25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿಸರ್ಕಾರಿ ಇಲಾಖಾ ಸುದ್ದಿ

ಜನಸ್ಪಂದನ ಸಭೆಯ ಫಲಶ್ರುತಿ 108 ಹಕ್ಕು ಪತ್ರ, 54 ಮಂದಿಗೆ ನಡಾವಳಿ ವಿತರಣೆ

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಜನರ ಬಳಿಗೆ ತಾಲೂಕು ಮಟ್ಟದ ಆಡಳಿತ ವಿನೂತನ ಪರಿಕಲ್ಪನೆಯ ಜನಸ್ಪಂದನ ಸಭೆಯ ಫಲಶ್ರುತಿಯಾಗಿ ತಾಲೂಕು ಆಡಳಿತ ಸೌಧದಲ್ಲಿ ಅರ್ಹ ಫಲಾನುಭವಿಗಳಿಗೆ 94ಸಿ, 94ಸಿಸಿ ಹಕ್ಕುಪತ್ರಗಳನ್ನು ವಿತರಣಾ ಕಾರ್ಯಕ್ರಮ ಜ.10 ರಂದು ನಡೆಯಿತು.

ತಾಲೂಕಿನ 48 ಗ್ರಾಮ ಪಂಚಾಯತ್ ಹಾಗೂ ಒಂದು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ನಡೆದ ಜನಸ್ಪಂದನ ಸಭೆಯಲ್ಲಿ ಗ್ರಾಮಸ್ಥರು ತಮ್ಮ 94/ಸಿ, ನಡಾವಳಿ ಕಡತಗಳ ವಿಲೇಗೆ ಶಾಸಕರಲ್ಲಿ ವಿನಂತಿಸಿದ್ದರು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು ಜನಸ್ಪಂದನ ಸಭೆಯ ಫಲಶ್ರುತಿಯಾಗಿ 108 ಮಂದಿಗೆ ಹಕ್ಕು ಪತ್ರ ಹಾಗೂ 54 ಮುಂದಿಗೆ ನಡವಾಳಿ ನೀಡಲಾಯಿತು.

ಹಕ್ಕು ಪತ್ರ ವಿತರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ಕಳೆದ ಮೂರು ತಿಂಗಳಿಂದ ನಿರಂತರವಾಗಿ ತಾಲೂಕಿನ 48 ಗ್ರಾಮ ಪಂಚಾಯತ್ ನಲ್ಲಿ ಆಯೋಜಿಸಿದ ಜನಸ್ಪಂದನ ಸಭೆಯಲ್ಲಿ ಜನರಿಂದ 94ಸಿ ವಿತರಣೆಗೊಳಿಸಲು ಅಡ್ಡಿಯಾಗಿರುವ ಸಮಸ್ಯೆಗಳ ಬಗ್ಗೆ ದೂರುಗಳು ಬಂದಿದ್ದು ಮುಂದೆ ಈ ಬಗ್ಗೆ ಅಧಿಕಾರಿಗಳಿಗೆ ಸ್ಥಳ ತನಿಖೆ ನಡೆಸಲು ಸೂಚಿಸಲಾಗಿತ್ತು. ಕೆಲ ಕಡತಗಳಲ್ಲಿ ಅರಣ್ಯದ ಎನ್ ಒಸಿ ನೀಡುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಇದರ ಪ್ರತಿಫಲವಾಗಿ ಇಂದು 108 ಮುಂದಿಗೆ ಹಕ್ಕು ಪತ್ರ ಹಾಗೂ 54 ಮುಂದಿಗೆ ನಡವಾಳಿ ನೀಡಲಾಗಿದೆ. ರಾಜ್ಯದಲ್ಲಿಯೇ 32 ಇಲಾಖೆಗಳ ಅಧಿಕಾರಿಗಳೊಂದಿಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜನಸ್ಪಂದನ ಸಭೆ ನಡೆದಿರುವುದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಪ್ರಥಮವಾಗಿದೆ ಎಂದು ಹೇಳಿದ ಶಾಸಕರು ಕಡತಗಳ ವಿಲೇಗೆ ಕ್ರಮ ವಹಿಸಿದ ಅಧಿಕಾರಿಗೆ ಅಭಿನಂದನೆ ಸಲ್ಲಿಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷರುಗಳಾದ ಮಲವಂತಿಗೆಯ ಪ್ರಕಾಶ್ ಜೈನ್ ಎಳನೀರು, ಪಟ್ರಮೆಯ ಮನೋಜ್, ಕುಕ್ಕೇಡಿಯ ಅನಿತಾ ಕೆ. ಹಾಗೂ ಉಪ ತಹಶೀಲ್ದಾರ್ ಜಯ ಉಪಸ್ಥಿತರಿದ್ದರು.

Related posts

ಉಜಿರೆ ಎಸ್ ಡಿ ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿಇಟಿ ಸಹಾಯ ಕೇಂದ್ರ

Suddi Udaya

ಹಿರಿಯ ಸಹಕಾರಿ, ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷ ತಣ್ಣೀರುಪಂತ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನಿರಂಜನ್ ಬಾವಂತಬೆಟ್ಟುರವರಿಗೆ ‘ಸಹಕಾರಿ ರತ್ನ ಪ್ರಶಸ್ತಿ’

Suddi Udaya

ದ.ಕ. ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಅಧ್ಯಕ್ಷರಾಗಿ ದಯಾನಂದ ನಾಯಕ್, ಪ್ರ. ಕಾರ್ಯದರ್ಶಿಯಾಗಿ ಸುಧಾಕರ್ ಪ್ರಭು ಆಯ್ಕೆ

Suddi Udaya

ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷರಾಗಿ ಸಂತೋಷ್ ಪಿ.ಕೋಟ್ಯಾನ್ ಪುನರಾಯ್ಕೆ

Suddi Udaya

ಪ್ರತಿಭಾ ಕಾರಂಜಿ ಸ್ಪರ್ಧೆ: ಶ್ರೀ ಭಾರತೀಯ ಆಂ.ಮಾ. ಪ್ರೌಢಶಾಲೆಯ ಹಿರಿಯ ಪ್ರಾಥಮಿಕ ವಿಭಾಗಕ್ಕೆ ಸಮಗ್ರ ಪ್ರಶಸ್ತಿ

Suddi Udaya

ಜಿಲ್ಲಾಮಟ್ಟದ ಕರಾಟೆ ಪಂದ್ಯಾಟ: ಬೆಳ್ತಂಗಡಿ ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya
error: Content is protected !!