September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಶ್ರೀ ವನದುರ್ಗಾ ಶ್ರೀ ನಾಗರಕ್ತೇಶ್ವರಿ ಸಾನಿಧ್ಯ ಕ್ಷೇತ್ರದಲ್ಲಿ ದುರ್ಗಾಪೂಜೆ, ಆಶ್ಲೇಷ ಬಲಿ, ರಂಗಪೂಜೆ

ಉಜಿರೆ: ಉಜಿರೆ ಗ್ರಾಮದ ಕಲ್ಲೆ, ಅಜಿತ್ ನಗರದಲ್ಲಿರುವ ಶ್ರೀ ವನದುರ್ಗಾ ಶ್ರೀ ನಾಗರಕ್ತೇಶ್ವರಿ ಸಾನಿಧ್ಯ ಕ್ಷೇತ್ರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ದುರ್ಗಾಪೂಜೆ, ಆಶ್ಲೇಷ ಬಲಿ, ರಂಗಪೂಜೆ ವೇದಮೂರ್ತಿ ಪಿ.ಆರ್. ಯಡಪಡಿತ್ತಾಯ ರವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಜ.8 ರಂದು ಸಂಜೆ ಪ್ರಾರ್ಥನೆ, ದುರ್ಗಾಪೂಜೆ , ಮಹಾಪೂಜೆ, ಆರಾಧನೆ, ತೀರ್ಥ ಪ್ರಸಾದ, ಅನ್ನಸಂತರ್ಪಣೆ , ಜ.9ರಂದು ಪ್ರಾತಃಕಾಲ ಪುಣ್ಯಾಹ, ಕಲಶ ಪ್ರತಿಷ್ಠೆ, ಬೆಳಿಗ್ಗೆ ಗಣಪತಿ ಹೋಮ, ಕಲಷಾಭಿಷೇಕ, ಪರ್ವಾರಾಧನೆ, ದುರ್ಗಾಹೋಮ ಪೂರ್ಣಾಹುತಿ, ‘ಆಶ್ಲೇಷಬಲಿ’ ಆರಂಭ, ಮಧ್ಯಾಹ್ನ ಮಹಾಪೂಜೆ, ಬ್ರಾಹ್ಮಣ ವಟು ಆರಾಧನೆ, ತೀರ್ಥ ಪ್ರಸಾದ , ಸಂಜೆ ಸಂಕಲ್ಪ, ರಂಗಪೂಜೆ ಆರಂಭ, ರಾತ್ರಿ ಮಹಾಮಂಗಳಾರತಿ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.

ಈ ವೇಳೆ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಕೆ. ಮೋಹನ್ ಕುಮಾರ್ ಅವರ ಸೇವೆಯಿಂದ ಕ್ಷೇತ್ರವು ಹೂಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿತ್ತು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಗಣ್ಯರು, ಭಕ್ತರು ಭಾಗವಹಿಸಿ ದೇವರ ಪ್ರಸಾದವನ್ನು ಸ್ವೀಕರಿಸಿದರು.


ಇಂದು ( ಜ.10) ಸಂಜೆ ಪ್ರಾರ್ಥನೆ, ರಾತ್ರಿ ಮಹಿಷಾಂತಾಯ, ರಕ್ತೇಶ್ವರಿ, ಕಲ್ಲುರ್ಟಿ, ಪಂಜುರ್ಲಿ ಗುಳಿಗ ದೈವಗಳಿಗೆ ನರ್ತನ ಸೇವೆ ಜರುಗಲಿರುವುದು. ರಾತ್ರಿ ಭಕ್ತರಿಗೆ ಅನ್ನಸಂತರ್ಪಣೆ, ಫಲಾಹಾರ ವ್ಯವಸ್ಥೆ ಕಲ್ಪಿಸಲಾಗಿದೆ.

Related posts

ಕಡಿರುದ್ಯಾವರ: ತೋಟಗಳಿಗೆ ನುಗ್ಗಿದ ಕಾಡಾನೆಗಳ ಹಿಂಡು: ಅಪಾರ ಕೃಷಿ ನಾಶ

Suddi Udaya

ದ.ಕ ಜಿಲ್ಲಾ ಖಾಝಿ ಫಝಲ್ ಕೋಯಮ್ಮ ಕೂರ ತಂಙಲ್ ನಿಧನ

Suddi Udaya

ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಮನವಿಗೆ ಕೆಎಸ್ ಆರ್ ಟಿ ಸಿ ಸ್ಪಂದನೆ: ಆ.25 ಧರ್ಮಸ್ಥಳದಿಂದ ನಾರಾವಿಗೆ ಸರ್ಕಾರಿ ಬಸ್ ಪ್ರಾರಂಭ

Suddi Udaya

ನಿರೀಕ್ಷೆಗೆ ನಿರಾಸೆ ತಂದ ಸತ್ವಹೀನ ಬಜೆಟ್ : ಹರೀಶ್ ಪೂಂಜ

Suddi Udaya

ಪಾರೆಂಕಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ, ಮಹಿಳಾ – ಯುವ ಬಿಲ್ಲವ ವೇದಿಕೆ ವತಿಯಿಂದ ಗುರುಪೂಜೆ, ಸಾಧಕರಿಗೆ ಸನ್ಮಾನ – ಸಾಂಸ್ಕೃತಿಕ ಝೇಂಕಾರ

Suddi Udaya

ಉಜಿರೆ: ಎಸ್‌ಡಿಎಂ ಐಟಿ ಕಾಲೇಜಿನ ಗಣಿತ ವಿಭಾಗದ ಉಪನ್ಯಾಸಕಿ ಶೋಭಾ ಪಿ. ಜೀವಂದರ್ ರವರಿಗೆ ಪಿ.ಹೆಚ್.ಡಿ ಪದವಿ

Suddi Udaya
error: Content is protected !!