September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಂಗಳೂರಿನ ಎ.ಆರ್.ಎಂ ಕಿಯಾ ಶೋರೂಮ್‌ನಲ್ಲಿ ನೂತನ “ಕಿಯಾ ಸೆಲ್ಟೋಸ್” ಕಾರು ಅನಾವರಣ

ಮಂಗಳೂರು: ನಗರದ ಕದ್ರಿ ಮಲ್ಲಿಕಟ್ಟೆಯ ಎ.ಆರ್.ಎಂ ಕಿಯಾ ಶೋರೂಮ್‌ನಲ್ಲಿ ನೂತನ ಕಿಯಾ ಸೆಲ್ಟೋಸ್ ಕಾರನ್ನು ಜ.9ರಂದು ಅನಾವರಣಗೊಳಿಸಲಾಯಿತು. ಕರಾವಳಿಗರಿಗೆ ಈ ಜನಪ್ರಿಯ ಎಸ್‌ಯುವಿ ಇತ್ತೀಚಿನ ಆವೃತ್ತಿಯು ಪಾದಾರ್ಪಣೆ ಮಾಡಿದಂತಾಗಿದೆ. ಈ ಕಾರಿನ ಆರಂಭಿಕ ಬೆಲೆಯು 10.99 ಲಕ್ಷ ರೂ.ಗಳಾಗಿವೆ.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚಾರ್ಟರ್ಡ್ ಅಕೌಂಟೆಂಟ್ ಮತ್ತು ‘ಕಾಮತ್ ಅಂಡ್ ರಾವ್ ಸಂಸ್ಥೆಯ ಆಡಳಿತ ಪಾಲುದಾರ ಶ್ರೀನಿವಾಸ್ ಎಸ್. ಕಾಮತ್ ನೂತನ ಕಾರನ್ನು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಎ.ಆರ್.ಎಂ ಕಿಯಾ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಅರೂರ್ ಗಣೇಶ್ ರಾವ್, ಮಾರಾಟ ಮತ್ತು ಮಾರ್ಕೆಟಿಂಗ್ ನಿರ್ದೇಶಕ ಅರೂರ್ ವರುಣ್ ರಾವ್, ಎಚ್.ಆರ್. ನಿರ್ದೇಶಕ ಅರೂರ್ ವಿಕ್ರಮ್ ರಾವ್, ಹಿರಿಯ ಉಪಾಧ್ಯಕ್ಷ ಪ್ರದೀಪ್ ಪೈ, ಎಜಿಎಂ (ವಿಎಎಸ್) ಕನಕ ಕುಮಾರ್, ಮಾರಾಟ ವಿಭಾಗದ ಎಜಿಎಂ ಹರೀಶ್ ರಾವ್, ಮಾರಾಟ ಮತ್ತು ಎಚ್.ಆರ್ ವಿಭಾಗದ ಜಿಎಂ ಶಶಿಕುಮಾರ್ ಉಡುಪಿ ಹಾಗೂ ಮಾರಾಟ ವ್ಯವಸ್ಥಾಪಕ ಜಯಪ್ರಕಾಶ್ ಉಪಸ್ಥಿತರಿದ್ದರು.

ನೂತನ ಕಿಯಾ ಸೆಲ್ಟೋಸ್ ಕಾರು ನವೀನ ವಿನ್ಯಾಸ, ಸುಧಾರಿತ ತಾಂತ್ರಿಕ ವೈಶಿಷ್ಟ್ಯಗಳು ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ಒಳಗೊಂಡಿದೆ. ಮಿಡ್-ಸೈಝ್ ಎಸ್‌ಯುವಿ ವಿಭಾಗದಲ್ಲಿ ಶೈಲಿ, ತಂತ್ರಜ್ಞಾನ ಮತ್ತು ಸೌಕರ್ಯವನ್ನು ಬಯಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಮಾದರಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿಯ ಪ್ರತಿನಿಧಿಗಳು ತಿಳಿಸಿದ್ದಾರೆ.
ಈ ಕಾರು ವಾಹನ ಪ್ರೇಮಿಗಳು ಮತ್ತು ಸ್ಥಳೀಯ ಗ್ರಾಹಕರ ಗಮನ ಸೆಳೆದಿದೆ. ಮಂಗಳೂರಿನ ಶೋರೂಮ್‌ನಲ್ಲಿ ಹೊಸ ಸೆಲ್ಟೋಸ್‌ಗಾಗಿ ಬುಕ್ಕಿಂಗ್ ಮತ್ತು ವಿಚಾರಣೆಗಳು ಈಗಾಗಲೇ ಆರಂಭವಾಗಿವೆ ಎಂದು ಎ.ಆರ್.ಎಂ ಕಿಯಾ ತಿಳಿಸಿದೆ.

Related posts

ಉಜಿರೆ ಎಸ್.ಡಿ.ಎಮ್ ಆಂ.ಮಾ. ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಗುಂಡೂರಿ ಕಟ್ಟೆ ಸ್ಪೋರ್ಟ್ಸ್ ಕ್ಲಬ್ ಇದರ ಆಶ್ರಯದಲ್ಲಿ 3ನೇ ವರ್ಷದ 65 ಕೆ.ಜಿ ವಿಭಾಗದ ಮುಕ್ತ ಮ್ಯಾಟ್ ಕಬಡ್ಡಿ

Suddi Udaya

ಕೋಟದಲ್ಲಿ ಗ್ರಾ.ಪಂ. ಸದಸ್ಯರಿಗೆ ಕ್ರೀಡಾಕೂಟ ಮಚ್ಚಿನ ಗ್ರಾ.ಪಂ. ಗೆ ದ್ವಿತೀಯ ಪ್ರಶಸ್ತಿ

Suddi Udaya

ಇಂದಬೆಟ್ಟು ಗ್ರಾ.ಪಂ. ಅಧ್ಯಕ್ಷರಾಗಿ ಆಶಾಲತಾ ಉಪಾಧ್ಯಕ್ಷರಾಗಿ ಪ್ರೇಮ ಅವಿರೋಧ ಆಯ್ಕೆ

Suddi Udaya

ಬೆಳ್ತಂಗಡಿ ಎಸ್ ಡಿ ಎಮ್ ಶಾಲೆಯ ವಿದ್ಯಾರ್ಥಿಗಳು ಬುಲ್ ಬುಲ್ಸ್ ಗೀತಾ ಗಾಯನದಲ್ಲಿ ದ್ವಿತೀಯ

Suddi Udaya

ಕೊಕ್ಕಡ: ಅನುಚಿತ ವರ್ತನೆ, ಹಲ್ಲೆ ಆರೋಪ: ಕೊಕ್ಕಡ ಹಾಗೂ ನೆಲ್ಯಾಡಿ ಮಹಿಳೆಯರಿಂದ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!