March 7, 2026
Uncategorized

ಅರೆಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನಕ್ಕೆ ಸುಮಂತ್ ಕುಮಾರ್ ಜೈನ್ ಹಾಗೂ ಆನಂದ ಶೆಟ್ಟಿ ವಾತ್ಸಲ್ಯ ನೀಡಿದ ನಂದಾ ದೀಪ ಅರ್ಪಣೆ: ಜಾತ್ರೋತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ

ಗುರುವಾಯನಕೆರೆ: ಕಾರಣಿಕಾ ಕ್ಷೇತ್ರ ಅರೆಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನಕ್ಕೆ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಹಾಗೂ ನಿವೃತ್ತ ಸರಕಾರಿ ಅಧಿಕಾರಿ ಆನಂದ ಶೆಟ್ಟಿ ವಾತ್ಸಲ್ಯ ಅವರು ಸೇವಾ ರೂಪದಲ್ಲಿ ನೀಡಿದ ನಂದಾ ದೀಪಗಳನ್ನು ದೈವಕ್ಕೆ ಅರ್ಪಣೆ ಮತ್ತು ದೀಪ ಪ್ರಜ್ವಲನೆ ಕ್ಷೇತ್ರದ ತಂತ್ರಿಗಳು ಮತ್ತು ಅರ್ಚಕರ ಉಪಸ್ಥಿತಿಯಲ್ಲಿ ಜ.೧೪ರಂದು ಮಕರ ಸಂಕ್ರಮಣದ ಪುಣ್ಯ ದಿನದಂದು ನಡೆಯಿತು.

ಈ ಸಂದರ್ಭದಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ವಾರ್ಷಿಕ ಜಾತ್ರೋತ್ಸವದ ಆಮಂತ್ರ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಈ ವೇಳೆ ವೇದಮೂರ್ತಿ ಗೋಪಾಲಕೃಷ್ಣ ತಂತ್ರಿ ಮಡಂತ್ಯಾರ್ ಮತ್ತು ಕ್ಷೇತ್ರದ ಅರ್ಚಕರಾದ ರತ್ನಾಕರ ನೂರಿತ್ತಾಯ ಇವರನ್ನು ಅರಮಲೆಬೆಟ್ಟದ ಕ್ಷೇತ್ರದವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರರು ಸುಖೇಶ್ ಕುಮಾರ್ ಕಡಂಬು, ಸುನೀಶ್ ಕುಮಾರ್ ಜೈನ್, ಸನ್ಮತಿ ಜೈನ್, ಸುಮಂತ್ ಕುಮಾರ್ ಜೈನ್, ದೇವದಾಸ್ ಶೆಟ್ಟಿ ಬದ್ಯಾರ್, ಧರಣೇಂದ್ರ ಜೈನ್, ಪ್ರದೀಪ್ ಶೆಟ್ಟಿ ಪಾಡ್ಯಾರ್ ಮಜಲು, ಆನಂದ ಶೆಟ್ಟಿ ವಾತ್ಸಲ್ಯ, ಪುರಂದರ ಶೆಟ್ಟಿ ಪಾಡ್ಯಾರ್, ವಿಠ್ಠಲ್ ಶೆಟ್ಟಿ ಪಾಡ್ಯಾರ್, ಶೋಭಿತ್ ಜೈನ್, ಪ್ರದೀಪ್ ಶೆಟ್ಟಿ ವಾತ್ಸಲ್ಯ, ಸೀತಾರಾಮ ಶೆಟ್ಟಿ ವೈಭವ್ ಹಾರ್ಡ್ವೇರ್, ಪ್ರೇಮ್ ಶೆಟ್ಟಿ ಅನುಗ್ರಹ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.

Related posts

ಕಡಿರುದ್ಯಾವರ ಸಿರಿಬೈಲು ಮುತ್ತಲಕೋಡಿ ಪರಿಸರದಲ್ಲಿಕಂಡು ಬಂದ ಕಾಡಾನೆ

Suddi Udaya

ಮುಂಡಾಜೆ ವಿನೋದ್ ಖಾಡಿಲ್ಕರ್ ನಿಧನ

Suddi Udaya

ತಣ್ಣೀರುಪಂತ ಪ್ಯಾಕ್ಸ್ ಆಡಳಿತ ಮಂಡಳಿಗೆ ನಡೆದ ಚುನಾವಣೆ; ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಬಿಜೆಪಿ ಕಾರ್ಯಕರ್ತರಿಗೆ – ಮತದಾರರಿಗೆ ಅಭಿನಂದನಾ ಕಾರ್ಯಕ್ರಮ ಸಹಕಾರ ಭಾರತಿ ಅಧಿಕಾರದ ಚುಕ್ಕಾಣಿ ಹಿಡಿದು ಇತಿಹಾಸ ಸೃಷ್ಟಿಸಿದೆ – ಹರೀಶ್ ಪೂಂಜ

Suddi Udaya

ಚಾರ್ಮಾಡಿಯಲ್ಲಿ ಕಾಡುಪ್ರಾಣಿ ಬೇಟೆ: ಬೆಳ್ತಂಗಡಿ ಅರಣ್ಯಾಧಿಕಾರಿಗಳ ತಂಡ ದಾಳಿ

Suddi Udaya

ಕರ್ನಾಟಕ ಬ್ಯಾಂಕ್ ವತಿಯಿಂದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗೆ ಬಸ್ಸು ಕೊಡುಗೆ

Suddi Udaya

ಬೆಳ್ತಂಗಡಿ: ಅಪ್ಸರಾ ಫ್ಯಾಶನ್ ಸೆಂಟರ್ ಹಾಗೂ ಮಿಷ್‌ಮಷ್ ಫ್ಯಾನ್ಸಿ & ಗಿಫ್ಟ್ ಸೆಂಟರಿನಲ್ಲಿ ಕ್ರಿಸ್ ಮಸ್ ಮತ್ತು ಹೊಸ ವರುಷದ ಪ್ರಯುಕ್ತ ಸ್ಪೆಷಲ್ ಆಫರ್: ಪ್ರತಿ ಖರೀದಿಯ ಮೇಲೆ ಶೇ.20 ಡಿಸ್ಕೌಂಟ್

Suddi Udaya
error: Content is protected !!