37.9 C
ಪುತ್ತೂರು, ಬೆಳ್ತಂಗಡಿ
March 6, 2026
ಅಪಘಾತಗ್ರಾಮಾಂತರ ಸುದ್ದಿಬೆಳ್ತಂಗಡಿವರದಿ

ಕಲ್ಮಂಜ: ಸಂಚಾರಿಸುತ್ತಿರುವಾಗಲೇ ಕಳಚಿ ಬಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಟಯರ್

ಕಲ್ಮಂಜ: ಮಂಗಳೂರು-ವಿಲ್ಲಪುರಂ ರಾಷ್ಟ್ರೀಯ ಹೆದ್ದಾರಿಯ ಕಲ್ಮಂಜ ಸರಕಾರಿ ಪ್ರಾಥಮಿಕ ಶಾಲಾ ಬಳಿ ಸರಕಾರಿ ಬಸ್ ಸಂಚಾರದಲ್ಲಿರುವಾಗಲೇ ಟಯರ್ ಕಳಚಿ ಬಿದ್ದ ಘಟನೆ ಇಂದು ಸಂಜೆ ನಡೆದಿದೆ.

ದಾವಣಗೆರೆ- ಮಂಗಳೂರು ಕಡೆ ಸಂಚಾರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್‌ನ ವೀಲ್ ಹಬ್ ತುಂಡರಿಸಿದ ಪರಿಣಾಮವಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಸ್ ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಬದಲಿ ಬಸ್ ಮೂಲಕ ಪ್ರಯಾಣಿಕರನ್ನು ಕಳುಹಿಸುವ ಕೆಲಸವಾಗಿದೆ.

“ಬಸ್ಸ್ಗ್ ಗತಿ ಇಜ್ಜಿ, ಸರಕಾರಗ್ ಮತಿ ಇಜ್ಜಿ”:ಸರಕಾರಿ ಬಸ್ ಟಯರ್ ಕಳಚಿ ಬಿದ್ದ ಸಂದರ್ಭವನ್ನು ಸ್ಥಳೀಯರು ಸುದ್ದಿ ಉದಯ ವರದಿಗಾರದೊಂದಿಗೆ ವಿವರಿಸುತ್ತಾ, ಸರಕಾರಿ ಬಸ್ ಗಳು ದಾರಿಮಧ್ಯೆ ಕೆಟ್ಟುನಿಲ್ಲುವುದು, ಟಯರ್ ಬ್ಲಾಸ್ಟ್ ಅಥವಾ ಕಳಚಿ ಬೀಳುವುದು ಇಂತಹ ಘಟನೆಗಳು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಈ ರೀತಿಯ ಅನಾಹುತಗಳು ಚಾರ್ಮಾಡಿ ಘಾಟ್ ನಂತಹ ಪ್ರದೇಶಗಳಲ್ಲಿ ನಡೆದರೆ, ಪ್ರಯಾಣಿಕರ ಹಾಗೂ ಚಾಲಕರ ಪ್ರಾಣಕ್ಕೆ ಕಂಟಕ ತರುವಂತಾಗಿದೆ. ಒಟ್ಟಾರೆಯಾಗಿ “ಬಸ್ಸ್ಗ್ ಗತಿ ಇಜ್ಜಿ, ಸರಕಾರಗ್ ಮತಿ ಇಜ್ಜಿ”. ಸರಕಾರದ ಯೋಜನೆಗಳಿಂದಾಗಿ ರಿಪೇರಿಗೂ ಹಣ ಇಲ್ಲದಂತಾಗಿದೆ. ಬಸ್ಸ್ ಗಳನ್ನು ಸರಿಯಾಗಿ ಪರಿಶೀಲನೆ ನಡೆಸಿ ಸಂಚಾರಕ್ಕೆ ಬಿಡಬೇಕು ಎಂದು ಹೇಳಿದರು.

Related posts

ನಾವೂರುನಲ್ಲಿ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ

Suddi Udaya

ಸರಕಾರಿ ಪದವಿಪೂರ್ವ ಕಾಲೇಜು, ಕೊಯ್ಯೂರು :ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭ

Suddi Udaya

ಮಿತ್ತಬಾಗಿಲು ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ: ಸ೦ಘದ ಸದಸ್ಯರಿಗೆ 20% ಡಿವಿಡೆಂಟ್ ಘೋಷಣೆ.

Suddi Udaya

ಗೇರುಕಟ್ಟೆ ಸರಕಾರಿ ಪ.ಪೂ. ಕಾಲೇಜಿಗೆ ಶೇ.93.47 ಫಲಿತಾಂಶ

Suddi Udaya

ದಿ| ಪದ್ಮನಾಭ ಆಚಾರ್ಯರ ಕುಟುಂಬಕ್ಕೆ ಸ್ನೇಹಿತರ ನೆರವು: ಶ್ರಮದಾನದ ಮೂಲಕ ಮನೆ ದುರಸ್ತಿ

Suddi Udaya

ಬಳಂಜ: ಛದ್ಮವೇಷ ಸ್ಪರ್ಧೆಯಲ್ಲಿ ಸತತ ಪ್ರಶಸ್ತಿ ಪಡೆದ ಬಳಂಜ ಶಾಲಾ ವಿದ್ಯಾರ್ಥಿ ಸಮ್ಯಕ್ ಜೈನ್

Suddi Udaya
error: Content is protected !!