March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಿಡಿಗಲ್: ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ – ಶಾಂಭವಿ ವಿಲಾಸ ಯಕ್ಷಗಾನ ಪ್ರದರ್ಶನ

ಉಜಿರೆ: ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ನಿಡಿಗಲ್-ಕಲ್ಮಂಜ ಇದರ 47ನೇ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕಲ್ಮಂಜ ಇವರ ಸಹಕಾರದೊಂದಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ಜ.6ರಂದು ನಿಡಿಗಲ್ ಶ್ರೀ ಸತ್ಯನಾರಾಯಣ ಭಜನಾ ಮಂದಿರದಲ್ಲಿ ಜರುಗಿತು.

ಬೆಳಿಗ್ಗೆ ಗಣಹೋಮ, ಸತ್ಯದೇವತೆಗೆ ತಂಬಿಲಸೇವೆ, ಭಜನಾ ಸೇವೆ, ಅಪರಾಹ್ನ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭ, ರಾತ್ರಿ ಮಹಾಪೂಜೆ, ಭಜನಾ ಮಂಗಳ, ಪ್ರಸಾದ ವಿತರಣೆ ನೆರವೇರಿ ಶ್ರೀ ಸತ್ಯನಾರಾಯಣ ಮಕ್ಕಳ ಯಕ್ಷಗಾನ ತರಬೇತಿ ಕೇಂದ್ರದ ಮಕ್ಕಳಿಂದ ಅರುಣ್ ಕುಮಾರ್ ಕಲ್ಮಂಜ ಇವರ ನಿರ್ದೇಶನದಲ್ಲಿ ಶೇಖರ್ ಟಿ., ಮಂಜುಶ್ರೀ ಸಾರಥ್ಯದಲ್ಲಿ ಶಾಂಭವಿ ವಿಲಾಸ ಯಕ್ಷಗಾನ ಪ್ರದರ್ಶನ ಜರುಗಿತು.

ಈ ವೇಳೆ ಉಜಿರೆ ಮಂಜುಶ್ರೀ ಪ್ರಿಂಟರ್ಸ್ ಮ್ಯಾನೇಜರ್ ಶೇಖರ್ ಟಿ ಮತ್ತು ಯಕ್ಷಗುರು ಅರುಣ್ ಕುಮಾರ್ ಧರ್ಮಸ್ಥಳ ರವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಯಕ್ಷಗಾನ ಪ್ರೋತ್ಸಾಹಕ ಭುಜಬಲಿ ಧರ್ಮಸ್ಥಳ, ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಅಧ್ಯಕ್ಷ ಸಂತೋಷ್ ಹೆಗ್ಡೆ, ಕೋಶಾಧಿಕಾರಿ ಮುಕೇಶ್ ಗೌಡ, ಕಾರ್ಯದರ್ಶಿ ಹರೀಶ್ ಡಿ., ಶ್ವೇತಾ ನಾಗೇಶ್ ಆಚಾರ್ಯ, ಕಿರಣ್, ಕೃಷ್ಣಪ್ಪ ಟೈಲರ್, ಪ್ರಜ್ಞಾ, ಸಹನಾ, ಶ್ವೇತಾ, ಶಶಿಧರ ಮಡಿವಾಳ, ನಾಗೇಶ್ ಆಚಾರ್ಯ, ಹರೀಶ್ ಮಡಿವಾಳ, ಶ್ರೀ ಕ್ಷೇ ಧ.ಗ್ರಾ.ಯೋ, ಕಲ್ಮಂಜ ವಿಭಾಗದ ಸೇವಾಪ್ರತಿನಿಧಿ ದಿಶಾ, ಕಲ್ಮಂಜ ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷ ಬಿ.ಎನ್. ಹಮೀದ್ ಉಪಸ್ಥಿತರಿದ್ದರು.

Related posts

ಧರ್ಮಸ್ಥಳ ಮತ್ತು ಉಜಿರೆ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶ: ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಭಾಗಿ

Suddi Udaya

ಕಳೆಂಜದಲ್ಲಿ ಲೋಲಾಕ್ಷರ ಮನೆ ಪಂಚಾಂಗ ಕಿತ್ತೆಸೆದ ಅರಣ್ಯ ಇಲಾಖೆ:ಬಡವನ ಮೇಲೆ ಅರಣ್ಯಧಿಕಾರಿಗಳ ದೌರ್ಜನ್ಯದ ವಿರುದ್ಧ ತಿರುಗಿ ಬಿದ್ದ ಶಾಸಕರು

Suddi Udaya

ಹೊಕ್ಕಾಡಿಗೋಳಿ: ಶ್ರೀ ಮಹಿಷ ಮರ್ದಿನಿ ಕಂಬಳ ಸಮಿತಿ: ವೀರ ವಿಕ್ರಮ ಜೋಡುಕರೆ ಬಯಲು ಕಂಬಳದ ಕರೆ ಮುಹೂರ್ತ

Suddi Udaya

ಬಳಂಜ ಎಲ್.ಕೆ.ಜಿ ವಿದ್ಯಾರ್ಥಿಗಳಿಗೆ ಶಿವಾಜಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಐಡಿ ಕಾರ್ಡ್ ಮತ್ತು ಬೆಲ್ಟ್ ವಿತರಣೆ

Suddi Udaya

ಮಚ್ಚಿನ ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ನಾವೂರು ಗ್ರಾಮ ಸಮಿತಿಯ ಸಭೆ

Suddi Udaya
error: Content is protected !!