26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶುಭಾರಂಭ

ಉಜಿರೆ:ಕಾಲಭೈರವ ಆರ್ಕೇಡ್ ನಲ್ಲಿ ಸಮೃದ್ದಿ ಟ್ರೇಡರ್ಸ್ ದಿನಸಿ ಮಳಿಗೆ ಶುಭಾರಂಭ

ಉಜಿರೆ: ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ವಾಣಿಜ್ಯ ನಿವೇಶನ ಉಜಿರೆಯ ಶ್ರೀ ಕಾಲಭೈರವ ಆರ್ಕೆಡ್ ನಲ್ಲಿ ದಿನಸಿ ಮಳಿಗೆ ಸಮೃದ್ಧಿ ಟ್ರೇಡರ್ಸ್ ಇದರ ಶುಭಾರಂಭವು ಜೂ. 6 ರಂದು ನಡೆಯಿತು.

ದಿನಸಿ ಮಳಿಗೆಯನ್ನು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಯು. ಶರತ್ ಕೃಷ್ಣ ಪಡ್ವೆಟ್ನಾಯ ದೀಪ ಬೆಳಗಿಸಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವರ ಪ್ರಸಾದ ನೀಡಿ ಶುಭ ಹಾರೈಸಿದರು.

ಸಭಾ ಕಾರ್ಯಕ್ರಮವನ್ನು ಬೆಳ್ತಂಗಡಿ ಪ್ರಸನ್ನ ಎಜ್ಯುಕೇಶನ್ ಟ್ರಸ್ಟ್ ಹಾಗೂ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಕೆ. ಗಂಗಾಧರ ಗೌಡ ಉದ್ಘಾಟಿಸಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಗೂ ನಗುಮೊಗದ ಸೇವೆಯನ್ನು ನೀಡಿ ಹತ್ತಾರು ಸಂಸ್ಥೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ದಿಶಾ ಫುಡ್ ಕಾರ್ನರ್ ನ ಮಾಲಕರಾದ ಅರುಣ್ ಕುಮಾರ್, ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಂಜನ್ ಜಿ. ಗೌಡ, ಉಜಿರೆ ಪ್ರಾ. ಕೃ. ಪ. ಸ.ಸಂಘದ ಅಧ್ಯಕ್ಷ ಕೆ. ಬಾಲಕೃಷ್ಣ ಗೌಡ, ಎಸ್. ಪಿ. ಆಯಿಲ್ ಮಿಲ್ ನ ಮಾಲಕ ಶಿವಕಾಂತ್ ಗೌಡ, ಉಜಿರೆ ಗ್ರಾ. ಪಂಚಾಯತ್ ಸದಸ್ಯ ಬಾಲಕೃಷ್ಣ ಗೌಡ ಉಪಸ್ಥಿತರಿದ್ದರು.

ಸಂಸ್ಥೆಗೆ ನ್ಯಾಯವಾದಿ ಅನಂತ ಮೋಹನ ಮೂಡಣ್ಣಾಯ,ಒಕ್ಕಲಿಗ ಗೌಡರ ಜಿಲ್ಲಾ ಕೋಶಾಧಿಕಾರಿ ಸೂರಜ್ ವಳಂಬ್ರ, ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಟ್ರಸ್ಟಿಗಳಾದ ದಾಮೋದರ ಗೌಡ ಸುರುಳಿ, ಜಯಂತ ಗೌಡ ಗುರಿಪಳ್ಳ, ದಿನೇಶ್ ಗೌಡ ಕೊಯ್ಯೂರು,ಸುರೇಶ್ ಗೌಡ ಕೌಡಂಗೆ, ನಿರ್ದೇಶಕರು ವಾಣಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೆಳ್ತಂಗಡಿ,ಪ್ರವೀಣ್ ಫೆರ್ನಾಂಡಿಸ್ ಮಾಲಕರು ಹಳ್ಳಿಮನೆ ಉಜಿರೆ ಮೊದಲಾದವರು ಭಾಗವಹಿಸಿದ್ದರು.

ಸಂಸ್ಥೆಗೆ ಆಗಮಿಸಿದ ಅತಿಥಿ ಗಣ್ಯರನ್ನು ಮಾಲಕರಾದ ಶ್ರೀಮತಿ ಮನ್ವಿತಾ ಮತ್ತು ಹೇಮಂತ್ ಗೌಡ ದಂಪತಿ ಸ್ವಾಗತಿಸಿ ಗೌರವಿಸಿದರು.

ಕಾರ್ಯಕ್ರಮವನ್ನು ನಿತಿನ್ ಸುರುಳಿ ನಿರೂಪಿಸಿ,ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಾಧಿಕಾರಿ ದಿನೇಶ್ ಗೌಡ ಕೆ.ವಂದಿಸಿದರು.

Related posts

ದೇಹದಾನ ನೋಂದಣಿ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾದ ವಸಂತ ಪೂಜಾರಿ ಮತ್ತು ಸುಶೀಲ ಹೆಗ್ಡೆ

Suddi Udaya

ಉಜಿರೆ: ಶಾಲಾ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಒರಿಂಟೇಷನ್ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ, ಇದರ ನೂತನ ಅಧ್ಯಕ್ಷರಾಗಿ ಮಿತ್ತಬಾಗಿಲು ಕಕ್ಕೆನೇಜಿ ಶಿವಾನಂದ ರಾವ್ ಆಯ್ಕೆ

Suddi Udaya

ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ : ರೂ.111 ಕೋಟಿ ವ್ಯವಹಾರ, ರೂ.24 ಲಕ್ಷ ಲಾಭ,

Suddi Udaya

ಬೆಳ್ತಂಗಡಿ ಹಯಾತುಲ್ ಇಸ್ಲಾಂ ಸೆಕೆಂಡರಿ ಮದ್ರಸದಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya
error: Content is protected !!