಲಾ ಪ್ರಥಮ ದರ್ಜೆಯ ಸಹಾಯಕರಾದ ಪ್ರಕಾಶ್ ಬಿ.ಆರ್ ಸಾವ್ಯ, ಸ. ಉ.ಪ್ರಾ. ಶಾಲಾ ಶಿಕ್ಷಕ ಮಂಜುನಾಥ್ ಶೆಟ್ಟಿಗಾರ್, ನೆಲ್ಲಿಂಗೇರಿ ಶಾಲಾ ಶಿಕ್ಷಕಿ ಅಕ್ಷತಾ ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ಸಿಬ್ಬಂದಿ ಶೀನ ಕಾರ್ಯಕ್ರಮ ನಿರೂಪಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪಾಟೀಲ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಪಂಚಾಯತ್ ಸದಸ್ಯ ಹರೀಶ್ ಹೆಗ್ಡೆ ವಂದಿಸಿದರು.

ಶಾಲಾ ಮುಖ್ಯ ಶಿಕ್ಷಕರಾದ ಕವನ್ ಕುಮಾರ್, ಇತರ ಅಧ್ಯಾಪಕ ವೃಂದದವರು, ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

Related posts

ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಶ್ರೀ ಕೃಷ್ಣ ಜಯಂತಿ ಆಚರಣೆ

Suddi Udaya

ಮುಂಡಾಜೆಯಲ್ಲಿ ಕೂಲಿ ಕೆಲಸಕ್ಕೆ ಹೋದ ಮಹಿಳೆ ಕುಸಿದು ಬಿದ್ದು ಮೃತ್ಯು

Suddi Udaya

ಬಳಂಜ ಎಲ್.ಕೆ.ಜಿ ವಿದ್ಯಾರ್ಥಿಗಳಿಗೆ ಶಿವಾಜಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಐಡಿ ಕಾರ್ಡ್ ಮತ್ತು ಬೆಲ್ಟ್ ವಿತರಣೆ

Suddi Udaya

ನಾರಾವಿ: ಬೈಕ್ ಗೆ ಡಿಕ್ಕಿ ಹೊಡೆದ ಆಟೋರಿಕ್ಷಾ : ಬೈಕ್ ಸವಾರರಿಗೆ ಗಾಯ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ LAV(Lo Assistance Visit) ಕಾರ್ಯಕ್ರಮ

Suddi Udaya

ಕೆಪಿಎಸ್ ಪುಂಜಾಲಕಟ್ಟೆ ಪದವಿಪೂರ್ವ ವಿಭಾಗದ ಕಾಲೇಜು ವಾರ್ಷಿಕೋತ್ಸವ

Suddi Udaya
error: Content is protected !!