ರೆಖ್ಯ: ಗುಡ್ರಾದಿ ಶ್ರೀ ಗುಡ್ರಾಮಲ್ಲೇಶ್ವರ ದೇವಸ್ಥಾನ ರೆಖ್ಯ ಇದರ ವರ್ಷಾವಧಿ ಉತ್ಸವವು ಬ್ರಹ್ಮಶ್ರೀ ಕೇಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜ.13 ಮತ್ತು 14 ರಂದು ಜರುಗಲಿದೆ. ಜ. 13 ರಂದು ಬೆಳಿಗ್ಗೆ ಉಗ್ರಾಣ ಮುಹೂರ್ತ, ರಾತ್ರಿ ಭಜನಾ ಕಾರ್ಯಕ್ರಮ, ಮಹಾಪೂಜೆ, ದೇವರ ಬಲಿ ಹೊರಟು ಭೂತಬಲಿ ಮಹೋತ್ಸವ, ಕಟ್ಟೆ ಪೂಜೆ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಜ.14ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಕಲಶ ಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಧ್ಯಾಹ್ನ ದೇವರಿಗೆ ಕಲಶಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಜ.13 ರಂದು ಸಂಜೆ ಶಾಲಾ ಮಕ್ಕಳಿಂದ, ರಾತ್ರಿ ಪೂಜಾ ಕಲಾ ಆರ್ಟ್ಸ್ ಗೌಡ ಆರ್ಕೆಡ್ ಗೋಳಿತೊಟ್ಟು ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.











