March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ : ಗ್ರಾಮೀಣ ಭಾಗದ ವಿವಿಧೆಡೆ ಕಾಲುಸಂಕ ನಿರ್ಮಾಣಕ್ಕೆ ರೂ.1 ಕೋಟಿ ಅನುದಾನ ಮಂಜೂರು: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸಂಪರ್ಕಕ್ಕೆ ಅನುಕೂಲ ಕಲ್ಪಿಸುವಂತಹ ಸ್ಥಳಗಳಲ್ಲಿ ಕಾಲುಸಂಕ‌ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಅದರಂತೆ, ಸರಕಾರದಿಂದ ಈ ಬಾರಿಗೆ ತಲಾ ರೂ.25 ಲಕ್ಷ ವೆಚ್ಚದಲ್ಲಿ ಒಟ್ಟು ನಾಲ್ಕು ಕಾಮಗಾರಿಗಳು ಅನುಮೋದನೆಗೊಂಡಿರುತ್ತದೆ.

ಅನುಮೋದನೆಗೊಂಡ ಕಾಮಗಾರಿಗಳ ವಿವರ: ಮಲವಂತಿಗೆ ಗ್ರಾಮದ ಕುಮೇರು ಪರಿಶಿಷ್ಟ ಪಂಗಡ ಕಾಲೊನಿ ರಸ್ತೆಯಲ್ಲಿ ಕಾಲುಸಂಕ. , ನೆರಿಯ ಗ್ರಾಮದ ಪುಲ್ಲಾಜೆ ಎಂಬಲ್ಲಿ ಕಾಲುಸಂಕ, ಸವಣಾಲು ಗ್ರಾಮದ ಕೋಡಿಮುಗೇರು ಎಂಬಲ್ಲಿ ಕಾಲುಸಂಕ, ಕುಕ್ಕೇಡಿ ಗ್ರಾಮದ ಕಾಜಾಲ ಎಂಬಲ್ಲಿ ಕಾಲುಸಂಕ, ಈ ಎಲ್ಲಾ ಕಾಮಗಾರಿಗಳಿಗೆ ಮುಂದಿನ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆಗಳನ್ನು ನಡೆಸಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಕಲ್ಪಿಸಲಿದ್ದು ಈ ಕಾರ್ಯಕ್ಕೆ ರೂ.1.00ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ಶಾಸಕರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಮುಸ್ಕಾನ್ ಕೌಸರ್ ರಿಗೆ ಸನ್ಮಾನ

Suddi Udaya

ಗರ್ಡಾಡಿ: ಗಾಳಿ ಮಳೆಗೆ ಮಣ್ಣು ಕುಸಿತ, ಮನೆಗೆ ಹಾನಿ

Suddi Udaya

ಸೆ.22-ಅ.2: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ, ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ

Suddi Udaya

ಮುಂಡಾಜೆ: ಮೈಸೂರು ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾಟ ಸಮಾರೋಪ 

Suddi Udaya

ರಾಜ್ಯದ ಕಾಂಗ್ರೆಸ್ ಸರಕಾರದ ದುರಾಡಳಿತದ ವಿರುದ್ದ ಕಳಿಯ ಗ್ರಾ.ಪಂ. ಎದುರು ಬಿಜೆಪಿ ಪ್ರತಿಭಟನೆ

Suddi Udaya

ಬೆಳ್ತಂಗಡಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ: ಎಚ್ಚರ ವಹಿಸುವಂತೆ ಶಾಸಕ ಹರೀಶ್ ಪೂಂಜ‌ ಮನವಿ: ತುರ್ತು ಸಂದರ್ಭಗಳಲ್ಲಿ‌ ಸಹಾಯವಾಣಿ ಸಂಪರ್ಕಿಸಲು ಸೂಚನೆ

Suddi Udaya
error: Content is protected !!