March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ ನಿಂದ ರಸ್ತೆ ಸಪ್ತಾಹ ಅಂಗವಾಗಿ ಜಾಗೃತಿ ಕಾರ್ಯಕ್ರಮ

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ , ಕಬ್ ಬುಲ್ ಬುಲ್ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳಿಂದ ರಸ್ತೆ ಸಪ್ತಾಹದ ಅಂಗವಾಗಿ , ವೇಗ ನಿಯಂತ್ರಣ, ಅಪಘಾತ ತಡೆಗಟ್ಟುವಿಕೆ ,ರಸ್ತೆ ಸುರಕ್ಷತೆಯ ಮಾಹಿತಿ ಕಾರ್ಯಗಾರವು ನಡೆಯಿತು.

ವಾಹನ ಚಲಾಯಿಸಲು ವಯಸ್ಸಿನ ಮಿತಿ, ಹಾಗೂ ಯಾವೆಲ್ಲ ದಾಖಲೆಗಳನ್ನು ವಾಹನ ಸವಾರರು ಹೊಂದಿರಬೇಕು. ಎಂಬುದರ ಬಗ್ಗೆ ಕಿಶೋರ್ ಪಿ ಸಬ್ ಇನ್ಸ್ಪೆಕ್ಟರ್ ಸಂಚಾರಿ ಪೋಲಿಸ್ ಠಾಣೆ ಬೆಳ್ತಂಗಡಿ ಮಾಹಿತಿ ನೀಡಿದರು. ಅಲ್ಲದೆ ಬೆಳ್ತಂಗಡಿ ನಗರಗಳಲ್ಲಿ ಜಾಥದ ಮೂಲಕ ಘೋಷಣೆಗಳೊಂದಿಗೆ ಸಂಚರಿಸುತ್ತ ನಾಗರಿಕರಿಗೆ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಹೇಮಲತಾ ಎಮ್ ಆರ್ ಉಪಸ್ಥಿತರಿದ್ದರು. ಭಾರತ್ ಸ್ಕೌಟ್ ಮತ್ತು ಗೈಡ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರಮೀಳಾ ಪೂಜಾರಿ ಕಾರ್ಯಕ್ರಮ ಸಂಘಟಿಸಿ ಸ್ವಾಗತಿಸಿ ವಂದಿಸಿದರು. ಸ್ಕೌಟ್ಸ್ ಶಿಕ್ಷಕಿಯರಾದ ಕಾರುಣ್ಯ ,ಪ್ರಮೀಳ ಎನ್, ಮಂಜುನಾಥ್, ಜಯರಾಮ್, ನೀತಾ ಕೆ ಎಸ್, ಜಯಲಕ್ಷ್ಮಿ, ಅಮಿತಾ, ಸೌಮ್ಯ ಪಿ, ಮೋಹಿನಿ, ಪುಷ್ಪಲತಾ ಗೀತಾ ಪಿ ರವರ ಸಹಕಾರದೊಂದಿಗೆ ಕಾರ್ಯಕ್ರಮವು ಯಶಸ್ವಿಗೊಂಡಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಬ್ ಬುಲ್ ಬುಲ್ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸಂಪೂರ್ಣ ಸಹಕಾರವನ್ನು ನೀಡಿದರು.

Related posts

ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್: ಉಜಿರೆ ಎಸ್ ಡಿ ಎಮ್ ಶಾಲಾ ವಿದ್ಯಾರ್ಥಿ ಕ್ಷಿತಿಜ್ ಶೆಟ್ಟಿ ಕುಮಿಟೆ ಹಾಗು ಕಟಾ ವಿಭಾಗದಲ್ಲಿ ಬೆಳ್ಳಿ ಪದಕ

Suddi Udaya

ಸುಳ್ಯ ಶಾಸಕಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ : ಬೆಳ್ತಂಗಡಿ ಠಾಣೆಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾದಿಂದ ದೂರು ದಾಖಲು

Suddi Udaya

ಫೆ.4: ನಮ್ಮೂರ ಕನ್ನಡ ಶಾಲೆ ನಮ್ಮ ಹೆಮ್ಮೆ “ಸೇವಾಯಜ್ಞ”

Suddi Udaya

ಮುಂಡಾಜೆ ಸೋಮಂತಡ್ಕದಲ್ಲಿ ಕಾಂಗ್ರೆಸ್ ಪ್ರಚಾರ ಸಭೆ

Suddi Udaya

ಬೆಳ್ತಂಗಡಿ ತಾಲೂಕು ಆಡಳಿತ ಸೌಧಕ್ಕೆ ದ.ಕ.ಜಿಲ್ಲಾಧಿಕಾರಿ ಮುಲೈ ಮುಹಿಲನ್ ಧಿಡೀರ್ ಭೇಟಿ

Suddi Udaya

ಮುಂಡಾಜೆ ಕ್ರೈಸ್ಟ್ ಅಕಾಡೆಮಿಯಲ್ಲಿ ಆರೋಗ್ಯ ತಪಾಸಣೆ ಮತ್ತು ಪ್ರಥಮ ಚಿಕಿತ್ಸಾ ತರಬೇತಿ ಶಿಬಿರ

Suddi Udaya
error: Content is protected !!